ನಾಪೋಕ್ಲು, ಆ. ೧೧: ಸಮೀಪದ ಕಲ್ಲುಮೊಟ್ಟೆ ಅಂಗನವಾಡಿ ಕೇಂದ್ರದ ಬಳಿ ನಾಪೋಕ್ಲುವಿನ ಶೌರ್ಯ ತಂಡದ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು. ಅಂಗನವಾಡಿ ಮಕ್ಕಳಿಗೆ ನಡೆಯಲು ದಾರಿ ಮಾಡಿ ಬೇಲಿ ವ್ಯವಸ್ಥೆ ಮಾಡಿಕೊಟ್ಟರು. ಬೀದಿ ಹಸುಗಳಿಂದಾಗಿ ತುಂಬಾ ಸಮಸ್ಯೆಯಾಗುವುದನ್ನು ಗಮನಿಸಿದ ಶೌರ್ಯ ಸದಸ್ಯರು ಆವರಣ ಸ್ವಚ್ಛ ಮಾಡಿ ಬಿದಿರು ಕಡಿದು ತಂದು ಬೇಲಿ ವ್ಯವಸ್ಥೆ ಮಾಡಿದರು.
ಸೇವಾ ಕಾರ್ಯದಲ್ಲಿ ಬಾಳೆಯಡ ದಿವ್ಯ, ಸೀನಾ ಮಾಧವನ್, ದಿಲೀಶ್ ಎನ್.ಬಿ., ಶಂಕರ್ ಬಿ.ಹೆಚ್., ನಾರಾಯಣ, ಬಿಪಿನ್ ದಾಸ್, ವಿಜಯ್ ಟಿ.ಆರ್., ಚಂದ್ರಕಲಾ, ಅಜಿತಾ, ಸರಸ್ವತಿ ಭಾಗವಹಿಸಿದ್ದರು.