ಮಡಿಕೇರಿ, ಆ. ೧೨: ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ (ತಿಮ್ಮಯ್ಯ ಮ್ಯೂಸಿಯಂ) ಸಂದರ್ಶಕರಿಗೆ ತಾ. ೧೫ ರಂದು ಸೋಮವಾರ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಪ್ರತೀ ಸೋಮವಾರ ದೇಶವ್ಯಾಪಿ ಮ್ಯೂಸಿಯಂಗಳಿಗೆ ರಜೆ ಇದ್ದರೂ, ಅಮೃತ ಮಹೋತ್ಸವ ಹಿನೆÀ್ನಲೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ್ನು ತಾ.೧೫ ರಂದು ವೀಕ್ಷಕರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ಮ್ಯೂಸಿಯಂ ಸಾರ್ವಜನಿಕರ ಸಂದರ್ಶನಕ್ಕೆ ಅವಕಾಶವಿದೆ.

ಜಿಲ್ಲಾಧಿಕಾರಿ ಅವರ ಸೂಚನೆಯಂತೆ ತಾ.೧೫ ರ ರಜೆಯನ್ನು ತಾ.೧೬ ರಂದು ಮಂಗಳವಾರ ನೀಡಲಾಗುತ್ತಿದ್ದು, ಮಂಗಳವಾರ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.