ಸೋಮವಾರಪೇಟೆ, ಆ. ೧೫: ನಮ್ಮ ಸ್ವಾತಂತ್ರö್ಯದಿAದ ಮತ್ತೊಬ್ಬರ ಸ್ವಾತಂತ್ರö್ಯಕ್ಕೆ ಧಕ್ಕೆಯಾಗದಂತೆ ದೇಶದ ಪ್ರತಿಯೋರ್ವ ಪ್ರಜೆಯೂ ಎಚ್ಚರಿಕೆ ವಹಿಸಬೇಕೆಂದು ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಕರೆ ನೀಡಿದರು.
ತಾಲೂಕು ಆಡಳಿತ, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರೊö್ಯÃತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಅಮೃತ ಮಹೋತ್ಸವದ ಸಂದೇಶ ನೀಡಿದರು.
ಸ್ವಾತಂತ್ರö್ಯ ಹೋರಾಟದಲ್ಲಿ ಲಕ್ಷಾಂತರ ಮಂದಿ ತಮ್ಮ ಪ್ರಾಣಾರ್ಪಣೆ ಮಾಡಿದ್ದು, ಅವರೆಲ್ಲರ ತ್ಯಾಗ ಬಲಿದಾನವನ್ನು ಸ್ಮರಿಸಿಕೊಳ್ಳ ಬೇಕಿದೆ. ಗಾಂಧೀಜಿ ಅವರ ನೇತೃತ್ವ ದಲ್ಲಿ ರೂಪುಗೊಂಡ ಚಳುವಳಿ ಯಿಂದಾಗಿ ದೇಶ ಸ್ವತಂತ್ರವಾಗಿದೆ. ನಮ್ಮ ಸ್ವಾತಂತ್ರö್ಯದಿAದ ಮತ್ತೊಬ್ಬರ ಸ್ವಾತಂತ್ರö್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಇAದು ಭಾರತವು ಪ್ರಪಂಚದಲ್ಲಿಯೇ ಉನ್ನತ ಸ್ಥಾನಮಾನ ಪಡೆಯುವ ಹಂತದಲ್ಲಿದೆ. ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ದೇಶದ ರಕ್ಷಣಾ ವ್ಯವಸ್ಥೆ, ಶಿಕ್ಷಣ, ಸಾಹಿತ್ಯ, ಪರಮಾಣು, ಬಾಹ್ಯಾಕಾಶ, ಸಂಶೋಧನೆ, ವಿಜ್ಞಾನ, ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದಾಗ್ಯೂ ನಕ್ಸಲಿಸಂ, ಭ್ರಷ್ಟಾಚಾರ, ಹಿಂಸೆ, ಅಪರಾಧ, ಅನಕ್ಷರತೆಯ ವಿರುದ್ಧ ಹೋರಾಟ ಮಾಡಬೇಕಿರುವುದು ವಿಷಾದಕರ ಎಂದು ಅಭಿಪ್ರಾಯಿಸಿದರು.
ದೇಶದ ಸಮಸ್ಯೆಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇಲ್ಲವಾದರೆ ಸ್ವಾತಂತ್ರö್ಯ ಹೋರಾಟ ಗಾರರ ತ್ಯಾಗ ಬಲಿದಾನ ವ್ಯರ್ಥವಾ ಗಲಿದೆ ಎಂದು ಕಿವಿಮಾತು ನುಡಿದರು.
ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸದಸ್ಯ ಜೆ.ಸಿ. ಶೇಖರ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್. ಮಹೇಶ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಪ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್ ಅವರು ಸ್ವಾಗತಿಸಿದರು. ಕಾರ್ಯಕ್ರಮ ದಲ್ಲಿ ಮಾಜೀ ಸೈನಿಕ, ಗೋಣಿಮರೂರು ನಾಗವಾಲ ಗ್ರಾಮದ ನಿವಾಸಿ ಹವಾಲ್ದಾರ್ ಜಿ.ಎ. ನಂಜಪ್ಪ ಅವರನ್ನು ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಠಾಣಾಧಿಕಾರಿ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಧ್ವಜವಂದನೆ ನಡೆಯಿತು. ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಶಾಲಾ- ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಸಾರ್ವ ಜನಿಕರು, ಸರ್ಕಾರಿ ಇಲಾಖಾಧಿಕಾರಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.