ಮಡಿಕೇರಿ, ಆ. ೧೧: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ವರುಣನ ಆರ್ಭಟ ಇದೀಗ ಒಂದಷ್ಟು ಇಳಿಮುಖವಾಗಿದೆ. ವ್ಯಾಪಕ ಹಾನಿಯೊಂದಿಗೆ ಹಲವು ದಿನಗಳ ಕಾಲ ತೀವ್ರ ಸಂಕಷ್ಟ ಎದುರಿಸು ವಂತಾಗಿದ್ದ ಜನಜೀವನ ಇದೀಗ ಮೆಲ್ಲನೆ ಒಂದಷ್ಟು ಚೇತರಿಕೆ ಕಾಣುತ್ತಿದೆ. ಆದರೂ, ಮತ್ತೆ ಯಾವ ಸಂದರ್ಭದಲ್ಲಿ ಮಳೆ - ಗಾಳಿ ತೀವ್ರಗೊಳ್ಳುವುದೋ ಎಂಬ ಆತಂಕ ಮಾತ್ರ ಇನ್ನೂ ದೂರವಾಗಿಲ್ಲ. ಜಿಲ್ಲೆಯ ಹಲವೆಡೆ ಕಳೆದ ರಾತ್ರಿ ಧಾರಾಕಾರ ಮಳೆಯೊಂದಿಗೆ ರಭಸದ ಗಾಳಿ ಕಂಡುಬAದಿತ್ತು. ತಾ. ೧೧ರಂದು ಹಗಲು ಇದು ಒಂದಷ್ಟು ತಹಬದಿಗೆ ಬಂದAತಿದ್ದು, ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಬಿಸಿಲಿನ ವಾತಾವರಣವೂ ಎದುರಾಗಿ ಜನತೆ ನಿಟ್ಟುಸಿರು ಬಿಡುವಂತಾಗಿತ್ತು. ಗುರುವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆಗಳಲ್ಲಿ
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಸರಾಸರಿ ೨.೧೦ ಇಂಚು ಮಳೆಯಾಗಿದೆ. ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ಈ ಮೂರೂ ತಾಲೂಕುಗಳಲ್ಲಿಯೂ ಸರಾಸರಿ ೨ ಇಂಚಿಗೂ ಅಧಿಕ ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲಿ ೪ ಇಂಚಿಗೂ ಅಧಿಕ ಮಳೆ ಬಿದ್ದಿದ್ದರೆ, ಶಾಂತಳ್ಳಿಯಲ್ಲಿ ೪.೯೦ ಇಂಚು ಮಳೆಯಾಗಿದೆ. ಮಡಿಕೇರಿ ಹೋಬಳಿಯಲ್ಲಿ ೧.೩೮, ನಾಪೋಕ್ಲು ೨.೨೦, ಹುದಿಕೇರಿ ೨.೩೧, ಶ್ರೀಮಂಗಲ ೪.೦೪, ಪೊನ್ನಂಪೇಟೆ ೩.೪೦, ಅಮ್ಮತ್ತಿ ೧.೩೪, ಬಾಳೆಲೆ ೧.೧೬ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕ.ಸ.ಬಾ. ೨.೧೩, ಶನಿವಾರಸಂತೆ ೧.೫೨, ಕೊಡ್ಲಿಪೇಟೆ ೨.೬೦ ಇಂಚು ಮಳೆ ದಾಖಲಾಗಿದೆ.ಗೋಣಿಕೊಪ್ಪಲು: ಬಿ. ಶೆಟ್ಟಿಗೇರಿ, ಕೊಂಗಣ, ಒಂದನೇ ರುದ್ರಗುಪ್ಪೆ ಸೇರಿದಂತೆ ಇತರೆಡೆಗಳಲ್ಲಿ ಕಳೆದ ಒಂದು ವಾರದಿಂದ ಪ್ರತಿ ದಿನ ಸರಾಸರಿ ೫ ಇಂಚು ಮಳೆಯಾಗುತ್ತಿದೆ. ಇದರಿಂದ ಈ ಭಾಗದ ರೈತರ ತೋಟದಲ್ಲಿ ಬೆಳೆದಿರುವ ಕಾಫಿ, ಅಡಿಕೆ, ಮೆಣಸು ಸೇರಿದಂತೆ ಇನ್ನಿತರ ಬೆಳೆಗಳು ಮಳೆಯ ರಭಸಕ್ಕೆ ಹಾಗೂ ಶೀತದ ವಾತಾವರಣಕ್ಕೆ ಉದುರಲಾರಂಭಿಸಿದೆ. ಇದರಿಂದಾಗಿ ವಾರ್ಷಿಕವಾಗಿ ಇದನ್ನೇ ನಂಬಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.
