ಮಡಿಕೇರಿ, ಆ. ೧೧: ಬೇಟೋಳಿ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ:೨೧೧/೧೮ ಗೆ ಒಳಪಟ್ಟ ೧೨,೧೫೨ ಎಕರೆ ಜಾಗವು ಬೇಟೋಳಿ ಪಂಚಾಯಿತಿಗೆ (ಆಗ ಮಂಡಲ ಪಂಚಾಯ್ತಿಯಿತ್ತು) ಸೇರಿದ್ದು ಎಂಬುದಾಗಿ ಸ್ಥಳೀಯರೀರ್ವರು ಹೂಡಿದ್ದ ದಾವೆಯನ್ನು ವಜಾಗೊಳಿಸಿ ವೀರಾಜಪೇಟೆ ಹಿರಿಯ ಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಮೂಲಕ ಸದರಿ ಜಾಗವು ಕಾನೂನಾತ್ಮಕವಾಗಿ ಅರಣ್ಯ ಇಲಾಖೆಗೆ ಸೇರಿದಂತಾಗಿದೆ.

ವೀರಾಜಪೆಟೆಯ ಹೆಗ್ಗಳ ಗ್ರಾಮದಲ್ಲಿನ ಬೇಟೋಳಿ ಗ್ರಾಮ ಪಂಚಾಯಿತಿಗೆ ಸೇರಿರುವ ಸರ್ವೆ ನಂ:೨೧೧/೧೮ ಜಾಗವು ಬೇಟೋಳಿ ಮಂಡಲ ಪಂಚಾಯಿತಿಗೆ ಸೇರಿದ್ದು ಎಂಬುದಾಗಿ ೨೦೧೫ ಫೆಬ್ರವರಿ ೧೮ ರಂದು ಹೆಗ್ಗಳ ಗ್ರಾಮದ ಅಚ್ಚಪಂಡ ಎ ಮಾಚಯ್ಯ ಹಾಗೂ ಅಚ್ಚಪಂಡ ಕರುಂಬಯ್ಯ ಅವರುಗಳು ದಾವೆ ಹೂಡಿದ್ದರು. ಇದೀಗ ೭ ವರ್ಷಗಳ ಬಳಿಕ ಆಗಸ್ಟ್ ೨ ರಂದು ನ್ಯಾಯಾಲಯ ತೀರ್ಪು ನೀಡಿದ್ದು, ಈ ದಾವೆಯನ್ನು ವಜಾ ಮಾಡಲಾಗಿದೆ. ಸದರಿ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು, ಅರಣ್ಯ ವ್ಯಾಪ್ತಿಯಲ್ಲಿ ನಿರ್ಬಂಧಿಸಲ್ಪಟ್ಟ ಚಟುವಟಿಕೆಗಳನ್ನು ಕೈಗೊಳ್ಳದಂತೆಯೂ ತೀರ್ಪು ನೀಡಿದೆ.

ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಕರುಂಬಯ್ಯ ಹಾಗೂ ಮಾಚಯ್ಯ ಅವರುಗಳು, ೧೯೨೭ರ ಜನವರಿ ೧ ರಿಂದ ಸದರಿ ಜಾಗದ ಸ್ವಾಧೀನವನ್ನು ಬೇಟೋಳಿ ಗ್ರಾಮ ಪಂಚಾಯಿತಿ ವಹಿಸಿಕೊಂಡಿದೆ. ೧೯೪೬ ಹಾಗೂ ೧೯೫೭-೫೮ನ ಜಮಾಬಂದಿ ಮಾಹಿತಿಯ ಪ್ರಕಾರ ಸದರಿ ಜಾಗವು ಪೈಸಾರಿಯಾಗಿದ್ದು, ಪಂಚಾಯಿತಿಯು ಇದನ್ನು ಲೀಸ್ ರೂಪದಲ್ಲಿಯೂ ೫ ವರ್ಷಗಳ ಕಾಲ ಕುಶಾಲಪ್ಪ ಎಂಬವರಿಗೆ ನೀಡಿತ್ತು. ಆದರೆ ೧೯೯೯ ರಂದು ಆಗಿನ ವೀರಾಜಪೇಟೆ ತಾಲೂಕು ತಹಶೀಲ್ದಾರರು ಹಲವು ಇತರ ಜಾಗಗಳೊಂದಿಗೆ ಸರ್ವೆ ನಂ: ೨೧೧/೧೮ ಜಾಗವನ್ನೂ ಸಹ ಅರಣ್ಯ ಇಲಾಖೆಗೆ ಅರಣ್ಯ ಕಾಯ್ದೆ ಉಲ್ಲಂಘಿಸಿ ವರ್ಗಾವಣೆ ಮಾಡಿದ್ದು, ಪಂಚಾಯಿತಿಯ ಹಿಡಿತದಿಂದ ಈ ಜಾಗವು ಹೊರಗುಳಿದರೆ ಊರಿನ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂಬುದಾಗಿ ಅಭಿಪ್ರಾಯಿಸಿದ್ದರು. ಸದರಿ ಜಾಗವು ಬಹಳ ವರ್ಷಗಳಿಂದ ಪಂಚಾಯಿತಿಯ ಸ್ವಾಧೀನದಲ್ಲಿಯೇ ಇದ್ದ ಕಾರಣ ‘ಡಾಕ್ಟಿçÃನ್ ಆಫ್ ಅಡ್ವಸ್ಸ್ ಪೊಸೆಶನ್’ ಮೂಲಕ ಪಂಚಾಯಿತಿಗೆ ಬಿಟ್ಟುಕೊಡಬೇಕೆಂಬುದಾಗಿ ಮನವಿ ಮಾಡಿದ್ದ ದೂರುದಾರರು, ಸ್ಪಂದನ ದೊರಕದ ಕಾರಣ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿರುವ ಜಾಗ

