ಕುಶಾಲನಗರ, ಆ. ೧೪ : ಕನ್ನಡ ಸಾಹಿತ್ಯ ಲೋಕವನ್ನು ಅಗಲಿದ ಸಾಹಿತಿ, ವಿಮರ್ಶಕ ಪ್ರೊ.ಎಂ. ಹೆಚ್.ಕೃಷ್ಣಯ್ಯ ಅವರ ನಿಧನಕ್ಕೆ ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ಘಟಕದಿಂದ ಶ್ರದ್ದಾಂಜಲಿ ಸಭೆ ನಡೆಸಲಾಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ.ಸೀನಪ್ಪ ಹಾಗು ವಾಗ್ಮಿ ವಿ.ಪಿ.ಶಶಿಧರ್ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಮೃತ ಕೃಷ್ಣಯ್ಯ ಅವರ ಸಾಹಿತ್ಯ ಸಾಧನೆಗಳ ಕುರಿತು ತೊರೆನೂರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಉಪನ್ಯಾಸಕ ಟಿ.ಬಿ.ಮಂಜುನಾಥ್ ಮಾತನಾಡಿದರು. ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ವಿ.ಎಸ್.ಆನಂದಕುಮಾರ್, ತಾಲ್ಲೂಕು ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಟಿ.ವಿ.ಶೈಲಾ, ಹೇಮಲತಾ, ಟಿ.ಜಿ.ಪ್ರೇಮಕುಮಾರ್, ನಿವೃತ್ತ ಪೇದೆ ಎಂ.ಇ.ದೊಡ್ಡಯ್ಯ, ಪಟ್ಟಣ ಪಂಚಾಯಿತಿ ದಫೇದಾರ್ ಹೆಚ್.ಎನ್. ಮೋಹನಕುಮಾರ್, ಸುಂಟಿಕೊಪ್ಪ ಇಬ್ರಾಹಿಂ, ಅಂಚೆ ಇಲಾಖೆಯ ಸ್ಮಿತಾ, ಕಲಾವಿದ ಟಿ.ಆರ್.ಪ್ರಭುದೇವ್, ಕಸಾಪ ತಾಲೂಕು ಕೋಶಾಧಿಕಾರಿ ಕೆ.ವಿ.ಉಮೇಶ್, ಮೊದಲಾದವರಿದ್ದರು.