ಮಡಿಕೇರಿ, ಆ. ೧೦: ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ನಿನ ಶ್ರೀ ಮಹಾಗಣಪತಿ ಸೇವಾ ಸಮಿತಿಯ ೩೦ನೇ ವರ್ಷದ ಗಣೇಶೋತ್ಸವಕ್ಕೆ ಸಮಿತಿ ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಅರುಣ್ ಶೆಟ್ಟಿ, ಕಾರ್ಯದರ್ಶಿಯಾಗಿ ಮಹೇಶ್ ಜೈನಿ, ಉಪಾಧ್ಯಕ್ಷರಾಗಿ ರವಿ, ಟಾಟ ಮಾದಪ್ಪ, ನಾರಾಯಣ, ಮುತ್ತು ಚಿಣ್ಣಪ್ಪ, ಕೃಷ್ಣ ಹಾಗೂ ಖಜಾಂಚಿಯಾಗಿ ಬಿ.ಎಸ್. ಪ್ರಶಾಂತ್ ಆಯ್ಕೆಗೊಂಡಿದ್ದಾರೆ.