ಶನಿವಾರಸಂತೆ, ಆ. ೧೨ : ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಶೇಖರ್ ರಾಜೀನಾಮೆ ನೀಡಿದ ಹಿನ್ನೆಲೆ ಇಂದು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರ ಚುನಾವಣೆ ನಡೆದು ೨ನೇ ಅವಧಿಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ (ಮಹಿಳೆ) ಮೀಸಲಾಗಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯೆ ಫರ್ಜಾನ ಶಾಹಿದ್ ಖಾನ್ ನಾಮ ಪತ್ರ ಸಲ್ಲಿಸಿದ್ದರು.

ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಅಗಮಿಸಿದ ತಹಶೀಲ್ದಾರ್ ಗೋವಿಂದರಾಜ್ ಫರ್ಜಾನ ಶಾಹಿದ್ ಖಾನ್ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು

ಅಧ್ಯಕ್ಷರ ವಿಜಯೋತ್ಸವದ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡುತ್ತಾ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಎಲ್ಲಾ ಸದಸ್ಯರ ವಿಶ್ವಾಸ ತೆಗೆದುಕೊಂಡು ಅಭಿವೃದ್ದಿ ಕಾಪಡಬೇಕು ಎಂದರು. ನಗರ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ರಂಗಸ್ವಾಮಿ ಜಿಲ್ಲಾ ವಕ್ತಾರ ಸುರೇಶ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಪಿ.ಕೆ. ಗಂಗಾಧರ್ ಮಾತನಾಡಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸತೀಶ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಮಾಜಿ ತಾ.ಪಂ. ಕಾಂಗ್ರೆಸ್ ಉಪಾಧ್ಯಕ್ಷ ಎಂ.ಯು. ಮಹಮ್ಮದ್ ಪಾ಼ಷ ಇತರರು, ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಅದಿತ್ಯಗೌಡ, ಗೀತಾ ಹರೀಶ್, ಎಸ್. ಸಿ. ಶರತ್‌ಶೇಖರ್, ಎಸ್.ಎನ್. ರಘು, ಸರ್ದಾರ್ ಅಹ್ಮದ್, ಸರಸ್ವತಿ, ಕಾವೇರಿ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಜೆ. ಮೇದಪ್ಪ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.