ಮಡಿಕೇರಿ, ಆ. ೧೨: ಪರಕೀಯರ ದಾಳಿ, ದೇಶದ್ರೋಹಿಗಳ ಕುತಂತ್ರ, ರಕ್ತಪಾತದ ನಡುವೆಯೂ ಭಾರತ ದೇಶದ ಉಳಿವಿಗೆ ಹಲವರು ಪ್ರಾಣತ್ಯಾಗ ಮಾಡಿ ಸ್ವಾತಂತ್ರö್ಯ ರಾಷ್ಟç ನಿರ್ಮಿಸಿದರು. ಆದರೆ, ಇಂದು ಜಾತ್ಯತೀತ ಮುಖವಾಡದಲ್ಲಿರುವ ಕೆಲವರಿಂದ ದೇಶ ಮತ್ತೊಮ್ಮೆ ಇಬ್ಭಾಗಗೊಳ್ಳುವ ಭೀತಿ ಎದುರಾಗಿದೆ. ಇದರ ವಿರುದ್ಧ ಹಿಂದೂಗಳು ಜಾಗರೂಕರಾಗಬೇಕು. ಅನನ್ಯ ಸಂಸ್ಕೃತಿಯ ನೆಲೆಬೀಡಾಗಿರುವ ನಮ್ಮ ದೇಶದ ಉಳಿವಿಗೆ ಪ್ರತಿಯೊಬ್ಬರು ಕಟಿಬದ್ಧರಾಗಿರಬೇಕು ಎಂದು ಉಡುಪಿ ಜಿಲ್ಲೆಯ ಹಿಂದೂ ಜಾಗರಣಾ ವೇದಿಕೆಯ ಪ್ರಮುಖ ಹಾಗೂ ವಾಗ್ಮಿಯಾದ ಶ್ರೀಕಾಂತ್ ಶೆಟ್ಟಿ ಕರೆ ನೀಡಿದರು.

ನಗರದ ಲಕ್ಷಿö್ಮÃ ನರಸಿಂಹ ಕಲ್ಯಾಣ ಮಂಟಪದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿದ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನದಲ್ಲಿ ದಿಕ್ಸೂಚಿ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದರು.

ಆಗಸ್ಟ್ ೧೪, ೧೯೪೭ರ ಮಧ್ಯರಾತ್ರಿ ಅಖಂಡ ಭಾರತ ವಿಭಜನೆಗೊಂಡಿತು ಎಂದು ನಾವೆಲ್ಲ ನಂಬಿದ್ದೇವೆ. ಆದರೆ, ಬ್ರಿಟಿಷರ ಕಾಲದಲ್ಲಿಯೇ ದೇಶವನ್ನು ಒಡೆದು ವಿಂಗಡಿಸುವ ಕುತಂತ್ರವನ್ನು ಇಲ್ಲಿನ ನೆಲದವರೇ ಮಾಡಿದ್ದರು. ವ್ಯಾಪಾರಕ್ಕೆ ಬಂದ ಬ್ರಿಟಿಷರು ಇಡೀ ದೇಶವನ್ನು ಹಿಡಿತಕ್ಕೆ ಪಡೆದುಕೊಂಡು ಅದಿಪತ್ಯ ಸಾಧಿಸುತ್ತಾರೆ. ಹಿಂದೂ ಸಮಾಜದ ಮೇಲೆ ನಿರಂತರ ದಾಳಿಗಳನ್ನು ನಡೆಸಿದರು. ದೇಶವೇ ಶತ್ರುಗಳ ವಶದಲ್ಲಿದ್ದಾಗ ಇಲ್ಲಿನ ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ನೂರಾರು ಮಂದಿ ಹೋರಾಡಿದ್ದಾರೆ. ಉತ್ತರ ಭಾರತದಲ್ಲಿ ಪ್ರಾಚೀನ ಮಠ-ಮಂದಿರಗಳನ್ನು ನಾಶ ಮಾಡಲಾಯಿತು. ರಕ್ಷಣೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾಗ ಛತ್ರಪತಿ ಶಿವಾಜಿ ಹಿಂದೂಗಳಿಗೆ ಬೆಳಕಾಗಿ ಬಂದರು. ನಿಧಾನಗತಿಯಾಗಿ ಪ್ರಾಬಲ್ಯ ಸಾಧಿಸುತ್ತಿದ್ದ ಬ್ರಿಟಿಷರ ವಿರುದ್ಧ ಬುಡಕಟ್ಟು ಸಮುದಾಯ ಹೋರಾಡುತ್ತದೆ. ಭಾರತದ ಪಾಳೇಗಾರರು ತಿರುಗಿ ಬೀಳುತ್ತಾರೆ. ಭಾರತದಲ್ಲಿ ಬ್ರಿಟಿಷರ ಆಡಳಿತ ಕೊನೆಗೊಳ್ಳುತ್ತೆ ಎನ್ನುವಷ್ಟರಲ್ಲಿ ಇಲ್ಲಿನ ಕೆಲವು ದೇಶದ್ರೋಹಿ ರಾಜಮನೆತನ ಬ್ರಿಟಿಷರೊಂದಿಗೆ ಸೇರಿ ಸ್ವಾತಂತ್ರö್ಯದ ಕನಸನ್ನು ಭಗ್ನ ಮಾಡುತ್ತಾರೆ. ಕಾನೂನುಗಳ ಮೂಲಕ ಸರ್ವಾಧಿಕಾರ ಧೋರಣೆ ನಡೆಸಿ ದೇಶವನ್ನು ಲೂಟಿ ಮಾಡಿ ಶ್ರೀಮಂತ ರಾಷ್ಟçವನ್ನು ಬ್ರಿಟಿಷ್ ಸರಕಾರ ಬಡತನಕ್ಕೆ ನೂಕುತ್ತದೆ. ಸ್ವಾತಂತ್ರö್ಯಕ್ಕಾಗಿ ಹೋರಾಟ ಶುರು ಮಾಡಿದ ಪತ್ರಿಕೆಯನ್ನು ನಿಷೇಧ, ವಂದೇ ಮಾತರಂ ಘೋಷಣೆ ಕೂಗಿದವರಿಗೆ ದಂಡ ವಿಧಿಸಲಾಗುತ್ತದೆ. ಇದಕ್ಕೆ ಪ್ರತ್ಯುತ್ತರವಾಗಿ ಸ್ವದೇಶಿ ಆಂದೋಲನ ಆರಂಭಗೊAಡು ಬ್ರಿಟಿಷರ ವ್ಯಾಪಾರವನ್ನು ವಿರೋಧಿಸಿ ಸ್ವದೇಶಿ ವಸ್ತುಗಳ

