ವೀರಾಜಪೇಟೆ, ಆ. ೧೪: ಕೊಡಗಿನಲ್ಲಿ ಮುಂಗಾರು ಜೋರಾಗಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇದರ ಮಧ್ಯೆಯೇ "ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ" ವೈಭವದಿಂದ ನಡೆಯುತ್ತಿದೆ. ವೀರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಎಸ್.ಎಂ.ಎಸ್. ವಿದ್ಯಾಪೀಠ ಇಂತಹ ದ್ದೊಂದು ಕ್ರೀಡಾಕೂಟ ದೇಸೀ ಸೊಗಡನ್ನು ಅನಾವರಣ ಗೊಳಿಸಿತು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಾಲಿಬಾಲ್, ಥ್ರೋಬಾಲ್, ಕಬಡ್ಡಿ, ರನ್ನಿಂಗ್ ಮೊದಲಾದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳು ಮನಸೋ ಇಚ್ಛೆ ಖುಷಿಪಟ್ಟರು.
ಮೋಡ ಮುಸುಕಿದ ವಾತಾವರಣ, ಭತ್ತದ ನಾಟಿಗೆ ಸಿದ್ಧಗೊಂಡಿದ್ದ ಕೆಸರು ಗದ್ದೆಯಲ್ಲಿ, ಕೆಸರಿನಲ್ಲಿ ಶಾಲಾ ವಿದ್ಯಾರ್ಥಿಗಳು ಗದ್ದೆಗೆ ಇಳಿದು ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ಪ್ರತ್ಯೇಕವಾಗಿ ಕೆಸರು ಗದ್ದೆ ಓಟ, ವಾಲಿಬಾಲ್, ಥ್ರೋಬಾಲ್, ವಿವಿಧ ಸ್ಪರ್ಧೆಗಳು ನಡೆದವು. ಇದರೊಂದಿಗೆ ಕೆಸರಿನಲ್ಲಿ ವಿದ್ಯಾರ್ಥಿಗಳ ರೋಚಕ ನೃತ್ಯ ಕ್ರೀಡೆಗೆ ಸಾಂಸ್ಕೃತಿಕ ಮೆರುಗನ್ನು ನೀಡಿತು, ಬಹುತೇಕ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ಕೆಸರು ಗದ್ದೆಯಲ್ಲಿ ಎದ್ದು ಬಿದ್ದು ಖುಷಿಪಟ್ಟರು. ಶಿಕ್ಷಕರು ಇದಕ್ಕೆ ಪ್ರೋತ್ಸಾಹ ನೀಡಿದರು.
ಎಸ್.ಎಂ. ಎಸ್ ಶಾಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಸರು ಗದ್ದೆಯ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿಕೊಂಡು ಬರಲಾಗಿದೆ. ಮಕ್ಕಳು ಈ ದಿನಕ್ಕಾಗಿಯೇ ಕಾಯುತ್ತಾರೇನೋ ಎಂಬಷ್ಟು ಹುಮ್ಮಸ್ಸು ಗದ್ದೆಯಲ್ಲಿ ಮನೆಮಾಡಿತ್ತು. ಮುಂಗಾರು ಮಳೆ ಸಂದರ್ಭ ಕ್ರೀಡಾಕೂಟ ಹಮ್ಮಿಕೊಳ್ಳುವ ಮೂಲಕ ಕೆಸರಿನಲ್ಲಿ ಮನಸೋ ಇಚ್ಛೆ ಆಡಿ-ಕುಣಿದು ಖುಷಿಪಡುತ್ತಾರೆ. ಮಳೆಗಾಲ ಬಂತೆAದರೆ ಕೊಡಗಿನಲ್ಲಿ ಕೃಷಿ ಚುರುಕುಗೊಳ್ಳುತ್ತದೆ. ಆದರೆ ಕೃಷಿಯಿಂದ ಜನರೀಗ ವಿಮುಖ ರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಸಂಸ್ಕöÈತಿ ಕಣ್ಮರೆಯಾಗಬಾರದು ಎಂಬ ಕಾಳಜಿ ಈ ಗ್ರಾಮೀಣ ಕ್ರೀಡೆಗಳ ಆಯೋÃಜನೆಯ ಹಿಂದಿದೆ. ಜನಪ್ರಿಯಗೊಳ್ಳುತ್ತಿರುವ ಕ್ರೀಡೆ ದಿನವಿಡೀ ಮಳೆ ನೀರಿನಲ್ಲಿ, ಗದ್ದೆ ಮಣ್ಣಿನಲ್ಲಿ ಕೆಲಸ ಮಾಡುವ ರೈತನಿಗೆ ಯಾವ ರೋಗ ಜಾಡ್ಯಗಳೂ ಹತ್ತಿರ ಸುಳಿಯುವುದಿಲ್ಲ. ಕೆಸರಿಗೆ ತನ್ನದೇ ಆದ ಆಯುರ್ವೇದಿಯ ಮಹತ್ವವಿದೆೆ ಎನ್ನುವ ಬಲವಾದ ನಂಬಿಕೆಯೂ ಈ ಕೃಷಿಕ ಜನರದ್ದಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಈ ಕ್ರೀಡೆ ಜನಪ್ರಿಯಗೊಳ್ಳುತ್ತಿದೆ. ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿರುವ, ಜೊತೆಗೆ ಗ್ರಾಮೀಣ ಭಾಗದ ಜನತೆ ಕೃಷಿ ಯಿಂದ ಮೆಲ್ಲಮೆಲ್ಲನೆ ದೂರವಾಗು ತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಈ ರೀತಿಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಶಾಲಾ ಮುಖ್ಯಸ್ಥರು ಮಾಹಿತಿ ನೀಡುತ್ತಾರೆ.
ಚಾಲನೆ: ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಕಳಂಚೇರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಮಾನಸಿಕ, ದೈಹಿಕ ಕಸರತ್ತಿನ ಜತೆಗೆ ಮನರಂಜನೆಗೆ ಗ್ರಾಮೀಣ ಕ್ರೀಡೆಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಕಂಪ್ಯೂಟರ್, ಮೊಬೈಲ್ಗಳಿಂದ ದೂರು ಉಳಿದು ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾAಶುಪಾಲರಾದ ಕೆ.ಪಿ. ಕುಸುಂ ಟಿಟೋ ಮಾತನಾಡಿ, ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಹಣ ವೆಚ್ಚ ಮಾಡಬೇಕಾಗಿಲ್ಲ. ಜನಮಾನಸದಿಂದ ದೂರಾಗುತ್ತಿರುವ ಕಲೆ ಮತ್ತು ಕ್ರೀಡೆಯ ಉಳಿವಿಗೆ ಪ್ರತಿಯೊಬ್ಬರೂ ಮುಂದಾಗಬೇಕು. ಪಾಠ ಪ್ರವಚನಗಳೊಂದಿಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಿ ಅದರ ಮುಖಾಂತರ ಜೀವನ ಮೌಲ್ಯಗಳನ್ನು ಕಲಿಸುವಂತಾಗಬೇಕು, ಇದರೊಂದಿಗೆ ಮೈಮನಗಳ ಬೆಳವಣಿಗೆ ಕೂಡ ಆಗುತ್ತದೆ ಮತ್ತು ಮಕ್ಕಳು ಪ್ರಕೃತಿಯೊಂದಿಗೆ ಬೆರೆಯಲು ಮತ್ತಷ್ಟು ಅವಕಾಶ ನೀಡಿದಂತಾ ಗುತ್ತದೆ ಎಂದು ಹೇಳಿದರು. ಸಂಸ್ಥೆಯ ಶಿಕ್ಷಕಿ ಮೈಥಿಲಿ ರಾವ್ ವೀಕ್ಷಕ ವಿವರಣೆ ನೀಡಿದರು. ಈ ಸಂದರ್ಭ ಸಂಸ್ಥೆಯ ಅಧ್ಯಾಪಕ ವೃಂದ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದು, ಕ್ರೀಡಾ ಕೂಟದ ಯಶಸ್ವಿಗೆ ಕಾರಣಿಭೂತ ರಾದರು. - ಈಶಾನ್ವಿ