*ಗೋಣಿಕೊಪ್ಪ, ಆ. ೧೧: ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಮಾನಿಲ್ ಅಯ್ಯಪ್ಪ ಯುವಕ ಸಂಘ, ಕೊಡವ ಕೂಟ, ಅಖಿಲ ಅಮ್ಮಕೊಡವ ಸಮಾಜ ಆಶ್ರಯದಲ್ಲಿ ಸೆಪ್ಟೆಂಬರ್ ೧೦ ಮತ್ತು ೧೧ ರಂದು ಕೊಡವ ಮತ್ತು ಅಮ್ಮಕೊಡವ ಕೌಟುಂಬಿಕ ವಾಲಿಬಾಲ್ ಟೂರ್ನಿ ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ನಡೆಯಲಿದೆ ಎಂದು ಕೊಡವ ಕೂಟ ಸಂಚಾಲಕ ಸಣ್ಣುವಂಡ ಬಿ. ರಮೇಶ್ ತಿಳಿಸಿದ್ದಾರೆ.
ಕೊಡವ ಮತ್ತು ಅಮ್ಮಕೊಡವ ಕುಟುಂಬಗಳು ಒಂದಾಗಿ ಕೈಲ್ಪೊಳ್ದ್ ನಮ್ಮೆ ಪ್ರಯುಕ್ತ ಕಳೆದ ೮ ವರ್ಷಗಳಿಂದ ಟೂರ್ನಿ ನಡೆಸುತ್ತಾ ಬಂದಿದ್ದು, ಸೆ. ೧೧ ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಕೂಡ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾಲಿಬಾಲ್ ತಂಡದಲ್ಲಿ ಗರಿಷ್ಠ ೬ ಆಟಗಾರರು ಭಾಗವಹಿಸಬಹುದು. ಸೆ. ೧ ರೊಳಗೆ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. ಎರಡು ದಿನ ಅನ್ನದಾನದ ವ್ಯವಸ್ಥೆ ಇರುತ್ತದೆ. ಕ್ರೀಡೆಯ ಮೂಲಕ ಕೊಡಗಿನ ಮೂಲ ಅಸ್ತಿತ್ವ, ಆಚಾರ-ವಿಚಾರವನ್ನು ತಿಳಿಸಲು ಪ್ರಯೋಜನವಾಗುತ್ತಿದೆ.
ದಾನಿಗಳಾದ ಸಣ್ಣುವಂಡ ವಿನಯ್ ಅಯ್ಯಪ್ಪ, ಸಣ್ಣುವಂಡ ಗಣೇಶ್ ಪೊನ್ನಣ್ಣ, ಸಣ್ಣುವಂಡ ಬಿನಿಲ್ ಗಣಪತಿ, ಆಪಟ್ಟೀರ ಸಿ. ಪ್ರದೀಪ್, ಸಣ್ಣುವಂಡ ದಿಲೀಪ್ ಸೋಮಣ್ಣ ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ೯೪೪೯೯೦೭೯೭೫, ೬೩೬೨೩೬೧೨೧೯ ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಸಣ್ಣುವಂಡ ವಿನು ವಿಶ್ವನಾಥ್, ಉಪಾಧ್ಯಕ್ಷ ಆಪಟ್ಟೀರ ಸಿ. ಪ್ರದೀಪ್, ಯುವಕ ಸಂಘದ ಅಧ್ಯಕ್ಷ ಚೆಪ್ಪುಡೀರ ಪ್ರದೀಪ್ ಪೂವಯ್ಯ, ಸದಸ್ಯ ಸಣ್ಣುವಂಡ ವಿನಯ್ ಅಯ್ಯಪ್ಪ ಇದ್ದರು.