ಸೋಮವಾರಪೇಟೆ, ಆ. ೧೦: ಸಮೀಪದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಬೀಗವನ್ನು ಒಡೆದು ಒಳ ನುಗ್ಗಿರುವ ಕಳ್ಳರು, ಅಕ್ಷರ ದಾಸೋಹಕ್ಕೆ ಬಳಸಲಾಗುತ್ತಿದ್ದ ೨ ಅಡುಗೆ ಅನಿಲ ಸಿಲಿಂಡರ್ಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ಕಳೆದ ೫ ದಿನಗಳಿಂದ ಶಾಲೆಗೆ ನಿರಂತರವಾಗಿ ರಜೆ ಘೋಷಿಸಲಾಗಿದ್ದ ಸಂದರ್ಭ ಸಾಧಿಸಿರುವ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಶಾಲೆಯ ೪ ಕೊಠಡಿಗಳ ಬೀಗವನ್ನು ಒಡೆದು ಒಳ ನುಗ್ಗಿರುವ ಖದೀಮರು ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲು ಬಳಸುತ್ತಿದ್ದ ೨ ಸಿಲಿಂಡರ್ಗಳನ್ನು ಕಳವು ಮಾಡಿದ್ದಾರೆ.
ಶಾಲೆಯ ಅಕ್ಷರ ದಾಸೋಹಕ್ಕೆ ಸಂಬAಧಿಸಿದ ಪರಿಕರ, ದಿನಸಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನ ಬೀಗ ಒಡೆದು, ಒಳ ಪ್ರವೇಶಿಸಿರುವ ಕಳ್ಳರು ಖಾಲಿ ಸಿಲಿಂಡರ್ಗಳನ್ನು ಅಲ್ಲೇ ಬಿಟ್ಟು, ಗ್ಯಾಸ್ ತುಂಬಿದ್ದ ಸಿಲಿಂಡರ್ಗಳನ್ನು ಕದ್ದೊಯ್ದಿದ್ದಾರೆ.
ಇದರೊಂದಿಗೆ ಶಾಲಾ ಮುಖ್ಯೋಪಾಧ್ಯಾಯರ ಕೊಠಡಿ, ಸಹ ಶಿಕ್ಷಕರ ಕೊಠಡಿ, ವಿಜ್ಞಾನ ಕೊಠಡಿಯ ಬೀಗವನ್ನು ಒಡೆದು ಬೆಲೆ ಬಾಳುವ ವಸ್ತುಗಳಿಗೆ ಹುಡುಕಾಟ ನಡೆಸಿದ್ದಾರೆ. ಇಂದು ಶಾಲೆ ಪುನರ್ ಆರಂಭಗೊAಡಿದ್ದು, ಮುಖ್ಯೋಪಾಧ್ಯಾಯಿನಿ ತಂಗಮ್ಮ ಅವರು ಬೆಳಿಗ್ಗೆ ಶಾಲೆಗೆ ಆಗಮಿಸಿದ ಸಂದರ್ಭ ಕೃತ್ಯ ಬೆಳಕಿಗೆ ಬಂದಿದೆ.
ತಕ್ಷಣ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್. ಸತೀಶ್ ಅವರಿಗೆ ಮಾಹಿತಿ ನೀಡಿದ್ದು, ಸತೀಶ್ ಅವರು ಪೊಲೀಸ್ ಠಾಣೆಗೆ ಘಟನೆಯ ವಿವರ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ರಮೇಶ್ಕುಮಾರ್, ಅಪರಾಧ ವಿಭಾಗದ ವಿರೂಪಾಕ್ಷ ಸೇರಿದಂತೆ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ.