ವೀರಾಜಪೇಟೆ, ಆ. ೧೦: ದೇಶದಲ್ಲಿ ೭೫ನೇ ಸ್ವಾತಂತ್ರö್ಯ ಅಮೃತ ಮಹೋತ್ಸವವನ್ನು ಆಚರಿಸ ಲಾಗುತ್ತಿದ್ದರೂ ಅನೇಕ ನಿರು ದ್ಯೋಗಿಗಳು ಬಡ ಕಾರ್ಮಿಕರಿಗೆ ಸ್ವಂತ ಮನೆಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಕನಿಷ್ಟ ವೇತನ ಜಾರಿಯಾಗಿಲ್ಲ ಎಂದು ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ಹೇಳಿದರು. ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಿದ್ದ ಸಿ.ಐ.ಟಿ.ಯು ಸಂಘಟನೆಯ ತಾಲೂಕು ಸಮ್ಮೇಳನ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಟ್ಟಡ ವೀರಾಜಪೇಟೆ, ಆ. ೧೦: ದೇಶದಲ್ಲಿ ೭೫ನೇ ಸ್ವಾತಂತ್ರö್ಯ ಅಮೃತ ಮಹೋತ್ಸವವನ್ನು ಆಚರಿಸ ಲಾಗುತ್ತಿದ್ದರೂ ಅನೇಕ ನಿರು ದ್ಯೋಗಿಗಳು ಬಡ ಕಾರ್ಮಿಕರಿಗೆ ಸ್ವಂತ ಮನೆಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಕನಿಷ್ಟ ವೇತನ ಜಾರಿಯಾಗಿಲ್ಲ ಎಂದು ಸಿ.ಐ.ಟಿ.ಯು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು ಹೇಳಿದರು. ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಿದ್ದ ಸಿ.ಐ.ಟಿ.ಯು ಸಂಘಟನೆಯ ತಾಲೂಕು ಸಮ್ಮೇಳನ ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಟ್ಟಡ ವೀರಾಜಪೇಟೆ ಬೆಟ್ಟ ಪ್ರದೇಶದ ನಿವಾಸಿಗಳಿಗೆ ಭಾರೀ ಮಳೆ ಬಂದಾಗಲೆಲ್ಲ ಮನೆ ಖಾಲಿ ಮಾಡಿ ಎನ್ನುವ ಅಧಿಕಾರಿಗಳು ಇದುವರೆಗೂ ಜಾಗ ಖರೀದಿ ಮಾಡಿ ಮನೆ ಕಟ್ಟಲಿಲ್ಲ ಎಂದ ಎ.ಸಿ. ಸಾಬು ದಿನನಿತ್ಯ ಬಳಕೆಯ ಆಹಾರ ಸೇರಿದಂತೆ ಎಲ್ಲ ಸಾಮಗ್ರಿಗಳ ಬೆಲೆ ಏರಿಕೆ ಮಾಡುತ್ತಿರುವುದು ಸರಿಯಲ್ಲ ಇದರ ಬಗ್ಗೆ ಹೋರಾಟದ ಅನಿವಾರ್ಯತೆ ಇದೆ ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಕೇಂದ್ರ ಸರಕಾರ ತೆರಿಗೆಯನ್ನು ಹೆಚ್ಚು ಮಾಡುವ ಮೂಲಕ ೭೫ನೇ ಅಮೃತ ಮಹೋತ್ಸವವನ್ನು ಆಚರಿಸಿ ಕೊಳ್ಳುತ್ತಿದೆ. ಕಾರ್ಮಿಕರು ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈಗಿನ ಬೆಲೆ ಏರಿಕೆಯಿಂದ ಬಡ ಕುಟುಂಬಗಳು ತತ್ತರಿಸಿ ಹೋಗಿದ್ದಾರೆ. ಈಗಿನ ಸರಕಾರದ ನೀತಿಯನ್ನು ಬದಲಾಯಿಸಲು ಎಲ್ಲಾ ಸಂಘಟನೆ ಗಳು ಒಗ್ಗಟ್ಟಿನಿಂದ ಹೋರಾಟ ನಡೆಸ ಬೇಕಾಗಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಐಟಿಯು ಸಂಘಟನೆಯ ಉಪಾಧ್ಯಕ್ಷ ಎನ್.ಡಿ. ಕುಟ್ಟಪ್ಪ ಮಾತನಾಡಿ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಮಿಕರ ಬೇಡಿಕೆಗಳಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದರು. ಅಕ್ಷರ ದಾಸೋಹ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪ್ರಮಿಳಾ ಅವರು ಮಾತನಾಡಿ, ಕಳೆದ ೨೦ ವರ್ಷಗಳಿಂದ ಬಿಸಿಯೂಟ ನೌಕರರಾಗಿ ದುಡಿಯುತ್ತಿದ್ದರು ಸರಕಾರ ತಿಂಗಳಿಗೆ ರೂ. ೨,೬೦೦ ನೀಡುತ್ತಿದೆ. ಸಂಭಾವನೆ ಹೆಚ್ಚಿಸಿಲ್ಲ. ಕಳೆದ ಮೂರು ತಿಂಗಳಿನಿAದಲೂ ಸಂಭಾವನೆ ನೀಡಿಲ್ಲ ಎಂದರು. ವೇದಿಕೆಯಲ್ಲಿ ಹಮಾಲಿ ಸಂಘಟನೆಯ ಮುಖಂಡ ಶಾಜಿ ರಮೇಶ್, ಸಂಘಟನೆಯ ಜಿಲ್ಲಾ ಸಮಿತಿಯ ಹೆಚ್.ಬಿ. ರಮೇಶ್, ಕಟ್ಟಡ ಕಾರ್ಮಿಕ ಸಂಘದ ಸಿ.ಎ. ಹಮೀದ್, ತಾಲೂಕು ಸಂಚಾಲಕ ರಾಚಪ್ಪಾಜಿ ಇತರರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಸಿದ್ದಾಪುರ, ಅಮ್ಮತಿ, ಹೊಳಮಾಳ, ವೀರಾಜಪೇಟೆ ಹಾಗೂ ಇತರೆಡೆಗಳಿಂದ ಕಾರ್ಮಿಕರು ಭಾಗವಹಿಸಿದ್ದರು.