ಕುಶಾಲನಗರ, ಆ. ೧೪: ಕುಶಾಲನಗರ ಸರ್ಕಾರಿ ಬಸ್ ನಿಲ್ದಾಣ ಆವರಣದಲ್ಲಿ ಅಸ್ವಸ್ತವಾಗಿ ಬಿದ್ದಿದ್ದ ಕೊಕ್ಕರೆಯೊಂದನ್ನು ಆರೈಕೆ ಮಾಡಿ ಕಾವೇರಿ ನಿಸರ್ಗಧಾಮಕ್ಕೆ ಸ್ಥಳಾಂತರಿಸಿ ಪಕ್ಷಿಯ ಜೀವ ಉಳಿಸಿದ ಮಾನವೀಯ ಕಾರ್ಯ ನಡೆಯಿತು.

ಕುಶಾಲನಗರ ಬಸ್ ನಿಲ್ದಾಣದ ಆವರಣದಲ್ಲಿ ನೂರಾರು ಸಂಖೈಯ ಪಕ್ಷಿಗಳು ಬೀಡುಬಿಟ್ಟಿದ್ದು, ಶನಿವಾರ ಮರದಿಂದ ಬಿದ್ದ ಪಕ್ಷಿಯನ್ನು ಕಂಡ ಸ್ಥಳೀಯ ಪರಿಸರ ಪ್ರೇಮಿಗಳು ಅದನ್ನು ಆರೈಕೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದೊಂದಿಗೆ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ಸ್ಥಳಾಂತರಿಸುವ ಮೂಲಕ ಮಾನವೀಯತೆ ಮೆರೆದರು.

-ಸಿಂಚು