ಮಡಿಕೇರಿ, ಆ. ೧೨ : ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಕೊಡಗು ಜಿಲ್ಲೆಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಮಂಜೂರಾತಿಯಾಗಿರುವ ೧೪೯ ಉಪನ್ಯಾಸಕರ ಹುದ್ದೆಗಳಲ್ಲಿ ೫೮ ಹುದ್ದೆಗಳು ಖಾಲಿ ಉಳಿದಿದ್ದು ಕಾಲೇಜುಗಳ ಸುಗಮ ಕಾರ್ಯನಿರ್ವಹಣೆಗೆ ಕಷ್ಟಸಾಧ್ಯವಾಗುತ್ತಿದೆ. ಕಡಿಮೆ ಒತ್ತಡ ಇರುವ ಕಾಲೇಜುಗಳಿಂದ ಉಪನ್ಯಾಸಕರನ್ನು, ಉಪನ್ಯಾಸಕರು ಅತೀ ಅವಶ್ಯವಿರುವ ಕಾಲೇಜುಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಇದು ಸಾಧ್ಯವಾಗದಿದ್ದರೆ ಅತಿಥಿ ಉಪನ್ಯಾಸಕರಿಂದ ಸಮಸ್ಯೆಗ ಪರಿಹಾರ ಕಂಡುಕೊಳ್ಳಲಾಗುತ್ತಿದೆಯಾದರೂ ಇನ್ನೂ ಹೆಚ್ಚಿನ ಹುದ್ದೆಗಳು ಖಾಲಿಯಾದಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ.

ಜಿಲ್ಲೆಗೆ ಮಂಜೂರಾತಿಯಾಗಿರುವ ೧೪೯ ಉಪನ್ಯಾಸಕರ ಹುದ್ದೆಗಳ ಪೈಕಿ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿAದಲೇ ೪೮ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿದ್ದವು. ಹುದ್ದೆ ಪಡೆದಿದ್ದ ೧೦ ಮಂದಿ ಉಪನ್ಯಾಸಕರು ವರ್ಗಾವಣೆಗೆ ಅರ್ಜಿ ಹಾಕಿದ್ದು, ವರ್ಗಾವಣೆಗೆ ಅನುಮತಿ ದೊರೆತ ಬಳಿಕ ಇದೀಗ ೫೮ ಹುದ್ದೆಗಳು ಖಾಲಿ ಉಳಿದಿರುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪುಟ್ಟರಾಜು ಅವರು ಮಾಹಿತಿ ಇತ್ತಿದ್ದಾರೆ. ಮೂಲತಃ ಕೊಡಗಿನ ಉಪನ್ಯಾಸಕರು ಮಾತ್ರ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಒಪ್ಪಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಮಡಿಕೇರಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೨೧ ಹುದ್ದೆಗಳ ಪೈಕಿ ಕೇವಲ ೮ ಹುದ್ದೆಗಳು ಮಾತ್ರ ಭರ್ತಿಯಾಗಿವೆ ಎಂದು ಪ್ರಾಂಶುಪಾಲ ಪಿ.ಆರ್. ವಿಜಯನ್ ಅವರು ತಿಳಿಸಿದ್ದಾರೆ. ಇದರಲ್ಲಿಯೂ ಒಬ್ಬರು ಇತರೆಡೆಗೆ ವರ್ಗಾವಣೆಗೊಂಡಿದ್ದಾರೆ.

ಅತಿಥಿ ಉಪನ್ಯಾಸರ ಹುದ್ದೆಗೆ ಸೂಕ್ತ ಉಪನ್ಯಾಸಕರು ದೊರಕದೇ ಇರುವ ಕಾರಣ ಜೀವಶಾಸ್ತç, ಅರ್ಥಶಾಸ್ತç, ಲೆಕ್ಕಶಾಸ್ತç, ಭೌಗೋಳಿಕ ಶಾಸ್ತç ಹಾಗೂ ಕನ್ನಡ ವಿಷಯಗಳಿಗೆ ಉಪನ್ಯಾಸಕರೇ ಇಲ್ಲ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಶಿಕ್ಷಣ ಇಲಾಖೆ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.