ಮಡಿಕೇರಿ ಆ.೧೨ : ಕ್ವಿಟ್ ಇಂಡಿಯಾ ಚಳುವಳಿ ಭಾರತ ಸ್ವಾತಂತ್ರö್ಯ ಹೋರಾಟದ ಕ್ರಾಂತಿಕಾರಿ ಚಳವಳಿ ಎಂದು ಕೆಪಿಸಿಸಿ ಸಂವಾಹನ ಸದಸ್ಯ ಟಿ.ಪಿ.ರಮೇಶ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ೮೦ನೇ ಕ್ವಿಟ್ ಇಂಡಿಯಾ ಚಳವಳಿಯ ವಾರ್ಷಿ ಕೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಿಸಿಸಿಯ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾತನಾಡಿ, ಅಂದು ಬ್ರಿಟಿಷರನ್ನು ಭಾರತದಿಂದ ಓಡಿಸುವುದು ನಮ್ಮ ಗುರಿಯಾಗಿತ್ತು ಎಂದರು.
ರಾಜೀವ್ಗಾAಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರಾ ಮೈನಾ ಮಾತನಾಡಿ, ದೇಶದಲ್ಲಿ ಪ್ರಜಾ ಪ್ರಭುತ್ವವನ್ನು ಉಳಿಸುವಲ್ಲಿ ನಾಗರಿಕರು ಒಂದಾಗಬೇಕಿದೆ ಎಂದರು.
ಸಭೆಗೆ ಮುನ್ನ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಪ್ರಾಣ ಕಳೆದುಕೊಂಡ ಅಸಂಖ್ಯಾತ ಜೀವಗಳ ಆತ್ಮಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿ.ಪಿ.ಸುರೇಶ್, ಫ್ಯಾನ್ಸಿ ಪಾರ್ವತಿ, ಮುಮ್ತಜ್ವೇಗಂ, ಹಫೀಜ್, ಸದಾ ಮುದ್ದಪ್ಪ, ಚುಮ್ಮಿದೇವಯ್ಯ, ಸುರಯ್ಯ ಅಬ್ರಾರ್, ಮಿನಾಜ್, ವಿಮಲ, ಶಾರದ, ಕೆ.ಎಂ. ವೆಂಕಟೇಶ್, ಪಿಯುಸ್ ಪೆರೇರಾ, ನಾಗೇಶ್, ದಿವ್ಯ, ರಿಯಾಜ್ವುದ್ದೀನ್, ಕಲೀಲ್ ಭಾಷ, ರವಿಗೌಡ, ಪೊನ್ನಮ್ಮ, ಮಾದೇವಮ್ಮ, ರಾಣಿ ಹಾಗೂ ಮೊದಲಾದವರು ಹಾಜರಿದ್ದರು.
ವಂದೆ ಮಾತರಂ ಕಾರ್ಯ ಕ್ರಮದೊಂದಿಗೆ ಸಭೆ ಆರಂಭಗೊAಡಿತು. ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ವಂದಿಸಿದರು.
ಮಡಿಕೇರಿ ಪುರಸಭೆ ಹಾಗೂ ಮೂಡ ಮಾಜಿ ಸದಸ್ಯರಾದ ಶಶಿರೇಖಾ ವರದರಾಜ್ ನಾಯ್ಡು ಹಾಗೂ ಹಿರಿಯ ಕಾಂಗ್ರೆಸ್ಸಿಗರಾದ ಚೆಂಬು- ದಬಡ್ಕ ಗ್ರಾಮದ ಹೊದ್ದೆಟ್ಟಿ ಚೆನ್ನಪ್ಪ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಂತಾಪ ವ್ಯಕ್ತಪಡಿಸಿತು.
ಶಶಿರೇಖಾ ನಾಯ್ಡು ಮಡಿಕೇರಿಯ ಹಿರಿಯ ವಕೀಲರಾಗಿದ್ದ ದಿ.ವರದರಾಜ್ ನಾಯ್ಡು ಅವರ ಪತ್ನಿಯಾಗಿದ್ದರು. ಇವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ವೀಣಾ ಅಚ್ಚಯ್ಯ, ಟಿ.ಪಿ.ರಮೇಶ್, ಮಾಜಿ ಸಚಿವೆ ಸುಮವಸಂತ್, ಕೆ.ಪಿ.ಚಂದ್ರಕಲಾ, ವಿ.ಪಿ.ಸುರೇಶ್ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.