ಚೆಯ್ಯಂಡಾಣೆ, ಆ. ೧೩. ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ಗ್ರಾಮದ ಬ್ಲಾಕ್ ೧ ಮತ್ತು ೨, ಕರಡ, ಅರಪಟ್ಟು ಬ್ಲಾಕ್ ೧ ಮತ್ತು ೨, ಕೊಕೇರಿ, ಚೇಲಾವರÀ, ಗ್ರಾಮಗಳ ವಾರ್ಡ್ ಸಭೆಯು ತಾ. ೧೭ ರಿಂದ ೧೯ ವರೆಗೆ ನಡೆಯಲಿದೆ.

ತಾ. ೧೭ ರಂದು ಪೂರ್ವಾಹ್ನ ೧೦.೩೦ ಗಂಟೆಗೆ ನರಿಯಂದಡ ಬ್ಲಾಕ್ ೧ ಮತ್ತು ೨ ಚೆಯ್ಯಂಡಾಣೆಯ ಮಹಿಳಾ ಸಮಾಜದಲ್ಲಿ ಕ್ರಮವಾಗಿ ಸದಸ್ಯೆ ಬಿ.ಎಸ್. ಪುಷ್ಪ ಹಾಗೂ ವೈ.ಆರ್. ರಜೀನ ಅಧ್ಯಕ್ಷತೆಯಲ್ಲಿ, ಅಪರಾಹ್ನ ೨ ಗಂಟೆಗೆ ಕೊಕೇರಿ ಮಹಿಳಾ ಸಮಾಜದಲ್ಲಿ ಸದಸ್ಯ ಎಚ್.ಎಂ. ರಾಜು ಅಧ್ಯಕ್ಷತೆಯಲ್ಲಿ, ತಾ. ೧೮ ರಂದು ಅರಪಟ್ಟು ಬ್ಲಾಕ್ ೧ ಮತ್ತು ೨ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಪೂರ್ವಾಹ್ನ ೧೧ ಗಂಟೆಗೆ ಸದಸ್ಯೆ ರಾಣಿ ಗಣಪತಿ ಹಾಗೂ ವಾಣಿ ತಮ್ಮಯ್ಯ ಅಧ್ಯಕ್ಷತೆಯಲ್ಲಿ ಅಪರಾಹ್ನ ೨ ಗಂಟೆಗೆ ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದಸ್ಯೆ ನೇತ್ರಾವತಿ ಅಧ್ಯಕ್ಷತೆಯಲ್ಲಿ, ತಾ. ೧೯ ರಂದು ಚೇಲಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೋನ್ನೋಲದಲ್ಲಿ ಪೂರ್ವಾಹ್ನ ೧೦.೩೦ ಗಂಟೆಗೆ ಸದಸ್ಯೆ ಮಂಜುಳ ಬಿ.ಎಚ್. ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಗ್ರಾಮ ಪಂಚಾಯಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.