ಗೋಣಿಕೊಪ್ಪಲು. ಆ. ೧೦: ವಿದ್ಯುತ್ ಸ್ಪರ್ಶದಿಂದ ಜಾತಿ ಎತ್ತು ಹಾತೂರು ಗ್ರಾಮದಲ್ಲಿ ಸಾವನ್ನಪ್ಪಿದೆ. ಗ್ರಾಮದ ಕಾಳಂಗಡ ಕಾರ್ಯಪ್ಪ ಎಂಬುವರಿಗೆ ಸೇರಿದ ಎತ್ತು ವಿದ್ಯುತ್ ತಂತಿಯ ಸ್ಪರ್ಶಕ್ಕೆ ಸಿಲುಕಿಕೊಂಡು ಮೃತಪಟ್ಟಿದೆ.

ಸುದ್ದಿ ತಿಳಿದ ಪಶುವೈದ್ಯ ಇಲಾಖೆಯ ತಾಲೂಕು ಅಧಿಕಾರಿ ಡಾ. ಶಾಂತೇಶ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಸುರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು, ಎತ್ತು ದಾಟುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದೆ.