ವೀರಾಜಪೇಟೆ, ಆ. ೧೫: ಹಲವು ಸಂಕಷ್ಟಗಳ ನಡುವೆ ಭಾರತ ದೇಶ ಇಂದು ಜಾಗತಿಕ ಮಟ್ಟದಲ್ಲಿ ಸ್ಥಾನಮಾನ ಪಡೆದುಕೊಂಡಿರುವುದು ಇಡೀ ದೇಶದ ಜನರು ಹೆಮ್ಮೆ ಪಡುವ ವಿಚಾರ ಎಂದು ವೀರಾಜಪೇಟೆ ತಹಶೀಲ್ದಾರ್ ಅರ್ಚನ ಭಟ್ ಹೇಳಿದರು.
ತಾಲೂಕು ಮೈದಾನದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವೀರಾಜಪೇಟೆ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರö್ಯಕ್ಕಾಗಿ ಕೊಡಗಿನಲ್ಲಿ ಸಹ ಹೋರಾಟ ನಡೆಸಿದ್ದಾರೆ. ಇಂದಿಗೂ ಕೂಡ ಅನೇಕರು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ. ಬ್ರಿಟಿಷರು ಅಂದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆದರು ಸಹ ದೇಶದ ಸಂಸ್ಕೃತಿಯನ್ನು ಕೊಳ್ಳೆ ಹೊಡೆಯಲು ಸಾಧ್ಯವಾಗಲಿಲ್ಲ. ಈ ದೇಶದ ರಾಜಕೀಯ ವ್ಯವಸ್ಥೆಗೆ ಮಾರಕವಾಗುವ ಸಂಚು ನಡೆಸಿದರು. ಭಾರತೀಯರ ಮನಸಿನ ಅಂತಸತ್ವವನ್ನು ಅಲ್ಲಾಡಿಸಲಾಗಲಿಲ್ಲ. ಸ್ವತಂತ್ರ ಬಂದ ನಂತರ ಜನರ ಒಳಿತಿಗಾಗಿ ದೇಶದಲ್ಲಿ, ಹಸಿರು ಕ್ರಾಂತಿ, ಬಿಳಿ ಕ್ರಾಂತಿ ನಡೆದರೆ ಕೊಡಗಿನಲ್ಲಿ ಜೇನು ಉತ್ಪಾದನೆಗೆ ಪ್ರೋತ್ಸಾಹದ ಮೂಲಕ ಸಿಹಿ ಕ್ರಾಂತಿ ಆರಂಭ ಗೊಂಡಿತು ಎಂದು ಸ್ಮರಿಸಿದರು.
ದೇಶದ ಅಭ್ಯುದಯಕ್ಕೆ ಆತ್ಮನಿರ್ಭರ ಆಂದೋಲನ ನಡೆಯು ತ್ತಿದೆ. ಇದರಿಂದ ಆಂತರಿಕವಾಗಿ ಭಾರತ ಸ್ವಾವಲಂಬಿಯಾಗುವ ಆಶಯ ಇದೆ. ಇದೇ ರೀತಿ ಸೇನೆಯಲ್ಲಿ ಸಹ ಆತ್ಮ ನಿರ್ಭರದ ಮೂಲಕ ಸೇನೆಗೆ ಆಧುನಿಕ ಯುದ್ಧ ಉಪಕರ, ವಿಮಾನಗಳೂ ತಯಾರಾಗುತ್ತಿವೆ. ಇದೇ ರೀತಿ ಭಾರತ ಮುಂದುವರಿದರೆ ಜಗತ್ತಿನ ಅಗ್ರಗಣ್ಯ ರಾಷ್ಟçವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಭಾರತ ದೇಶವೂ ಜಗತ್ತಿನಲ್ಲೇ ಅತ್ಯುತ್ತಮವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ. ಪ್ರಧಾನಿಯವರ ಮಾತಿನಂತೆ ‘ಆಜಾದಿ ಕಾ ಅಮೃತ್ ಮಹೋತ್ಸವ’, ‘ಹರ್ ಘರ್ ತಿರಂಗಾ’ ಅಭಿಯಾನ ಯಶಸ್ವಿಯಾಗಿ ನಡೆದಿದೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ವನಜಾಕ್ಷಿ, ಕ್ಷೇತ್ರ ಶಿಕ್ಷಣಧಿಕಾರಿ ಶ್ರೀ ಶೈಲಬೀಳಗಿ, ಡಿವೈಎಸ್ಪಿ ನಿರಂಜನ್ ರಾಜ್ ಅರಸ್, ಪೊಲೀಸ್ ವೃತ್ತನಿರೀಕ್ಷಕ ಶಿವರುದ್ರ, ಪ.ಪಂ. ಮುಖ್ಯಾಧಿಕಾರಿ ಚಂದ್ರಕುಮಾರ್ ಗ್ರೇಡ್ ಟು ತಹಶೀಲ್ದಾರ್ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ದೇಶದ ಸೇನೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಯೋಧರಾದ ಸುಬೇದಾರ್ ಮೇಜರ್ ಕುಟ್ಟಂಡ ಎಂ. ಅಪ್ಪಯ್ಯ, ಚೆಂದುವAಡ ಪೂಣಚ್ಚ, ಕುಂಬಾರ ಮುತ್ತಣ್ಣ ದೇವಯ್ಯ, ಪೂಳಂಡ ಎನ್. ಉತ್ತಯ್ಯ, ಉದಿಯಂಡ ಎಂ. ಪೊನ್ನಪ್ಪ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಈ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವೀರಾಜಪೇಟೆ ತಾಲೂಕು ಆಡಳಿತದಿಂದ ನಡೆದ ಸಮಾರಂಭ ಯಾವ ವಿಶೇಷತೆಯೂ ಇರಲಿಲ್ಲ. ಪ್ರತಿಬಾರಿ ನಡೆಯುತ್ತಿದ್ದ ಪೊಲೀಸ್ ಕವಾಯಿತು ಕೂಡಾ ಈ ಬಾರಿ ಇರಲಿಲ್ಲ ಹಾಗೂ ಕೋವಿಡ್ ಮುಂಚೆ ಇದ್ದ ಸಾಂಪ್ರದಾಯಿಕ ಕಾರ್ಯಕ್ರಮ ವಾಗಲಿ, ಶಾಲಾ ಮಕ್ಕಳ ಅನುಪಸ್ಥಿತಿ ಕಾಡುತ್ತಿತ್ತು. ವೇದಿಕೆ ಅಲಂಕಾರಕ್ಕೂ ಗಮನ ನೀಡಿರಲಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪವೂ ವ್ಯಕ್ತವಾಯಿತು.