ಚೆಟ್ಟಳ್ಳಿ, ಆ. ೧೫: ಮೈಸೂರಿನ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಷ್ಟಿçÃಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ‘ಶಿಪ್’ನಲ್ಲಿ ಕೊಡಗಿನ ಉಳುವಂಗಡ ಅಮಿತ್ ಬೋಪಣ್ಣ ಕಂಚಿನ ಪದಕ ಗೆದ್ದಿದ್ದಾರೆ. ಟಿ.ಶೆಟ್ಟಿಗೇರಿ ಗ್ರಾಮದ ಉಳುವಂಗಡ ಉದಯ ಮತ್ತು ಕಾವೇರಿ ದಂಪತಿಯ ಪುತ್ರ. ಚೆಪ್ಪುಡಿರ ಅರುಣ್ ಮಾಚಯ್ಯ ನೇತೃತ್ವದ ಝೆನ್ ಶಿಟೋರಿಯ ಕರಾಟೆ ಸ್ಕೂಲ್ ಇಂಡಿಯ ಕೊಡಗು ಶಾಖೆಯ ವಿದ್ಯಾರ್ಥಿಯಾದ ಇವರಿಗೆ ಕಳ್ಳಿಕಂಡ ಕಿಶೋರ್ ಮತ್ತು ಕೊಡಿಯಂಡ ಕಾರ್ತಿಕ್ ದೇವಯ್ಯ ತರಬೇತಿಯನ್ನು ನೀಡಿದ್ದಾರೆ.