ಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ್ಯಾನ್ಸಿ ಪೆಲೋಸಿ ಆಗಸ್ಟ್ ೩ ರಾತ್ರಿ ೮.೧೫ ರ ವೇಳೆ ತೈವಾನ್‌ನ ರಾಜಧಾನಿ ತೈಪೆಗೆ ಬಂದಿಳಿ ಯುವ ಸಮಯದಲ್ಲಿ ಪೆಲೋಸಿಗೆ ಬಿಗಿ ಭದ್ರತೆಯನ್ನು ನೀಡಲಾಯಿತು. ಚೀನಾದಿಂದ ಅನೇಕ ಬೆದರಿಕೆಗಳು ಮತ್ತು ಪ್ರದರ್ಶನಗಳ ನಂತರ ಈ ಕ್ರಮಕೈಗೊಳ್ಳಲಾಯಿತು. ತೈವಾನ್ನಲ್ಲಿ ಅಮೇರಿಕಾ ಗಣನೀಯ ಆಸಕ್ತಿ ಯನ್ನು ತೋರಿಸಿದ ನಂತರ ಚೀನಾವು ಅಮೆರಿಕಕ್ಕೆ ಭೀಕರ ಪರಿಣಾಮ ಗಳೊಂದಿಗೆ ಬೆದರಿಕೆ ಹಾಕಿತ್ತು. ಏತನ್ಮಧ್ಯೆ, ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಕನಿಷ್ಟ ೧೩ ಯುಎಸ್ ಏರ್ ಫೋರ್ಸ್ ವಿಮಾನಗಳು ಜಪಾನ್ನ ಮಿಲಿಟರಿ ನೆಲೆಗಳಿಂದ ಪೆಲೋಸಿ ಅವರ ಭೇಟಿಯ ಸಂದರ್ಭ ಭದ್ರತೆಗಾಗಿ ತೆರಳಿದವು. ಎಂಟು ಅಮೆರಿಕನ್ ಫೈಟರ್ ಜೆಟ್ಗಳು ಮತ್ತು ಐದು ಟ್ಯಾಂಕರ್ಗಳು ಜಪಾನ್ನಿಂದ ತೆರಳಿದವು. ಈ ವಿಮಾನಗಳು ತೈಪೆಯಲ್ಲಿ ಪೆಲೋಸಿಯ ಬೆಂಗಾವಲಿಗಾಗಿ ಸಂಚರಿಸಿದವು. ಪೆಲೋಸಿ ಭೇಟಿ ವೇಳೆ ಆಕೆ ವಾಸವಿರುವ ಹೋಟೆಲ್ಗೆ ಕೂಡ ಭದ್ರತೆಯನ್ನು ಬಿಗಿ ಗೊಳಿಸಲಾಗಿತ್ತು.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್, "ಯುನೈಟೆಡ್ ಸ್ಟೇಟ್ಸ್ ತೈವಾನ್ ಕಾರ್ಡ್ ಅನ್ನು ಆಡುವ ಯಾವುದೇ ಪ್ರಯತ್ನವನ್ನು ಕೈಬಿಡಬೇಕು ಮತ್ತು ಚೀನಾದ ಸಾರ್ವಭೌಮತ್ವವನ್ನು ಗೌರವಿಸಬೇಕು. ಪೆಲೋಸಿ ತೈವಾನ್ಗೆ ಭೇಟಿ ನೀಡವಾರದು" ಎಂದು ಮುನ್ನೆಚ್ಚರಿಕೆ ನೀಡಿದ್ದರು. ಚೀನಾದ ಹಲವು ಪ್ರದೇಶಗಳಲ್ಲಿ ಅಮೆರಿಕದ ವಿರುದ್ಧ ಪ್ರತಿಭಟನೆಗಳೂ ನಡೆದವು. ಘೋರ ಪರಿಣಾಮಗಳನ್ನು ಎದುರಿಸುವುದಾಗಿ ಚೀನಾ ಅಮೆರಿಕಕ್ಕೆ ಬೆದರಿಕೆ ಹಾಕಿತ್ತು. ಆದರೆ, ಇದ್ಯಾವುದನ್ನೂ ಲೆಕ್ಕಿಸದೆ ಪೆಲೋಸಿ ಅವರ ಭೇಟಿಯನ್ನು ತಮ್ಮ ನಿರ್ಧಾರ ಎಂದು ಅಮೆರಿಕ ಹೇಳಿಕೊಂಡಿತು. ೯/೧೧ ದಾಳಿಯ ಅವಿಭಾಜ್ಯ ಅಂಗವಾಗಿದ್ದ ಅಲ್-ಖೈದಾದ ೭೧ ವರ್ಷದ ನಾಯಕ ಅಯ್ಮನ್ ಅಲ್-ಜವಾಹ್ರಿಯನ್ನು ಕೊಂದ ಯುಎಸ್ ಕಾರ್ಯಾಚರಣೆಯನ್ನು ಅಧ್ಯಕ್ಷ ಬಿಡೆನ್ ಆ.೧ ರಂದು ಘೋಷಿಸಿದರು. ಮರು ದಿನ ಅಂದರೆ, ಆ.೨ ರಂದು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ಗೆ ಭೇಟಿ ನೀಡಿದಾಗ ಅದು ಚೀನಾದೊಂದಿಗೆ ಇನ್ನೂ ಉದ್ವಿಗ್ನತೆಯನ್ನು ಹೆಚ್ಚಿಸಿತು.
ತೈವಾನ್ ತನ್ನ ದೇಶದ ಅಂಗ ಪ್ರದೇಶವೆಂದು ಭಾವಿಸಿರುವ ಚೀನಾ ಪೆಲೋಸಿ ಬರುವ ಮುನ್ನ ವಕ್ರದೃಷ್ಟಿ ಬೀರಿತು. ಚೀನಾದ ೨೧ ಮಿಲಿಟರಿ ವಿಮಾನಗಳು ತೈವಾನ್ನ ವಾಯು ರಕ್ಷಣಾ ಗುರುತಿನ ವಲಯದ ನೈಋತ್ಯ ಭಾಗದಲ್ಲಿ ಹಾರಿವೆ ಎಂಬುದನ್ನು ತೈವಾನ್ನ ರಾಷ್ಟಿçÃಯ ರಕ್ಷಣಾ ಸಚಿವಾಲಯವು ದೃಢಪಡಿಸಿತು. ಇದಕ್ಕೆ ಪ್ರತಿಯಾಗಿ, ತೈವಾನ್ ವಾಯು ಸೇನೆಯು ಗಸ್ತು ತಿರುಗಿತು. ಆ ಮೂಲಕ ರೇಡಿಯೋ ಎಚ್ಚರಿಕೆಗಳನ್ನು ಕಳುಹಿಸಲಾಗಿದ್ದು, ಚೀನಾದ ಮಿಲಿಟರಿ ವಿಮಾನಗಳನ್ನು ಪತ್ತೆ ಹಚ್ಚಲು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿತು ಎಂದು ತೈವಾನ್‌ನ ರಾಷ್ಟಿçÃಯ ರಕ್ಷಣಾ ಸಚಿವಾಲಯ ಹೇಳಿತು. ನ್ಯಾನ್ಸಿ ಪೆಲೋಸಿ ತೈವಾನ್ ತಲುಪುತ್ತಿದ್ದಂತೆ ಚೀನಾ ಮಿಲಿಟರಿ ಕಾರ್ಯಾಚರಣೆ ಘೋಷಿಸಿತು. ಅಮೆರಿಕಾದ ವರ್ತನೆ ಚೀನಾದ ಸಾರ್ವಭೌಮತೆಗೆ ಧಕ್ಕೆ ತಂದಿದೆ ಅಂತ ಆರೋಪಿಸಿತು. ಪೆಲೋಸಿ ಪಯಣಿಸಿದ ವಿಮಾನ ತೈಪೆಯಲ್ಲಿ ಇಳಿದ ಕೆಲವೇ ನಿಮಿಷಗಳಲ್ಲಿ, ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ಸುತ್ತಮುತ್ತಲಿನ ನೀರಿನಲ್ಲಿ ಆರು ಲೈವ್-ಫೈರ್ ಮಿಲಿಟರಿ ಡ್ರಿಲ್ಗಳನ್ನು ನಡೆಸುವುದಾಗಿ ಘೋಷಿಸಿತು.
