*ಗೋಣಿಕೊಪ್ಪ, ಆ. ೧೨: ಸ್ವಾತಂತ್ರö್ಯ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಮನೆ ಮನೆಗಳಲ್ಲಿ ರಾಷ್ಟçಧ್ವಜ ಹಾರಿಸುವ ಹರ್ ಘರ್ ತಿರಂಗ ಅಭಿಯಾನವನ್ನು ವೀರಾಜಪೇಟೆ ತಾಲೂಕಿನಲ್ಲಿ ಯಶಸ್ವಿಗೊಳಿಸುವಂತೆ ಶಾಸಕ ಕೆ.ಜಿ. ಬೋಪಯ್ಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಪೊನ್ನಂಪೇಟೆ ತಾ.ಪಂ. ಸಾಮಾರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ೩೯ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಧ್ವಜ ಹಾರಾಟ ದಂದು ಯಾವುದೇ ವಿವಾದಿತ ಸಮಸ್ಯೆಗಳು ಆಗದಂತೆ ಎಚ್ಚರಿಕೆ ಯಿಂದ ನಿಯಮ ಬದ್ಧವಾಗಿ ತಿರಂಗ ಹಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಗ್ರಾ.ಪಂ. ವ್ಯಾಪ್ತಿಯ ಪ್ರತಿ ಮನೆಗ ಳಲ್ಲಿಯೂ ಧ್ವಜ ಹಾರಾಟಕ್ಕೆ ಸ್ಥಳೀಯ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ನೀಡುವ ೪೫೦ ಧ್ವಜಗಳನ್ನು ಮತ್ತು ಬಿಜೆಪಿ ಪಕ್ಷ ನೀಡುವ ೧೦೦ ಧ್ವಜಗಳನ್ನು ಪಂಚಾಯಿತಿ ಪಡೆದುಕೊಂಡು ಉಳಿದ ಧ್ವಜಗಳ ಕೊರತೆಯನ್ನು ನೀಗಿಸಲು ಸ್ಥಳೀಯ ಸಂಘ- ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ತಿಳಿಸಿದರು.
ಆರ್ಜಿ ಗ್ರಾಮ ಪಂಚಾಯಿಗಳಲ್ಲಿ ೧೨೦೦ ಮನೆಗಳು, ಅರುವತ್ತೊಕ್ಲು ೧೧೦೦, ಬಾಳೆಲೆ ೧೬೦೨, ಬಲ್ಯಮುಂಡೂರು ೯೨೦, ಬಿಳುಗುಂದ ೬೯೦, ಬಿಟ್ಟಂಗಾಲ ೧೪೦೦, ಬಿ. ಶೆಟ್ಟಿಗೇರಿ ೫೨೪, ಚೆಂಬೆಬೆಳ್ಳೂರು ೧೫೧೨, ಚೆನ್ನಯ್ಯನಕೋಟೆ ೧೧೦೦, ದೇವರಪುರ ೧೨೫೦, ಗೋಣಿಕೊಪ್ಪ ೧೮೦೦, ಹಾತೂರು ೧೫೪೩, ಹಾಲುಗುಂದ ೯೧೨, ಹೊಸೂರು ೧೨೪೭, ಹುದಿಕೇರಿ ೧೩೩೩, ಕದನೂರು ೧೦೦೩, ಕಾಕೋಟುಪರಂಬು ೧೧೬೪, ಕಂಡಗಾಲ ೫೯೬, ಕಾನೂರು ೧೦೧೩, ಕಾರ್ಮಾಡು ೧೪೪೫, ಕೆ.ಬಾಡಗ ೯೧೯, ಕೆದಮುಳ್ಳೂರು ೧೧೦೦, ಕಿರುಗೂರು ೯೧೦, ಕುಟ್ಟ ೧೬೦೦, ಮಾಲ್ದಾರೆ ೧೬೭೦, ಮಾಯಮುಡಿ ೧೧೦೦, ನಾಲ್ಕೇರಿ ೪೬೬, ನಿಟ್ಟೂರು ೬೩೦, ಸಿದ್ದಾಪುರ ೧೮೪೫, ಪಾಲಿಬೆಟ್ಟ ೧೮೬೦, ಪೊನ್ನಂಪೇಟೆ ೨೫೪೪, ಪೊನ್ನಪ್ಪಸಂತೆ ೬೩೮, ಶ್ರೀಮಂಗಲ ೮೬೦, ಟಿ. ಶೆಟ್ಟಿಗೇರಿ ೧೦೦೫ ಮನೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಕಟ್ಟಡಗಳಲ್ಲಿ ತಿರಂಗ ಹಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರುಗಳು ಸಭೆಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ಕಾರ್ಯ ನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ್ಣ ಉಪಸ್ಥಿತರಿದ್ದರು.