ಮಡಿಕೇರಿ, ಆ. ೧೪ : ಕುಶಾಲನಗರ ತಾಲೂಕು ಪತ್ರಕರ್ತರ ಸಂಘ ರಚನೆ ಸಂಬAಧ ಕೊಡಗು ಪತ್ರಕರ್ತರ ಸಂಘ(ರಿ)ದ ಸಭೆ ಸುಂಟಿಕೊಪ್ಪದಲ್ಲಿ ಶನಿವಾರ ನಡೆಯಿತು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ನಡಪ್ರಭ ಜಿಲ್ಲಾ ವರದಿಗಾರರಾದ ವಿಘ್ನೇಶ್ ಎಂ. ಭೂತನಕಾಡು, ಸುಂಟಿಕೊಪ್ಪ ವರದಿಗಾರರಾದ ವಿನ್ಸೆಂಟ್ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಲೂಕು ಸಂಘದ ಗೌರವ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ಜಿಲ್ಲಾ ವರದಿಗಾರರಾದ ಕೆ.ತಿಮ್ಮಪ್ಪ, ಉಪಾಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಬಿ.ಸಿ. ದಿನೇಶ್ ಹಾಗೂ ಖಚಾಂಚಿಯಾಗಿ ವಿಶ್ವವಾಣಿ ಪತ್ರಿಕೆಯ ಕುಶಾಲನಗರ ವರದಿಗಾರರಾದ ಅಶ್ವತ್ಥ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೂತನ ತಾಲೂಕು ಸಮಿತಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಸೆ.೫ರಂದು ಜಿಲ್ಲಾ ಸಂಘದ ವತಿಯಿಂದ ಪತ್ರಿಕಾ ವಿತರಕರ ದಿನ ಆಚರಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್ ಮಾತನಾಡಿ, ಕೊಡಗು ಪತ್ರಕರ್ತರ ಸಂಘ ನೋಂದಾವಣೆಗೊAಡು ತನ್ನ ಕಾರ್ಯಚಟುವಟಿಕೆ ಆರಂಭಿಸಿ ಮೂರು ತಿಂಗಳಾಗಿದ್ದು, ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇದೀಗ ಕುಶಾಲನಗರ ತಾಲೂಕು ಸಂಘ ರಚನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಸಂಘ ರಚನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ ಸಂಘದ ಸದಸ್ಯರನ್ನು ಒಗ್ಗೂಡಿಸಿ ವಿಭಿನ್ನ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕೊಡಗು ಪತ್ರಕರ್ತರ ಸಂಘ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಸಂಘದ ಖಜಾಂಚಿ ಟಿ.ಕೆ. ಸಂತೋಷ್, ಸಂಘಟನಾ ಕಾರ್ಯದರ್ಶಿಗಳಾದ ಸುರೇಶ್ ಬಿಳಿಗೇರಿ, ಸುನಿಲ್ ಪೂಜಾರಿ, ನಿರ್ದೇಶಕರಾದ ಟಿ.ಜಿ. ಸತೀಶ್, ಸಂಘದ ಸದಸ್ಯರಾದ ಸೋನ್ಸ್, ಶಿವಣ್ಣ, ಅಲ್ಫೆçಡ್ ಹಾಜರಿದ್ದರು.