ಪೆಲೋಸಿ ನಿರ್ಭಿಡೆಯ ಸಂದೇಶ
ಈ ನಡುವೆ ಓರ್ವ ಮಹಿಳೆಯಾಗಿ ಚೀನಾದ ಬೆದರಿಕೆ ನಡುವೆ ತನ್ನ ರಾಷ್ಟçವಾದ ಅಮೆರಿಕದ ಬೆಂಬಲ ಬಲದೊಂದಿಗೆ ಪೆಲೋಸಿ ನಿರ್ಭಿಡೆ ಯಿಂದ ತೈವಾನ್ ರಾಜಧಾನಿ ತೈಪೆ ನೆಲದಲ್ಲಿ ಇಳಿದರು. ಯುಎಸ್ ಉಪಾಧ್ಯಕ್ಷರ ನಂತರ ಓವಲ್ ಕಚೇರಿಯ ಸಾಲಿನಲ್ಲಿ ಯುಎಸ್ ಹೌಸ್ ಸ್ಪೀಕರ್ ಪೆಲೋಸಿ ಎರಡನೇ ಸ್ಥಾನದಲ್ಲಿದ್ದಾರೆ. ಅದೇ ಧೈರ್ಯ ಸ್ಥೆöÊರ್ಯದಿಂದ ತೈವಾನ್ ಆಡಳಿತಕಾರರಿಗೆ ಹಾಗೂ ಅಲ್ಲಿನ ನಾಗರಿಕರಿಗೆ ತನ್ನ ಸಂದೇಶವನ್ನು ಮುಕ್ತ ಕಂಠದಿAದ ತಿಳಿಸಿದರು.
ತೈವಾನ್ನ ಪ್ರಜಾಪ್ರಭುತ್ವ ವನ್ನು ಬೆಂಬಲಿಸುವ ತನ್ನ ದೇಶದ ಅಚಲವಾದ ಬದ್ಧತೆ ಯನ್ನು ಪುನರುಚ್ಚರಿಸಿದರು. "ತೈವಾನ್ ನಾಯಕತ್ವ ದೊಂದಿಗಿನ ಚರ್ಚೆಗಳು ನಮ್ಮ ಪಾಲುದಾರರಿಗೆ ಬೆಂಬಲವನ್ನು ಪುನರುಚ್ಚರಿಸುವುದರ ಸಂಕೇತವಾಗಿದೆ. ಮುಕ್ತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಮುನ್ನಡೆಸುವುದು ಸೇರಿದಂತೆ ನಮ್ಮ ಹಂಚಿಕೆಯ ಆಸಕ್ತಿಗಳನ್ನು ಉತ್ತೇಜಿಸುವುದರ ಮೇಲೆ ನಾವು ಗಮನವನ್ನು ಕೇಂದ್ರೀಕರಿಸುತ್ತೇವೆ," ಎಂದರು. "ನಾವು ತೈವಾನ್ ಜತೆಗಿನ ಗೆಳೆತನಕ್ಕಾಗಿ, ಈ ಪ್ರದೇಶದಲ್ಲಿನ ಶಾಂತಿಗಾಗಿ ಇಲ್ಲಿಗೆ ಬಂದಿದ್ದೇವೆ" ಎಂದು ಘೋಷಿಸಿದರು. "ತೈವಾನ್ ಒಂದು ಮುಕ್ತ ಪ್ರಜಾಪ್ರಭುತ್ವ ದೇಶ. ತಾನು ಎದುರಿಸುವ ಸವಾಲುಗಳ ಮಧ್ಯೆಯೂ ಭರವಸೆ, ಧೈರ್ಯ ಮತ್ತು ದೃಢತೆಯಿಂದ ಶಾಂತಿಯುತ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸಲು ಸಾಧ್ಯ ಎಂಬುದನ್ನು ಜಗತ್ತಿಗೆ ಅದು ಸಾಬೀತುಪಡಿಸಿದೆ. ಈಗ ಹಿಂದೆAದಿಗಿAತಲೂ ತೈವಾನ್ ಜತೆಗೆ ಅಮೆರಿಕದ ಸಹಾನುಭೂತಿ ನಿರ್ಣಾಯಕವಾಗಿದೆ. ಈ ಸಂದೇಶವನ್ನು ನಾವು ಇಂದು ನೀಡುತ್ತಿದ್ದೇವೆ" ಎಂದು ನ್ಯಾನ್ಸಿ ಹೇಳಿದ್ದಾರೆ.
ಈ ನಡುವೆ ನ್ಯಾನ್ಸಿ ಅವರ ತೈವಾನ್ ಪ್ರವಾಸವನ್ನು ಖಂಡಿಸಿ ಚೀನಾ ವಿದೇಶಾಂಗ ಸಚಿವಾಲಯವು ಆ. ೨ ರ ರಾತ್ರಿ ಅಮೆರಿಕ ರಾಯಭಾರಿ ನಿಕೋಲಸ್ ಬರ್ನ್ಸ್ ಅವರಿಗೆ ಸಮನ್ಸ್ ನೀಡಿತ್ತು. ಅಮೆರಿಕವು ಇದಕ್ಕೆ ಸರಿಯಾದ ಬೆಲೆ ತೆರಲಿದೆ ಎಂದು ಮತ್ತೆ ಎಚ್ಚರಿಕೆ ನೀಡಿತ್ತು.
"ಈ ನಡೆಯು ಸ್ವಭಾವತಃ ಅತಿಯಾದ ಕ್ರಿಯೆಯಾಗಿದೆ ಮತ್ತು ಇದರ ಪರಿಣಾಮಗಳು ಬಹಳ ಗಂಭೀರವಾಗಲಿದೆ. ಚೀನಾ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ ಎಂದು ಚೀನಾ ಉಪ ವಿದೇಶಾಂಗ ಸಚಿವ ಕ್ಸಿ ಫೆಂಗ್ ಹೇಳಿದರು. ಚೀನಾ ಸೇನೆಯು ತಾನು ಹೈ ಅಲರ್ಟ್ನಿಂದ ಇದ್ದು, ಈ ಭೇಟಿಗೆ ಪ್ರತಿಕ್ರಿಯೆಯಾಗಿ ನಿರ್ದಿಷ್ಟ ಸರಣಿ ಸೇನಾ ಕಾರ್ಯಾಚರಣೆ ಗಳನ್ನು ನಡೆಸಲಾಗುವುದು ಎಂದು ಹೇಳಿತ್ತು. ತೈವಾನ್ ದ್ವೀಪದ ಸುತ್ತಲಿನ ಜಲ ಸಂಧಿಯಲ್ಲಿ ಸರಣಿ ಸೇನಾ ಅಭ್ಯಾಸಕ್ಕೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಸುದೀರ್ಘ ವ್ಯಾಪ್ತಿಯ ಜೀವಂತ ಮದ್ದುಗುಂಡುಗಳ ಸಿಡಿತ ಕೂಡ ಸೇರಿದೆ ಎಂದು ತಿಳಿಸಿತ್ತು.
