ಸೋಮವಾರಪೇಟೆ, ಆ. ೧೫ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಡಿ.ಪಿ. ಧರ್ಮಪ್ಪ ಆಯ್ಕೆಯಾದರು.

ಇಲ್ಲಿನ ಸಮೂಹ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳ ಸಭೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್. ರತ್ನಕುಮಾರ್, ಕೋಶಾಧ್ಯಕ್ಷರಾಗಿ ಟಿ.ವಿ. ಶೈಲಾ, ರಾಜ್ಯ ಪರಿಷತ್ತು ಸದಸ್ಯರಾಗಿ ಕೆ.ಪಿ. ಜಯಕುಮಾರ್, ಗೌರವಾಧ್ಯಕ್ಷರಾಗಿ ಎಸ್.ಎನ್. ಪೂವಯ್ಯ, ಉಪಾಧ್ಯಕ್ಷರಾಗಿ ಯಶ್ವಂತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಎಮ್.ಎಲ್. ಶ್ರೀಕಾಂತ್, ಕ್ರೀಡಾ ಕಾರ್ಯದರ್ಶಿ ಯಾಗಿ ಎ.ಎಮ್. ಭರತ್ ಕುಮಾರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಬಿ.ಪಿ. ಸವಿತಾ, ಸಾಂಸ್ಕೃತಿಕ ಕಾರ್ಯದರ್ಶಿ ಸಿ.ಬಿ. ಭಾಗ್ಯಜ್ಯೋತಿ, ಲೆಕ್ಕ ಪರಿಶೋಧಕರು ಎನ್. ಪ್ರಕಾಶ್, ಸಹಕಾರ್ಯದರ್ಶಿಯಾಗಿ ಕೆ. ಬಸವರಾಜ್, ಮಹಿಳಾ ಕಾರ್ಯ ದರ್ಶಿಯಾಗಿ ಎಂ.ಪಿ. ಶಿವಕುಮಾರಿ, ಸಹ ಕಾರ್ಯದರ್ಶಿಯಾಗಿ ಎನ್.ಬಿ.ರಜಿನಿ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಶಿಕ್ಷಕರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸು ತ್ತಿದ್ದು, ಅವುಗಳ ಪರಿಹಾರಕ್ಕೆ ಸಂಘದ ಮೂಲಕ ಹೋರಾಟ ನಡೆಸಿ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಶಿಕ್ಷಕರು ಸಂಘಟಿತರಾಗಬೇಕು. ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ಅನಿವಾರ್ಯವಾಗಿದೆ ಎಂದ ಅವರು, ಶಿಕ್ಷಕರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಜಿಲ್ಲಾ ಸಮಿತಿ ಖಜಾಂಜಿ ಎ.ಸಿ.ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣ ನಿವೃತ್ತ ಅಧೀಕ್ಷಕ ವೆಂಕಟೇಶ್ ಉಪಸ್ಥಿತರಿದ್ದರು. ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ನಿರೂಪಿಸಿದರು.