ಮಡಿಕೇರಿ, ಆ. ೧೫: ಜಲಂಧರ್ ಇಎಂಇ ಹಾಕಿ ಟೀಂನ ನಿವೃತ್ತ ಹಾಕಿ ಪಟುಗಳ ಸಂತೋಷಕೂಟವು ವೀರಾಜಪೇಟೆಯ ಕೂರ್ಗ್ ಫೆವಿಲಿಯನ್ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ತಂಡವನ್ನು ಪ್ರತಿನಿಧಿಸಿದ್ದ ನಿವೃತ್ತ ಕೊಡಂದೇರ ಕುಶ ನಂಜಪ್ಪ ಅವರು ವಹಿಸಿದ್ದರು.

ಸಂತೋಷಕೂಟದಲ್ಲಿ ನಿವೃತ್ತ ಹಾಕಿ ಪಟುಗಳಾದ ಐತಿಚಂಡ ಕಾಶಿ ನಂಜಪ್ಪ, ಚೋಳಂಡ ಡಾಲು ಮುದ್ದಯ್ಯ, ನೆಲ್ಲಮಕ್ಕಡ ಕಾರ್ಯಪ್ಪ, ಪುಗ್ಗೆರ ಕಿಟ್ಟು, ಕ್ಯಾಲೇಟಿರ ಅಶೋಕ್, ಮಾದಂಡ ರವಿ ಪೆಮ್ಮಯ್ಯ, ಚೆಯ್ಯಂಡ ಲವ ಅಪ್ಪಚ್ಚು, ಬೊಳ್ತಜೀರ ಅಶೋಕ್, ಅರೆಯಡ ಚಿಣ್ಣಪ್ಪ, ಮಾರ್ಚಂಡ ಪ್ರಭು, ಚಂದಪAಡ ಆಕಾಶ್, ಅಲ್ಲಂಡ ವಾಸು, ಚೇಮೀರ ಬೆಳ್ಯಪ್ಪ ಹಾಜರಿದ್ದರು. ಐತಿಚಂಡ ಕಾಶಿ ನಂಜಪ್ಪ ಸ್ವಾಗತಿಸಿ, ವಂದಿಸಿದರು.