ತೈವಾನ್ ಅವಿಭಾಜ್ಯ ಅಂಗ:ಚೀನಾ
ತೈವಾನ್ ತನ್ನ ಅವಿಭಾಜ್ಯ ಅಂಗ ಎಂಬುದು ಚೀನಾದ ಅಚಲ ನಿಲುವು. ತಾನು ಪ್ರತ್ಯೇಕ ದೇಶ ಎಂದು ತೈವಾನ್ ಹೇಳಿಕೊಳ್ಳುತ್ತದೆ. ತೈವಾನ್ ಸ್ವತಂತ್ರವಾಗಿಯೇ ಆಡಳಿತ ನಡೆಸುತ್ತಿದೆ ಯಾದರೂ ಅಂತರ ರಾಷ್ಟಿçÃಯ ಮಾನ್ಯತೆ ಪಡೆದಿಲ್ಲ ಎಂಬುದು ಗಮನಿಸಬೇಕು. ಚೀನಾ ಯಾವಾಗ ಬೇಕಾದರೂ ತೈವಾನ್ ಅನ್ನು ಆಕ್ರಮಿಸಿ ಬಲವಂತವಾಗಿ ಇಟ್ಟುಕೊಂಡರೆ ಅಚ್ಚರಿ ಪಡುವಂಥದ್ದು ಅಲ್ಲ. ತನ್ನ ಅನುಮತಿ ಇಲ್ಲದೇ ಯಾರೂ ಕೂಡ ತೈವಾನ್ ದೇಶಕ್ಕೆ ಹೋಗುವಂತಿಲ್ಲ ಎಂಬುದು ಅಂತಾರಾಷ್ಟಿçÃಯ ಸಮುದಾಯಕ್ಕೆ ಚೀನಾ ಮಾಡಿರುವ ತಾಕೀತು. ಚೀನಾದಿಂದ ೧೬೦ ಕಿಮೀ ದೂರದಲ್ಲಿರುವ ಹಲವು ದ್ವೀಪಗಳ ಸಮೂಹ ಅದು.
೩೦ ಸಾವಿರ ವರ್ಷಗಳ ಹಿಂದೆ ಇಲ್ಲಿ ಆದಿಮಾನವರು ವಾಸವಿದ್ದದ್ದಕ್ಕೆ ಪುರಾವೆಗಳಿವೆ. ಫಿಲಿಪ್ಪೆöÊನ್ಸ್ ಜನಾಂಗಕ್ಕೆ ಹೋಲುವ ಜನರು ಆಗ ಇಲ್ಲಿದ್ದರು. ನಂತರ ಕ್ರಿ.ಪೂ. ೪ ಸಾವಿರ ವರ್ಷದ ಸುಮಾರಿಗೆ ಆಗ್ನೇಯ ಚೀನಾದ ಪ್ರದೇಶಗಳಿಂದ ರೈತರು ತೈವಾನ್ಗೆ ಹೋಗಿ ನೆಲಸಿದ್ದಾರೆ. ಅವರೇ ಸದ್ಯ ಅಲ್ಲಿ ಮೂಲ ನಿವಾಸಿಗಳೆನಿಸಿದ್ದಾರೆ. ಇದು ತೈವಾನ್ನ ಪೂರ್ವ ಇತಿಹಾಸ.
