ಮಡಿಕೇರಿ, ಆ. ೧೫: ಕೊಡಗಿನವರಾದ ದೇಶದ ಸ್ಕಾ÷್ವಷ್ ಕ್ರೀಡಾತಾರೆ ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರಿಗೆ ಭವಿಷ್ಯದ ಕ್ರೀಡಾಸ್ಪರ್ಧೆಗಳಿಗಾಗಿ ಉತ್ತೇಜನಕಾರಿ ಮಾತುಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ‘ಜೋಷ್’ ತುಂಬಿದರು.

ಕಾಮನ್‌ವೆಲ್ತ್ ಕ್ರೀಡಾಪಟುಗಳಿಗೆ ಪ್ರಧಾನಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಹಾಗೂ ಜೋಶ್ನಾ ಅವರ ನಡುವಿನ ಮಾತುಕತೆಯ ಸಂದರ್ಭ ಮೋದಿ ಅವರು ಫೀ.ಮಾ. ಕಾರ್ಯಪ್ಪ ಅವರನ್ನೂ ಉಲ್ಲೇಖಿಸಿದ್ದು, ವಿಶೇಷವಾಗಿತ್ತು. ‘ಜೋಶ್ನಾ ನಮಸ್ತೆ... ನೀವು ಕಾರ್ಯಪ್ಪ ಪರಿವಾರದವರಾಗಿದ್ದೀರ... ದೇಶ ಹೆಮ್ಮೆ ಪಡುವುದು ಸ್ವಾಭಾವಿಕ... ಪರಂಪರಾಗತವಾದ ಈ ಗಾಳಿ ರಕ್ತಗತವಾಗಿ ನಿಮಗೆ ಬಂದಿದೆ’

ಎಂದು ಪ್ರಧಾನಿಗಳು ಮಾತು ಆರಂಭಿಸಿದರು.

(ಮೊದಲ ಪುಟದಿಂದ) ಇದಕ್ಕೆ ಪ್ರತಿಕ್ರಿಯಿಸಿದ ಜೋಶ್ನಾ ನಾನು ಸೇನಾ ಕುಟುಂಬಕ್ಕೆ ಸೇರಿದ್ದು, ಹೆಮ್ಮೆ ಎನಿಸುತ್ತದೆ. ಕಾರ್ಯಪ್ಪ ಅವರು ಪ್ರೇರಣೀಯರು. ಬಾಲ್ಯದಲ್ಲಿ ಅವರನ್ನು ಭೇಟಿಯಾದಾಗ ಅವರಲ್ಲಿ ಚಾಕೋಲೇಟ್ ಇರುತ್ತಿತ್ತು. ಆದರೆ ಅದನ್ನು ಪಡೆಯಲು ರಾಷ್ಟçಗೀತೆ ಹಾಡಲು ಹೇಳುತ್ತಿದ್ದರು. ಕಾರ್ಯಪ್ಪ ಅವರು ದೇಶಪ್ರೇಮದೊಂದಿಗೆ ನನಗೆ ತುಂಬಾ ಪ್ರೇರಣೆ ನೀಡಿರುವುದಾಗಿ ಹೇಳಿದರು. ಜೋಶ್ನಾರ ಜೋಡಿ ದೀಪಿಕಾ ಪಳ್ಳಿಕಲ್ ಜತೆಗಿನ ಸ್ನೇಹಾಚಾರ, ಪ್ರತಿಸ್ಪರ್ಧೆ ಹಾಗೂ ಇಬ್ಬರೂ ಡಬಲ್ಸ್ನಲ್ಲಿ ದೇಶದ ಪರ ಆಡುವ ಬಾಂಧವ್ಯ ಕುರಿತು ಮೋದಿ ಅವರು ಪ್ರಶ್ನಿಸಿದರು. ದೇಶದೊಳಗೆ ತಾವು ಪ್ರತಿಸ್ಪರ್ಧೆ ಮಾಡಿದರೂ ಭಾರತದ ಜರ್ಸಿ ಧರಿಸಿ ದೇಶದ ಪರ ಒಟ್ಟಿಗೆ ಆಡುವಾಗ ಭಾರತದ ಪರ ಉತ್ತಮವಾಗಿ ಆಡಿ ಪದಕ ಗಳಿಸಲು ದೀಪಿಕಾ ಕೂಡ ಪ್ರೇರಣೆ ನೀಡುತ್ತಿದ್ದುದಾಗಿ ಸ್ಮರಿಸಿದರು. ಇಬ್ಬರಿಂದಲೂ ಪರಸ್ಪರ ನೆರವಾಗಿರುವುದಾಗಿ ಆಕೆ ಹೇಳಿದರು.

ಆಟದಲ್ಲಿನ ತಮ್ಮ ‘ಜೋಷ್’ ಇದೇ ರೀತಿ ಮುಂದುವರಿಯಲಿ, ಯುವ ಪೀಳಿಗೆಗೂ ಇದು ಪ್ರೇರಣೆ ಮೂಡಿಸಲಿ ಎಂದು ಆಶಿಸಿದ ಮೋದಿ ಅವರು ಭವಿಷ್ಯಕ್ಕೆ ಶುಭ ಹಾರೈಸಿದರು. ಕಾಮನ್‌ವೆಲ್ತ್ನಲ್ಲಿ ಪದಕಗಳಿಸಿದ ಕೆಲವರಿಗಷ್ಟೇ ಮಾತನಾಡುವ ಅವಕಾಶವಿತ್ತು. ಆದರೆ, ಜೋಶ್ನಾ ಈ ಪದಕ ಗಳಿಸದಿದ್ದರೂ ಪ್ರಧಾನಿಗಳು ಇವರೊಂದಿಗೆ ಸಂವಾದ ನಡೆಸಿದ್ದು, ವಿಶೇಷವಾಗಿತ್ತು.