ಸಿದ್ದಾಪುರ, ಆ. ೧೧: ಅಖಂಡ ಭಾರತವನ್ನು ಕಟ್ಟುವ ಸಂಕಲ್ಪವೇ ಅಖಂಡ ಭಾರತ ಸಂಕಲ್ಪ ದಿನ ಎಂದು ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಸಂಯೋಜಕ ಮಹೇಶ್ ಕಡಗದಾಳು ಹೇಳಿದರು. ಹಿಂದೂ ಜಾಗರಣ ವೇದಿಕೆ ಸಿದ್ದಾಪುರ ವಲಯ ಘಟಕದ ವತಿಯಿಂದ ಸಿದ್ದಾಪುರ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅವರು ಮಾತನಾಡಿದರು. ಭಾರತದ ವಿಭಜನೆಗೆ ಹಲವರ ವಿರೋಧವಿದ್ದರೂ ಕೂಡ ದೇಶದ ವಿಭಜನೆಗೆ ಮುಂದಾಗಿ ಭಾರತವನ್ನು ಮೂರು ಭಾಗಗಳನ್ನಾಗಿ ಮಾಡಿರುವುದರ ಫಲವೇ ಭಾರತ ಇಂದು ಭಯೋತ್ಪಾದಕ ಶಕ್ತಿಗಳ ವಿರುದ್ಧ ಹೋರಾಡುವಂತಾಗಿದೆ ಎಂದರು.

ಸಿದ್ದಾಪುರದ ಕಾಫಿ ಬೆಳೆಗಾರ ದೇವಣೀರ ಸುಜಯ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿದ್ದರು. ಭೂ ಸುರಕ್ಷ ಸಮಿತಿಯ ಉಮೇಶ್, ಶಾಂತಯAಡ ತಿಮ್ಮಯ್ಯ, ವೀರಾಜಪೇಟೆ ತಾಲೂಕು ಸಂಯೋಜಕ ನಾಗೇಶ್, ಹಿಂದೂ ಯುವ ವಾಹಿಣಿಯ ವೀರಾಜಪೇಟೆ ತಾಲೂಕು ಪ್ರಮುಖ್ ಜಿತಿನ್ ಹಾಜರಿದ್ದರು. ಶರಣ್ ನಿರೂಪಿಸಿ, ಸುನಿಲ್ ಸ್ವಾಗತಿಸಿ, ವಂದಿಸಿದರು.