(ಮೊದಲ ಪುಟದಿಂದ) ಬಳಕೆಗೆ ಮುಂದಾಗುತ್ತಾರೆ. ಈ ಸಂದರ್ಭ ತೆರಿಗೆ ಹೆಚ್ಚಿಸುತ್ತಾರೆ. ಇದಕ್ಕೂ ಬಗ್ಗದಿದ್ದಾಗ ಭಯಾನಕತೆ ವಾತಾವರಣ ಬ್ರಿಟಿಷರು ಸೃಷ್ಟಿ ಮಾಡುತ್ತಾರೆ ಎಂದು ಹೇಳಿದರು.

ಸ್ವಾತಂತ್ರö್ಯ ಹೋರಾಟ ಚುರುಕುಗೊಳ್ಳುವ ಸಮಯದಲ್ಲಿ ಬ್ರಿಟಿಷ್ ಕಾಲದಲ್ಲಿ ಕೋಮಿನ ಆಧಾರದಲ್ಲಿ ದೇಶವನ್ನು ವಿಭಜಿಸುವ ಸಂಚು ನಡೆಸುತ್ತದೆ. ಹಲವರು ದೇಶ ವಿಭಜನೆಗೆ ಸಮ್ಮತಿ ಇರಲಿಲ್ಲ. ಈ ಪರಂಪರೆ ಭಾಗ ಮಾಡುವುದಕ್ಕೆ ವಿರೋಧ ಇತ್ತು ಎಂದು ಇತಿಹಾಸ ಹೇಳುತ್ತದೆ. ಅಂದಿನ ಭಾರತದ ಭಾಗವಾಗಿದ್ದ ಈಗಿನ ಪಾಕಿಸ್ತಾನದಲ್ಲಿದ್ದ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ಮಾನ ಉಳಿಸಿಕೊಳ್ಳಲು ಹಿಂದೂ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಾರೆ. ವಿಭಜನೆ ಸಮಯದಲ್ಲಿ ರಕ್ತದ ಹೊಳೆ ಹರಿದಿದೆ. ಜಾತ್ಯತೀತ ಎಂಬ ಮುಖವಾಡ ತೊಟ್ಟು ಇಲ್ಲಿಯೇ ಉಳಿದವರು ಪರಂಪರೆ ಭಾಗ ಮಾಡುವುದಕ್ಕೆ ವಿರೋಧ ಇತ್ತು ಎಂದು ಇತಿಹಾಸ ಹೇಳುತ್ತದೆ. ಅಂದಿನ ಭಾರತದ ಭಾಗವಾಗಿದ್ದ ಈಗಿನ ಪಾಕಿಸ್ತಾನದಲ್ಲಿದ್ದ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ಮಾನ ಉಳಿಸಿಕೊಳ್ಳಲು ಹಿಂದೂ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಾರೆ. ವಿಭಜನೆ ಸಮಯದಲ್ಲಿ ರಕ್ತದ ಹೊಳೆ ಹರಿದಿದೆ. ಜಾತ್ಯತೀತ ಎಂಬ ಮುಖವಾಡ ತೊಟ್ಟು ಇಲ್ಲಿಯೇ ಉಳಿದವರು ವೇದಿಕೆಯ ಮಡಿಕೇರಿ ತಾಲೂಕು ಸಂಯೋಜಕ ಬೆಳ್ಯಪ್ಪ ಮೊಗೇರನ, ನಗರ ಸಂಯೋಜಕ ದುರ್ಗೇಶ್, ವಿಭಾಗ ಸಂಯೋಜಕ ಮಹೇಶ್, ಜಿಲ್ಲಾಧ್ಯಕ್ಷ ಅಜಿತ್ ಕುಕ್ಕೇರ ಹಾಜರಿದ್ದರು.

ಪಂಜಿನ ಮೆರವಣಿಗೆ

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಆ ಬಳಿಕ ಮಹದೇವಪೇಟೆಯಿಂದ ಇಂದಿರಾ ಗಾಂದಿ ವೃತ್ತ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತಕ್ಕೆ ಸಾಗಿ ಓಂಕಾರೇಶ್ವರ ದೇವಾಲಯ ಸಮೀಪದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಸಮಾರೋಪಗೊಂಡಿತ್ತು.

ಸುಮಾರು ೫೦೦ ಹಿಂದೂ ಕಾರ್ಯಕರ್ತರು ಕೈಯಲ್ಲಿ ಪಂಜು, ಕೇಸರಿ ಧ್ವಜ ಹಿಡಿದು ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.