ಆಧುನಿಕ ಯುಗದಲ್ಲಿ ೨೦ನೇ ಶತಮಾನದ ಮೊದಲಾರ್ಧದಲ್ಲಿ ಜಪಾನೀಯರ ವಶದಲ್ಲಿ ತೈವಾನ್ ಇತ್ತು. ೧೮೯೪ರಲ್ಲಿ ನಡೆದ ಚೀನಾ ಜಪಾನ್ ನಡುವಿನ ಮೊದಲ ಯುದ್ಧದಲ್ಲಿ ಜಪಾನ್ ಗೆದ್ದಿತ್ತು. ಆಗ ತೈವಾನ್ ೧೯೪೫ರವರೆಗೂ ಜಪಾನ್ ಆಡಳಿತಕ್ಕೆ ಒಳಪಟ್ಟಿತ್ತು. ಆದರೆ ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ನೆಲಕಚ್ಚಿದ ಬಳಿಕ ತೈವಾನ್ ಮತ್ತೊಮ್ಮೆ ಚೀನಾದ ಆಡಳಿತಕ್ಕೆ ಒಳಪಟ್ಟಿತು. ನಂತರ ಚೀನಾದಲ್ಲಿ ನಾಗರಿಕ ಸಮರ ನಡೆಯಿತು. ಚಿಯಾಂಗ್ ಕಾಯ್-ಶೆಕ್ ಸರಕಾರ ವಿರುದ್ಧ ಮಾವೋ ನೇತೃತ್ವದಲ್ಲಿ ಕಮ್ಯೂನಿಸ್ಟ್ ದಂಗೆ ಎದ್ದಿತು. ೧೯೪೯ರಲ್ಲಿ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದರು. ಚಿಯಾಂಗ್ ಕಾಯ್-ಶೆಕ್ ಹಾಗೂ ಅವರ ಕುವಮಿನ್ಟಾಂಗ್ ಪಕ್ಷದವರು ತೈವಾನ್ಗೆ ಹೋಗಿ ಆಡಳಿತ ಮಾಡಿದರು. ಆಗಿನಿಂದ ತೈವಾನ್ ಚೀನಾದಿಂದ ಸ್ವತಂತ್ರವಾಗಿಯೇ ಉಳಿದಿದೆ. ಅಂತಾರಾಷ್ಟಿçÃಯ ಮಾನ್ಯತೆ ತೈವಾನ್ ತಾನು ಸ್ವತಂತ್ರ ದೇಶ ಎಂದು ೧೯೪೯ರಲ್ಲೇ ಘೋಷಿಸಿಕೊಂಡಿದೆ. ವಿಶ್ವಸಂಸ್ಥೆ ಕೂಡ ಮಾನ್ಯತೆ ಕೊಟ್ಟಿತ್ತು. ಆದರೆ, ೧೯೭೧ ನಂತರ ವಿಶ್ವಸಂಸ್ಥೆಯ ಅಧಿಕೃತ ದೇಶಗಳ ಪಟ್ಟಿಯಲ್ಲಿ ತೈವಾನ್ ಹೆಸರು ಕೈಬಿಡಲಾಗಿದೆ. ಅಮೆರಿಕ ಕೂಡ ೧೯೭೯ರ ನಂತರ ತೈವಾನ್ ಅನ್ನು ಪ್ರತ್ಯೇಕ ದೇಶ ಎಂದು ಮಾನ್ಯ ಮಾಡಿಲ್ಲ. ಸದ್ಯ ೧೩ ಸಣ್ಣಪುಟ್ಟ ದೇಶಗಳು ಮಾತ್ರ ತೈವಾನ್ ಅನ್ನು ಅಧಿಕೃತ ದೇಶವೆಂದು ಮಾನ್ಯ ಮಾಡುತ್ತವೆ. ಗ್ವಾಟಿಮಾಲ, ಹೈಟಿ, ಹೊಂಡುರಾಸ್, ಪರಗ್ವೆ, ಸೇಂಟ್ ಕಿಟ್ಸ್, ತುವಲು ಇತ್ಯಾದಿ ದೇಶಗಳು ತೈವಾನ್ ಅನ್ನು ಸ್ವತಂತ್ರ ದೇಶ ಎಂದು ಪರಿಗಣಿಸಿವೆ.
