ವೀರಾಜಪೇಟೆ, ಆ. ೧೫: ಕೊಡಗಿನ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಕೊಡವರು ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ನÀಮ್ಮ ಮಕ್ಕಳಿಗೂ ಕೊಡವ ಸಂಸ್ಕೃತಿಯನ್ನು ಕಲಿಸುವಂತಾಗಬೇಕು ಎಂದು ಯುಕೋ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹೇಳಿದರು.
ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಶನಿವಾರ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ವೀರಾಜಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೊಡಗು ಪುಣ್ಯ ಮತ್ತು ತಪೋ ಭೂಮಿ, ಈ ಪವಿತ್ರವಾದ ಭೂಮಿಯಲ್ಲಿ ಜನಿಸಿದ ನಾವುಗಳು ಪುಣ್ಯವಂತರು. ದೇಶದ ಎಲ್ಲೆಡೆ ಕೊಡವ ಜನಾಂಗದವರಿದ್ದು ಕೊಡಗಿನಲ್ಲಿ ನಮ್ಮ ಹಿರಿಯರು ಉಳಿಸಿ ಬೆಳೆಸಿರುವ ಐನ್‌ಮನೆಗೆ ಮಹತ್ವ ನೀಡುವ ಮೂಲಕ ನಮ್ಮ ಮಕ್ಕಳಿಗೆ ವಿದ್ಯೆಯೊಂದಿಗೆ ಕೊಡವ ಸಂಸ್ಕೃತಿಯನ್ನು ಕಲಿಸಬೇಕು. ಹಾಗೂ ಕೊಡವ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಕೊಡವ ಉಡುಪು ಧರಿಸುವುದು ಉತ್ತಮ. ಒಗ್ಗಟ್ಟಿನಿಂದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವೀರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೆರ ಮನು ಕುಮಾರ್ ಮಾತನಾಡಿ ಕೊಡವ ಜನಾಂಗದ ಯುವಕರು ನಗರಗಳತ್ತ ಮುಖಮಾಡುತ್ತಿದ್ದಾರೆ. ಇತ್ತೀಚೆಗೆ ಕೊಡಗಿನಲ್ಲಿ ಕಲಿಯುವಂತಹ ಎಲ್ಲಾ ಶಾಲಾ ಕಾಲೇಜುಗಳಿದ್ದು ಯುವಕರು ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿಯೇ ಇದ್ದು ತಮ್ಮ ಪ್ರತಿಭೆಗಳನ್ನು ಹೆಚ್ಚಿಸುವಂತಾಗಬೇಕು ಎಂದರು.
ಕೊಡವ ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಮಾತನಾಡಿ ಕೊಡವರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಕೊಡಗಿನಲ್ಲಿಯೇ ಕಲಿಸುವ ಮೂಲಕ ನಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ ಎಂದರು
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಡವ ಪೊಮ್ಮಕ್ಕಡ ಕೂಟ ನಾಲ್ಕು ವರ್ಷಗಳ ಹಿಂದೆ ಪ್ರಾರಂಭಗೊAಡು ಸುಮಾರು ೩೫೦ ಸದಸ್ಯರನ್ನು ಹೊಂದಿ ಎಲೆ ಮರೆಯ ಕಾಯಿಯಂತಿರುವ ಸದಸ್ಯರ ಪ್ರತಿಭೆಗಳನ್ನು ಹೊರ ಹೊಮ್ಮಲು ವೇದಿಕೆಯ ಅವಕಾಶವನ್ನು ನೀಡುತ್ತಿದ್ದು ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಕ್ಕೂಟ ಕೆಲಸಮಾಡುತ್ತಿದ್ದು ಮುಂದೆಯು ಉತ್ತಮ ಕಾರ್ಯಕ್ರಮಗಳನ್ನು ನಡೆಸುವುದಾಗಿ ಹೇಳಿದರು.
ಪೂಮಾಲೆ ಕೊಡವ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಮಾತನಾಡಿ ಕೊಡವ ಭಾಷೆಗೆ ಇತಿಹಾಸವಿದ್ದು ಅನಾಧಿಕಾಲದಿಂದಲು ಕೊಡವರು ಈ ಮಣ್ಣಿನಲ್ಲಿ ಬಾಳಿ ಬದುಕುತ್ತಿದ್ದು ಮುಂದೆಯು ಒಗ್ಗಟ್ಟಿನಿಂದ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಹಾಗೂ ಕೊಡವ ಸಮಾಜದ ಆಸ್ತಿಯನ್ನು ಕಾಪಾಡಿಕೊಂಡು ಸಮಾಜದ ೧೦೦ ನೇ ವರ್ಷಕ್ಕೆ ವಿದ್ಯೆಸಂಸ್ಥೆ ಕಟ್ಟಡ ನೆರವೇರಲಿ ಎಂದರು.
ವೇದಿಕೆಯಲ್ಲಿ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷರಾದ ಅಮ್ಮಣಿಚಂಡ ಈಶ್ವರಿ ಗಂಗಮ್ಮ, ಸಹಕಾರ್ಯದರ್ಶಿ ಮಾಳೆಟಿರ ಕವಿತಾ ಶ್ರೀನಿವಾಸ್, ಖಜಾಂಚಿ ತಾತಂಡ ಯಶು ಕಭೀರ್ ಸಲಹಾ ಸಮಿತಿಯ ಕುಪ್ಪಂಡ ಪುಷ್ಪ ಮುತ್ತಣ್ಣ, ನಾಯಕಂಡ ಬೇಬಿ ಚಿಣ್ಣಪ್ಪ ಇತರರು ಉಪಸ್ಥಿತರಿದ್ದರು.
ಸನ್ಮಾನ : ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡವ ಸಮಾಜದ ಅಧ್ಯಕ್ಷ ಕುಂಬೆರ ಮನುಕುಮಾರ್, ಸಮಾಜದ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಸ್ವಾಗತಿಸಿ ನಿರೂಪಿಸಿದರು, ತಾತಂಡ ಪ್ರಭಾ ನಾಣಯ್ಯ ವಂದಿಸಿದರು.
ಕೂಟದ ಕಾಳಕ್ಕ ತಂಡದಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಕೊಡವ ಸಮಾಜದ ಆಡಳಿತ ಮಂಡಳಿ ಮತ್ತು ಕೂಟದ ಸದಸ್ಯರು ಭಾಗವಹಿಸಿದ್ದರು.