*ಗೋಣಿಕೊಪ್ಪಲು, ಆ.೧೫: ರಾಷ್ಟçಧ್ವಜದೊಂದಿಗೆ ನಾವು ಭಾವನಾತ್ಮಕ ಸಂಬAಧ ಹೊಂದಿದ್ದೇವೆ. ರಾಷ್ಟçಧ್ವಜವು ರಾಷ್ಟಿçÃಯ ಭಾವೈಕ್ಯತೆ, ರಾಷ್ಟç ಪ್ರಗತಿ, ರಾಷ್ಟçದ ನಿರ್ಮಾಣ, ರಾಷ್ಟçಕ್ಕಾಗಿ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದ್ದು, ದೇಶದ ಮೂಲ ಸಮಸ್ಯೆಯಾಗಿರುವ ಬಡತನ ನಿವಾರಣೆ ಹಾಗೂ ಉತ್ತಮ ಜೀವನ ಬೇಕಾದರೆ ಶಿಕ್ಷಣವೊಂದೇ ಅಸ್ತç ಎಂದು ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಅವರು ಹೇಳಿದರು.
ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಸ್ವಾತಂತ್ರೊö್ಯÃತ್ಸವ ಪ್ರಯುಕ್ತ ತಾಲೂಕಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾರತ ದೇಶವು ಸ್ವಾತಂತ್ರö್ಯವನ್ನು ಪಡೆದು ಇಂದಿಗೆ ೭೫ ವರ್ಷಗಳು ಪೂರ್ಣವಾಗಿವೆೆ. ಭಾರತ ಸರ್ಕಾರ ಮತ್ತು ರಾಜ್ಯ ಸರಕಾರದ ಆಶಯದಂತೆ ಪ್ರತಿ ಮನೆಯ ಮೇಲೆ ರಾಷ್ಟç ಧ್ವಜವನ್ನು ಹಾರಿಸುವುದರ ಮೂಲಕ ಅತ್ಯಂತ ಸಂಭ್ರಮದಿAದ ನಾವುಗಳು ಅಮೃತ ಮಹೋತ್ಸವ ಆಚರಿಸಿದ್ದೇವೆ.
ಭಾರತವು ಬ್ರಿಟಿಷರಿಂದ ಸ್ವತಂತ್ರಗೊಳ್ಳಬೇಕಾದ ಹಾದಿಯಲ್ಲಿ ದೇಶದ ಮಾಹಾ ನಾಯಕರುಗಳಾದ ಮಹಾತ್ಮಗಾಂಧಿ, ಸರ್ದಾರ್ ವಲ್ಲಭ ಬಾಯಿ ಪಟೇಲ್, ಮೋತಿಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಡಾ. ಬಿ.ಆರ್. ಅಂಬೇಡ್ಕರ್, ಭಗತ್ ಸಿಂಗ್, ಬಾಲಗಂಗಾಧರ್ ತಿಲಕ್ ಮುಂತಾದ ಮಹಾ ನಾಯಕರುಗಳ ತ್ಯಾಗ ಬಲಿದಾನ ಹೋರಾಟದ ಸುದೀರ್ಘ ಇತಿಹಾಸವಿದೆ ಎಂದ ಅವರು, ೭೫ ವರ್ಷಗಳ ಸುಧೀರ್ಘ ಅವಧಿಯಲ್ಲಿ ರಾಷ್ಟç ನಿರ್ಮಾಣ ಕಾರ್ಯ ಸಾಕಾರಗೊಂಡಿದೆ. ಕೃಷಿ, ಕೈಗಾರಿಕೆ ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಗತಿ ಕಂಡಿದೆ. ಆದರೆ, ಬಡತನ, ನಿರುದ್ಯೋಗ ಅಸಮಾನತೆ, ಮಾತಾಂಧತೆ, ಸೃಜನ ಪಕ್ಷಪಾತ, ಪ್ರಾದೇಶಿಕತೆ, ಭಾಷಾಂಧತೆ, ಮಹಿಳೆಯರ ಶೋಷಣೆ, ಮೌಢ್ಯತೆ, ಜಾತಿಯತೆ, ಭಯೋತ್ಪಾದನೆ, ಜೀವಂತವಾಗಿದೆ. ಇಂತಹ ಸಮಸ್ಯೆಗಳಿಂದ ಬಿಡುಗಡೆ ಹೊಂದಿದಾಗ ಭಾರತವು ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಮತ್ತಷ್ಟು ಪ್ರಜ್ವಲಿಸಲು ಸಾಧ್ಯವಾಗುತ್ತದೆ.
ಸ್ವಾತಂತ್ರö್ಯ,ಸಮಾನತೆ ಮತ್ತು ಸೋದರತೆ ಇವುಗಳನ್ನು ಸಾಧಿಸಿದಾಗ ಮಾತ್ರ ಪ್ರಜಾಪ್ರಭುತ್ವ ಸ್ವಾತಂತ್ರö್ಯಕ್ಕೆ ಮೆರಗು ನೀಡಲು ಸಾಧ್ಯ. ಬಡತನ ನಿವಾರಣೆ, ಜೀವನ ಪ್ರಗತಿಗೆ ಶಿಕ್ಷಣವೇ ಅಸ್ತç, ಆತ್ಮಸ್ಥೆöÊರ್ಯ ಶಿಸ್ತು, ಸಂಯಮದಿAದ ವಿದ್ಯಾರ್ಥಿಗಳು ಅದನ್ನು ಸಾಧಿಸಬೇಕಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು ನಗರದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಶಾಲಾ ವಿದ್ಯಾರ್ಥಿಗಳು, ನೃತ್ಯ ಪ್ರದರ್ಶನ ನೀಡಿದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕೆÀ್ಷ ಗಿರಿಜ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕೆÀ್ಷ ಬೊಟ್ಟಂಗಡ ದಶಮಿ, ಅಕ್ರಮ ಸಕ್ರಮ ಸಮಿತಿಯ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಮೇಶ್, ಉಪ ಪ್ರಾಂಶುಪಾಲ ಚಂಗಪ್ಪ, ತಾಲೂಕು ಮಟ್ಟದ ಅಧಿಕಾರಿಗಳಾದ ಡಾ.ಯತಿರಾಜ್, ಗುರುಶಾಂತಪ್ಪ, ಡಾ.ಶಾಂತೇಶ್, ಮುಂತಾದವರು ಹಾಜರಿದ್ದರು. ಆಂದ್ರಿತ ಸ್ವಾಗತಿಸಿ ರಮೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ನಾಗರಿಕ ವೇಧಿಕೆಯ ಪದಾಧಿಕಾರಿಗಳು, ಇತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಶಿಕ್ಷಕವೃಂದ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.