*ಗೋಣಿಕೊಪ್ಪ, ಆ. ೧೪: ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವ ಹಿನ್ನೆಲೆ ತಿತಿಮತಿ ಪಟ್ಟಣದಲ್ಲಿ ತಾಲೂಕು ಬಿಜೆಪಿ ಮಂಡಲ ಎಸ್.ಸಿ. ಮೋರ್ಚಾ ಆಯೋಜನೆಯಲ್ಲಿ ತಿರಂಗ ಯಾತ್ರೆ ನಡೆಸಲಾಯಿತು.

ಪಟ್ಟಣದ ಗಣಪತಿ ದೇವಸ್ಥಾನ ದಿಂದ ಬಾಳೆಲೆ ರಸ್ತೆ ತಿರುವಿನವರೆಗೆ ಬೀದಿಯ ಉದ್ದಕ್ಕೂ ೨೦೦ ಮೀ. ಉದ್ದದ ರಾಷ್ಟç ಧ್ವಜ ಹಿಡಿದು ತಿರಂಗ ಯಾತ್ರೆ ನಡೆಸಲಾಯಿತು.

ಎಸ್.ಸಿ. ಮೋರ್ಚಾ ಅಧ್ಯಕ್ಷ ಶಶಿ ಮುಂದಾಳತ್ವದಲ್ಲಿ ನಡೆದ ತಿರಂಗ ಯಾತ್ರೆ ಪ್ರಾರಂಭಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಭಾರತಾಂಭೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.

ನಂತರ ತಿರಂಗ ಹಿಡಿದು ಸುಮಾರು ೩ ಕಿ.ಮೀ ವರೆಗೆ ಪಾದಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಗ್ರಾಮಸ್ಥರು, ವಿದ್ಯಾರ್ಥಿಗಳೊಂದಿಗೆ ಶಾಸಕರು ಪಾಲ್ಗೊಂಡರು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಮಾಜಿ ಸೈನಿಕ ಕೊಟ್ಟುಕತ್ತಿರ ಸೋಮಯ್ಯ ಮಾತನಾಡಿ, ರೈತ ಅಭಿವೃದ್ಧಿ ಹೊಂದಿದಾಗ ದೇಶ ಉನ್ನತೀಕರಣ ಹೊಂದಲು ಸಾಧ್ಯವಿದೆ ಎಂದರು.

ತಾಲೂಕು ಎಸ್.ಸಿ. ಮೋರ್ಚಾ ಅಧ್ಯಕ್ಷ ಶಶಿ, ಪ್ರಧಾನ ಕಾರ್ಯದರ್ಶಿ ಗಳಾದ ಜ್ಯೋತಿ, ಸುಶೀಲಾ, ಪದಾಧಿಕಾರಿಗಳಾದ ವಿನು, ಚಂದ್ರು, ದೊರೆ, ಪ್ರಸಾದ್, ಸೀನ, ತಾಲೂಕು ಬಗರ್ ಹುಕುಂ ಜಾಗೃತಿ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಜಿಲ್ಲಾ ದಿಶಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಕೀಮ್, ತಿತಿಮತಿ ಶಕ್ತಿ ಕೇಂದ್ರದ ಪ್ರಮುಖ್ ಅನೂಪ್‌ಕುಮಾರ್, ಒಬಿಸಿ ಘಟಕ ತಾಲೂಕು ಅಧ್ಯಕ್ಷ ರಾಜೇಶ್ ಕೆ, ಉಪಾಧ್ಯಕ್ಷ ಬಿ.ಎನ್. ಪ್ರಕಾಶ್, ತಿತಿಮತಿ ಗ್ರಾ.ಪಂ. ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ವಿಜಯ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಚೆಪುö್ಪಡೀರ ರಾಮಕೃಷ್ಣ, ಪ್ರಮುಖರಾದ ಚೆಪುö್ಪಡೀರ ಮಾಚು, ದೇವರಪುರ ಶಕ್ತಿಕೇಂದ್ರ ಪ್ರಮುಖ್ ಮನೆಯಪಂಡ ಮಹೇಶ್ ಸೇರಿದಂತೆ ವಿವಿಧ ಮೋರ್ಚಾ ಅಧ್ಯಕ್ಷರು, ಗ್ರಾ.ಪಂ. ಸದಸ್ಯರುಗಳು, ವಿದ್ಯಾರ್ಥಿ ಗಳು, ಕಾರ್ಯಕರ್ತರು ಹಾಜರಿದ್ದರು.

ಕಾಡುಮಕ್ಕಳ ಜೋಪಡಿಗಳ ಮೇಲೆಯೂ ತ್ರಿವರ್ಣ ಧ್ವಜ

ಗೋಣಿಕೊಪ್ಪ: ನಿಟ್ಟೂರು ಗ್ರಾಮ ಕುಂಬಾರಕಟ್ಟೆ ಗಿರಿಜನ ಹಾಡಿಯಲ್ಲಿ ವನವಾಸಿ ಕಲ್ಯಾಣ ಕೊಡಗು ಮತ್ತು ನಿಟ್ಟೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ‘ಹರ್ ಘರ್ ತಿರಂಗಾ’ ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದಡಿಯಲ್ಲಿ ಹಾಡಿವಾಸಿಗಳ ೨೭ ಮನೆಗಳಲ್ಲಿ ದ್ವಜವನ್ನು ಹಾರಿಸಿ ಸಂಭ್ರಮಿಸಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಚಕ್ಕೇರ ಸೂರ್ಯ ಅಯ್ಯಪ್ಪ, ವನವಾಸಿ ಕಲ್ಯಾಣ ಕಾರ್ಯದರ್ಶಿ ಪಡಿಞರಂಡ ಪ್ರಭು, ಹಾಡಿ ಪ್ರಮುಖರಾದ ಅಪ್ಪಣ್ಣ, ದೇವಪ್ಪ, ಗಣೇಶ ಗ್ರಾಮಸ್ಥರಾದ ಕೊಟ್ಟಂಗಡ ಮಧು, ಮುಕ್ಕಾಟಿರ ತೇಜ, ನಿಶ್ಚಲ್, ಪೊನ್ನಿಮಾಡ ರೋಹನ್, ಮಿಥುನ್ ಸುಧೀಶ್ ಹಾಗೂ ಅನಿಲ್ ಇದ್ದರು.