ಒಂದೆಡೆ ಮಳೆ ಸುರಿಯುತ್ತಿದ್ದರೆ ಇನ್ನೊಂದೆಡೆ ಈ ಭಾಗದಲ್ಲಿ ಕಾಡಾನೆಗಳ ಉಪಟಳ ಎಲ್ಲೆ ಮೀರಿದೆ. ರೈತರ ತೋಟದಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳನ್ನು ಓಡಿಸುವುದೇ ಈ ಭಾಗದ ರೈತರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ, ಅಲ್ಲದೆ ವಿಪರೀತ ಮಳೆ ಇರುವುದರಿಂದ ರೈತರು ತಮ್ಮ ಕಾಫಿ ತೋಟಗಳಿಗೆ ತೆರಳಲು ಗೋಣಿಕೊಪ್ಪಲು: ಬಿ. ಶೆಟ್ಟಿಗೇರಿ, ಕೊಂಗಣ, ಒಂದನೇ ರುದ್ರಗುಪ್ಪೆ ಸೇರಿದಂತೆ ಇತರೆಡೆಗಳಲ್ಲಿ ಕಳೆದ ಒಂದು ವಾರದಿಂದ ಪ್ರತಿ ದಿನ ಸರಾಸರಿ ೫ ಇಂಚು ಮಳೆಯಾಗುತ್ತಿದೆ. ಇದರಿಂದ ಈ ಭಾಗದ ರೈತರ ತೋಟದಲ್ಲಿ ಬೆಳೆದಿರುವ ಕಾಫಿ, ಅಡಿಕೆ, ಮೆಣಸು ಸೇರಿದಂತೆ ಇನ್ನಿತರ ಬೆಳೆಗಳು ಮಳೆಯ ರಭಸಕ್ಕೆ ಹಾಗೂ ಶೀತದ ವಾತಾವರಣಕ್ಕೆ ಉದುರಲಾರಂಭಿಸಿದೆ. ಇದರಿಂದಾಗಿ ವಾರ್ಷಿಕವಾಗಿ ಇದನ್ನೇ ನಂಬಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.
ಒಂದೆಡೆ ಮಳೆ ಸುರಿಯುತ್ತಿದ್ದರೆ ಇನ್ನೊಂದೆಡೆ ಈ ಭಾಗದಲ್ಲಿ ಕಾಡಾನೆಗಳ ಉಪಟಳ ಎಲ್ಲೆ ಮೀರಿದೆ. ರೈತರ ತೋಟದಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳನ್ನು ಓಡಿಸುವುದೇ ಈ ಭಾಗದ ರೈತರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ, ಅಲ್ಲದೆ ವಿಪರೀತ ಮಳೆ ಇರುವುದರಿಂದ ರೈತರು ತಮ್ಮ ಕಾಫಿ ತೋಟಗಳಿಗೆ ತೆರಳಲು ಸೋಮವಾರಪೇಟೆ: ತಾಲೂಕು ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿದ್ದು, ಅಲ್ಲಲ್ಲಿ ಮನೆಗಳು ಕುಸಿದು ನಷ್ಟ ಸಂಭವಿಸುತ್ತಿವೆ. ವಾಸದ ಮನೆಯ ಗೋಡೆ, ಛಾವಣಿಗೆ ಹಾನಿಯಾಗುತ್ತಿದ್ದು, ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ.
ಪುಷ್ಪಗಿರಿ ಬೆಟ್ಟ ಶ್ರೇಣಿ ಪ್ರದೇಶದಲ್ಲಿ ಭಾರೀ ವರ್ಷಾಧಾರೆಯಾಗುತ್ತಿದೆ. ದಿನದ ೨೪ ಗಂಟೆಯೂ ಮಳೆಯಾಗುತ್ತಿದ್ದು, ಗಾಳಿಯ ಆರ್ಭಟವೂ ಜೋರಾಗಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೨೦ ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೫೩.೪ ಮಿ.ಮೀ., ಶನಿವಾರಸಂತೆಗೆ ೩೮, ಕೊಡ್ಲಿಪೇಟೆಗೆ ೬೫ ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.
ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದ ರಾಜು ಅವರಿಗೆ ಸೇರಿದ ಹಸು ಅತೀ ಶೀತದಿಂದ ಸಾವನ್ನಪ್ಪಿದೆ. ಸ್ಥಳಕ್ಕೆ ಪಶು ವೈದ್ಯ ಇಲಾಖಾಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕಾರೆಕೊಪ್ಪ ಬಸವನಹಳ್ಳಿ ಗ್ರಾಮದ ಪಳನಿಸ್ವಾಮಿ ಅವರಿಗೆ ಸೇರಿದ ವಾಸದ ಮನೆಯ ಛಾವಣಿ ಶೀಟ್‌ಗಳು ಗಾಳಿಗೆ ಹಾರಿಹೋಗಿ ನಷ್ಟ ಸಂಭವಿಸಿದೆ. ಕೊಡ್ಲಿಪೇಟೆ ಹೋಬಳಿ ಹಾರೋಹಳ್ಳಿ ಗ್ರಾಮದ ಹರೀಶ್ ಅವರಿಗೆ ಸೇರಿದ ಮನೆಯ ಗೋಡೆ ಕುಸಿದು ಶೇ. ೪೦ ರಷ್ಟು ಹಾನಿಯಾಗಿದೆ. ನೀರುಗುಂದ ಗ್ರಾಮದ ರಾಜಮ್ಮ ಅವರ ಮನೆಯ ಗೋಡೆ ಕುಸಿತಗೊಂಡಿದೆ.
ಶನಿವಾರಸAತೆ ಸಮೀಪದ ಬಿದರೂರು ಗ್ರಾಮದ ಕೆ.ಎಂ. ಅಮೀರ್ ಅವರಿಗೆ ಸೇರಿದ ವಾಸದ ಮನೆಯ ಒಂದು ಪಾರ್ಶ್ವ ಕುಸಿಯುತ್ತಿದೆ. ಮೂವತ್ತೊಕ್ಲು ಗ್ರಾಮದ ಮುತ್ತಪ್ಪ ಅವರಿಗೆ ಸೇರಿದ ವಾಸದ ಮನೆ ಸಂಪೂರ್ಣ ಕುಸಿದುಬಿದ್ದು, ಕುಟುಂಬವನ್ನು ಸಂಬAಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಜಂಬೂರು ಗ್ರಾಮದ ರಂಜಿತ್ ಅವರಿಗೆ ಸೇರಿದ ವಾಸದ ಮನೆಯ ಮೇಲೆ ಮರ ಬಿದ್ದು, ಛಾವಣಿ ಹಾಗೂ ಗೋಡೆಗೆ ಹಾನಿಯಾಗಿದೆ.