ಮಡಿಕೇರಿ, ಆ. ೧೦: ಮಡಿಕೇರಿಯ ರೆಡ್‌ಕ್ರಾಸ್‌ನ ಶತಮಾನೋತ್ಸವ ಭವನದಲ್ಲಿ ತೆರಯಲ್ಟಟ್ಟ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂತ್ರಸ್ತರಿಗೆ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ವಿಪರೀತ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸುಮಾರು ೧೨೫ ಮಂದಿ ಊಟ ಸವಿದರು. ರೋಟರಿ ವುಡ್ಸ್ನ ಅಧ್ಯಕ್ಷ ಸಂಪತ್ ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್, ಸದಸ್ಯರಾದ ಕಶ್ಯಪ್, ವಿಕ್ರಂ ಶೆಟ್ಟಿ, ರವಿ, ರೋಟೇರಿಯನ್‌ಗಳಾದ ಅನಿಲ್ ಎಚ್.ಟಿ, ಅನಂತಶಯನ, ರೊಟೇರಿಯನ್ ಹಾಗೂ ರೆಡ್‌ಕ್ರಾಸ್ ಅಧ್ಯಕ್ಷ ರವೀಂದ್ರ ರೈ ಹಾಗೂ ಇತರರು ಇದ್ದರು.