ಅಮೆರಿಕಾಗೆ ತೈವಾನ್ ಹಿತಾಸಕ್ತಿ
ಅಮೆರಿಕಕ್ಕೆ ತೈವಾನ್ ಮುಖ್ಯ ತೈವಾನ್ ವಿಚಾರದಲ್ಲಿ ಅಮೆರಿಕಕ್ಕೆ ಎರಡು ಹಿತಾಸಕ್ತಿ ಇದೆ. ಜಗತ್ತಿನ ಸರ್ವಾಧಿಕಾರಿ ಪ್ರಭುತ್ವಗಳ ವಿರುದ್ಧ ಅಮೆರಿಕ ಸಾಂಪ್ರದಾಯಿಕವಾಗಿ ವಿರೋಧ ಮಾಡಿಕೊಂಡು ಬಂದಿರುವುದು ಒಂದೆಡೆಯಾದರೆ, ಪೆಸಿಫಿಕ್ ಮಹಾಸಾಗರ ವ್ಯಾಪ್ತಿಯಲ್ಲಿ ಅಮೆರಿಕಕ್ಕೆ ತನ್ನ ಹಿತಾಸಕ್ತಿ ಉಳಿಸಿಕೊಳ್ಳುವ ಇರಾದೆ ಇದೆ. ಒಂದು ವೇಳೆ ತೈವಾನ್ ಸಂಪೂರ್ಣ ಚೀನಾದ ಹತೋಟಿಗೆ ಬಂದರೆ ಚೀನಾವನ್ನು ನಿಯಂತ್ರಿಸುವುದು ಕಷ್ಟ. ಗುವಾಮ್, ಹವಾಯ್ ಮೊದಲಾದ ಪ್ರದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳಿಗೆ ಚೀನಾದಿಂದ ಅಪಾಯ ಒದಗಬಹುದು. ಅಪಾರ ಸಂಪತ್ತುಗಳು ಇರುವ ಹಾಗೂ ಅಂತಾರಾಷ್ಟಿçÃಯ ಹಡಗು ಸಂಚಾರ ಮಾರ್ಗಗಳು ಇರುವ ಪೆಸಿಫಿಕ್ ಮಹಾಸಾಗರ ಪ್ರದೇಶವನ್ನು ಚೀನಾದ ಪ್ರಭಾವಳಿಯಿಂದ ತಪ್ಪಿಸುವುದು ಅಮೆರಿಕಕ್ಕೆ ಅಗತ್ಯ. ವಿಶ್ವಕ್ಕೂ ತೈವಾನ್ ಅಗತ್ಯ. ಫೋನ್ಗಳಿಂದ ಹಿಡಿದು ವಾಚ್, ಲ್ಯಾಪ್ ಟಾಪ್ ಇತ್ಯಾದಿ ನಮ್ಮ ದೈನಂದಿನ ಅಗತ್ಯ ಇರುವ ಎಲೆಕ್ಟಾçನಿಕ್ ಉತ್ಪನ್ನಗಳಿಗೆ ಕಂಪ್ಯೂಟರ್ ಚಿಪ್ಗಳು ಅಗತ್ಯ. ತೈವಾನ್ನಿಂದಲೇ ಬಹುತೇಕ ಚಿಪ್ಗಳು ತಯಾರಾಗಿ ವಿಶ್ವಕ್ಕೆ ಸರಬರಾಜು ಆಗುತ್ತವೆ. ಒಂದು ವೇಳೆ ತೈವಾನ್ ಚೀನಾ ವಶವಾದರೆ ಚಿಪ್ಗಳ ಸರಬರಾಜು ಸರಪಳಿಗೆ ಧಕ್ಕೆಯಾಗಬಹುದು. ಚೀನಾದ ಏಕಸ್ವಾಮ್ಯತೆ ವಿಶ್ವ ರಾಷ್ಟçಗಳಿಗೆ ತಲೆನೋವಾಗಬಹುದು.
- ‘‘ಚಕ್ರವರ್ತಿ’’