ಸಿದ್ದಾಪುರ, ಆ. ೧೦: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಜಿಲ್ಲೆಯ ರಾಷ್ಟಿçÃಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸೌಲಭ್ಯಗಳನ್ನು ಒದಗಿಸುವ ಮೂಲಕ ೨೨ ಖಾಸಗಿ ವಾಣಿಜ್ಯ ಬ್ಯಾಂಕುಗಳ ಪೈಕಿ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಪ್ರಶಂಸೆ ವ್ಯಕ್ತಪಡಿಸಿದರು. ಸಿದ್ದಾಪುರದ ಡಿಸಿಸಿ ಬ್ಯಾಂಕ್‌ನ ನೂತನ ಎಟಿಎಂ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಸುಮಾರು ೧೫ ಎಟಿಎಂ ಘಟಕಗಳನ್ನು ಸ್ಥಾಪಿಸಿದ್ದು, ೨೦ ಎಟಿಎಂ ಘಟಕಗಳ ಸ್ಥಾಪನೆಯ ಗುರಿ ಹೊಂದಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ ಎಂದರು. ಅಲ್ಲದೆ ಬ್ಯಾಂಕ್ ಗ್ರಾಮೀಣ ಭಾಗದಲ್ಲಿ ೫೭ ವಿಧದ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಿದ್ದು, ಕಳೆದ ಆರು ತಿಂಗಳುಗಳಿAದ ಜಿಲ್ಲೆಯ ಜನರ ಹಾಗೂ ಗ್ರಾಹಕರ ಹಿತ ದೃಷ್ಟಿಯಿಂದ ಬಡ್ಡಿ ದರವನ್ನು ಕಡಿಮೆ ಮಾಡಿರುವ ಪರಿಣಾಮ ಸುಮಾರು ರೂ. ೧.೯೭ ಕೋಟಿ ನಷ್ಟ ಅನುಭವಿಸಿದರೂ ಕೂಡ ಗ್ರಾಹಕರಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.

ಅಲ್ಲದೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅತೀ ಹೆಚ್ಚು ಲಾಭ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಡಿಸಿಸಿ ಬ್ಯಾಂಕ್ ಒಟ್ಟು ೧.೩೬ ಲಕ್ಷ ಖಾತೆದಾರರನ್ನು ಹೊಂದಿದೆ. ಮೊಬೈಲ್ ಬ್ಯಾಂಕ್‌ಗೆ ಮಾರು ಹೋಗಿರುವ ಯುವಜನತೆಯು ಖಾತೆ ತೆರೆಯಲು ಹಿಂಜರಿಯುತ್ತಿದ್ದು ಮುಂದಿನ ದಿನಗಳಲ್ಲಿ ಮೊಬೈಲ್ ಬ್ಯಾಂಕಿAಗ್ ಸೇವೆಯನ್ನು ಒದಗಿಸಲಾಗುವುದೆಂದರು.

ಈ ಸಂದರ್ಭ ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎನ್. ರಮೇಶ್, ನಿರ್ದೇಶಕರಾದ ಹೊಟ್ಟೆಂಗಡ ರಮೇಶ್, ಜಲಜಾಕ್ಷಿ, ಹಿರಿಯ ಗ್ರಾಹಕರಾದ ಅಜ್ಜಮಾಡ ಸೀತಾ ನಾಚಪ್ಪ, ಪ್ರಧಾನ ವ್ಯವಸ್ಥಾಪಕರು ಎ ಎಸ್ ಪಾರ್ವತಿ, ಸಿದ್ದಾಪುರ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಂ.ಎA. ಪೆಮ್ಮಯ್ಯ, ಸಿಬ್ಬಂದಿಗಳು ಹಾಗೂ ಗ್ರಾಹಕರು ಹಾಜರಿದ್ದರು.