ಹೆಗ್ಗಳ ಗ್ರಾಮದ ಬೇಟೋಳಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ವೆ ನಂ:೨೧೧/೧೮ ಜಾಗವು ಸುಮಾರು ೧೨,೧೫೨ ಎಕರೆ ವಿಸ್ತೀರ್ಣ ಹೊಂದಿದ್ದು, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿದೆ. ಇಲ್ಲಿ ಅರಣ್ಯೇತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು, ಬೇಟೋಳಿ ಪಂಚಾಯಿತಿಯ ಸ್ವಾಧೀನದಲ್ಲಿದೆ. ಈ ಪ್ರದೇಶವು ಅರಣ್ಯಕ್ಕೇ ಸೇರಿದ್ದೆಂಬುದಾಗಿ ಪಂಚಾಯಿತಿ ಕೂಡ ಒಪ್ಪಿಕೊಂಡಿದ್ದು, ದಾವೆ ಹೂಡುವುದರಲ್ಲಿ ಅರ್ಥವಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಿಸಿದೆ. ಸದರಿ ಜಾಗವು ಬೇಟೋಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಇದು ರಕ್ಷಿತಾರಣ್ಯ ಪ್ರದೇಶಕ್ಕೆ ಒಳಪಡುತ್ತದೆ. ಸರಕಾರದ ಅಧಿಸೂಚನೆಯ ಪ್ರಕಾರ ಹಾಗೂ ೧೯೪೬ ಜಮಾಬಂದಿ ಮಾಹಿತಿಯ ಪ್ರಕಾರ ಸರ್ವೆ ನಂ. ೨೧೧/೮ ನಲ್ಲಿರುವ ಈ ಜಾಗವು ಉರುಟ್ಟಿ ರಿಸರ್ವ್ ಫಾರೆಸ್ಟ್ ಪ್ರದೇಶಕ್ಕೆ ಸೇರುತ್ತದೆ. ಈ ಪ್ರಕಾರ ಸದರಿ ಜಾಗವು ಸರಕಾರದ ಅರಣ್ಯ ಇಲಾಖೆಗೆ ಸೇರಿದ್ದೇ ಹೊರತು ಪಂಚಾಯಿತಿಗೆ ಸೇರಿದ್ದಾಗಿ ಎಲ್ಲಿಯೂ ಅಧಿಕೃತ ಮಾಹಿತಿ ಇಲ್ಲ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಿಸಿದೆ.

ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ವರ್ಗಾವಣೆ

ಪ್ರಕರಣಕ್ಕೆ ಸಂಬAಧಿಸಿದAತೆ ಈ ಹಿಂದಿನ ಮಾಕುಟ್ಟ ವಲಯ ಅರಣ್ಯಾಧಿಕಾರಿ ದೇಚಮ್ಮ ಅವರ ವಿಚಾರಣೆಯ ವೇಳೆ, ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿರುವ ಉರುಟ್ಟಿ ರಕ್ಷಿತಾರಣ್ಯ ಪ್ರದೇಶದಲ್ಲಿ ಸದರಿ ಜಾಗ ಇರುವುದಾಗಿ ತಿಳಿಸಿದ್ದರು. ಇದಕ್ಕೆ ಸಂಬAಧಿಸಿದAತೆ ಅಧಿಕೃತ ದಾಖಲಾತಿಗಳನ್ನು ನೀಡಿದ್ದರು. ವೀರಾಜಪೇಟೆ ತಹಶೀಲ್ದಾರರು ೨೦.೬.೧೯೯೯ ರಂದು ನ್ಯಾಯಬದ್ಧವಾಗಿಯೇ ೧೯೮೦ರ ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಸರ್ವೆ ನಂ:೨೧೧/೧೮ ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿದ್ದು, ಈ ಅರಣ್ಯ ಪ್ರದೇಶವನ್ನು ಯಾವುದೇ

(ಮೊದಲ ಪುಟದಿಂದ) ಕಾರಣಕ್ಕೂ ಅರಣ್ಯೇತರ ಚಟುವಟಿಕೆಗಳಿಗೆ

ಬಳಸಿಕೊಳ್ಳಬಾರದೆಂಬುದಾಗಿ ವಿಚಾರಣೆ ವೇಳೆ ತಿಳಿಸಿದರು. ಅರಣ್ಯ ಇಲಾಖೆಯ ಪರ ವಕೀಲೆ ಕಂಜಿತAಡ ಅನಿತಾ ದೇವಯ್ಯ ವಕಾಲತ್ತು ವಹಿಸಿದ್ದರು.

ಅಬಕಾರಿ ಪರವಾನಗಿ ನವೀಕರಣ ತಿರಸ್ಕಾರ

ಅರಣ್ಯ ಇಲಾಖೆಯು ಸಲ್ಲಿಸಿದ್ದ ದಾಖಲಾತಿಗಳ ಪ್ರಕಾರ ಈ ಜಾಗದ ಒಂದು ಭಾಗದಲ್ಲಿ ಮದ್ಯ ಮಾರಾಟ ಮಾಡಲು ಕಟ್ಟಡವೊಂದನ್ನು ಪಂಚಾಯಿತಿ ಬಾಡಿಗೆ ಆಧಾರದಲ್ಲಿ ಸನ್ನದುದಾರರೋರ್ವರಿಗೆ ನೀಡಿತ್ತು. ಇದು ಅರಣ್ಯ ಸಂರಕ್ಷಣಾ ಕಾಯ್ದೆ ಪ್ರಕಾರ ಕಾನೂನುಬಾಹಿರವಾಗಿದ್ದು, ಮಳಿಗೆಗೆ ಅಬಕಾರಿ ಪರವಾನಗಿಯನ್ನು ನೀಡಲು ಅಸಾಧ್ಯ. ೨೦೧೪ರಲ್ಲಿ ಈ ಅಬಕಾರಿ ಪರವಾನಗಿ ನವೀಕರಣವನ್ನು ಆಗಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರು ತಿರಸ್ಕರಿಸಿದ್ದರು.

ಬೆಂಬಲಿತ ದಾಖಲೆಗಳ ಕೊರತೆ

ಸದರಿ ಜಾಗದ ಒಂದು ಭಾಗದಲ್ಲಿ ಲೀಸ್ ಆಧಾರದಲ್ಲಿ ಇದ್ದ ವ್ಯಕ್ತಿಗೆ ಪಂಚಾಯಿತಿಯು ೨೦೧೪ ರಲ್ಲಿ ನೋಟೀಸ್ ನೀಡಿ ಜಾಗ ಖಾಲಿ ಮಾಡುವಂತೆ ಸೂಚಿಸಿದ್ದು, ಆ ವ್ಯಕ್ತಿಯು ಜಾಗ ಖಾಲಿ ಮಾಡಿದ್ದು, ಊರಿನ ಮಂದಿಗೆ ಯಾವುದೇ ತೊಂದರೆಯಾಗಿಲ್ಲ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯ ಪಟ್ಟಿತು ಹಾಗೂ ಈ ಜಾಗವು ೧೯೭೪ ರ ಸರಕಾರದ ಅಧಿಸೂಚನೆ ಪ್ರಕಾರ ಉರುಟ್ಟಿ ಕಾಯ್ದಿಸಿರಿದ ಅರಣ್ಯ ಪ್ರದೇಶ ಎಂಬುದಾಗಿ ಘೋಷಿತವಾಗಿದೆ. ದಾವೆ ಹೂಡಿದವರ ಪರ ಯಾವುದೇ ಬೆಂಬಲಿತ ದಾಖಲಾತಿಗಳು ಇಲ್ಲದ ಕಾರಣ ದಾವೆಯನ್ನು ವಜಾ ಮಾಡುವುದಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಲೋಕೇಶ್ ಎಂ.ಜಿ ಅವರು ತೀರ್ಪು ನೀಡಿದ್ದಾರೆ.