ಭಾಗಮಂಡಲ, ಆ. ೧೧: ಸ್ವಾತಂತ್ರö್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಸಂದರ್ಭ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಮೊಟ್ಟನ ಕಾರ್ಯಪ್ಪ ರವಿಕುಮಾರ್ ಅವರಿಗೆ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮವನ್ನು ತಾ. ೧೫ ರಂದು ಭಾಗಮಂಡಲದ ವ್ಯವಸಾಯ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೧.೩೦ ಗಂಟೆಗೆ ಏರ್ಪಡಿಸಲಾಗಿದೆ.

ರವಿಕುಮಾರ್ ತಮ್ಮ ಹುಟ್ಟೂರಾದ ಭಾಗಮಂಡಲ ನಾಡಿನಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತಿದ್ದಾರೆ. ಗ್ರಾಮದಲ್ಲಿ ೧೫ ವರ್ಷಗಳಿಂದ ಶ್ರೀ ಕಾವೇರಿ ಜನ್ಮಭೂಮಿ ಟ್ರಸ್ಟ್ ಅನ್ನು ಸ್ಥಾಪಿಸಿ ಅನಾಥ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ.

ಭಾಗಮಂಡಲದಿAದ ಚೇರಂಗಾಲ, ಕೋರಂಗಾಲ ಮತ್ತು ತಲಕಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಾಣ ಮಾಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಕಾವೇರಿ, ಕನ್ನಿಕೆ ಮತ್ತು ಸುಜ್ಯೊತಿ ನದಿಗಳು ಉಕ್ಕಿ ಹರಿದು ತೋಟ-ಗದ್ದೆಗಳಿಗೆ ಹಾನಿ ಆಗುತ್ತಿತ್ತು.

ಈ ನದಿಗಳ ಮತ್ತು ಅವುಗಳ ಉಪನದಿಗಳ ಸುಮಾರು ೧೦ ಕಿ.ಮೀ. ವ್ಯಾಪ್ತಿಯ ಹರಿವಿನ ದಾರಿಯಲ್ಲಿ ಹೂಳು ತೆಗೆಸಿ ಕೃಷಿಕರಿಗೆ ನೆರವಾಗಿದ್ದಾರೆ. ಹೀಗೆ ಹತ್ತು ಹಲವು ಜನಪರ ಕೆಲಸಗಳನ್ನು ಅವರು ನಿರ್ವಹಿಸಿರುವುದರಿಂದ ಭಾಗಮಂಡಲ ನಾಡಿನಲ್ಲಿ ಅವರಿಗೆ ಸನ್ಮಾನ ಏರ್ಪಡಿಸಲಾಗಿದೆ.

ರವಿಕುಮಾರ್ ಭಾಗಮಂಡಲ ನಾಡು ಚೇರಂಗಾಲ ಗ್ರಾಮದ ಕ್ಯಾಪ್ಟನ್ ದಿವಂಗತ ಮೊಟ್ಟನ ಕಾರ್ಯಪ್ಪ ಅವರ ಪುತ್ರ.