ದೇಶದ ೪೯ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಉದಯ್ ಉಮೇಶ್ ಲಲಿತ್ ನೇಮಕ

ನವದೆಹಲಿ, ಆ. ೧೦: ದೇಶದ ೪೯ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಕಾನೂನು ಸಚಿವಾಲಯ ಮಾಹಿತಿ ನೀಡಿದ್ದು, ದೇಶದ ೪೯ನೇ ಸಿಜೆಐಯಾಗಿ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಶೀಘ್ರವೇ ಹಾಲಿ ಸಿಜೆಐ ರಮಣ ಸೇವಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದ್ದು, ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಲಲಿತ್ ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೋರಡಿಸಿದೆ. ಎನ್.ವಿ. ರಮಣ ಸೇವಾವಧಿ ಅಂತ್ಯ ಬಳಿಕ ಸಿಜೆಐ ಆಗಿ ಪದಗ್ರಹಣ ಮಾಡಲಿದ್ದಾರೆ. ಸಿಜೆಐ ರಮಣ ಅವರ ಸೇವಾವಧಿ ತಾ. ೨೬ ರಂದು ಕೊನೆಗೊಳ್ಳಲಿದ್ದು, ಅಂದೇ ನ್ಯಾ.ಉದಯ್ ಉಮೇಶ್ ಲಲಿತ್ ಅವರು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬುದ್ಗಾಮ್ ಎನ್‌ಕೌಂಟರ್: ಎಲ್‌ಇಟಿ ಉಗ್ರರು ಹತ

ಬುದ್ಗಾಮ್, ಆ. ೧೦: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಹೊಡೆದುರುಳಿಸಲಾಗದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಖಾನ್‌ಸಾಹಿಬ್ ಪ್ರದೇಶದ ವಾಟರ್‌ಹೇಲ್‌ನಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು ಎಂದು ಪೊಲೀಸ್ ವಕ್ತಾರರು ವಿವರಿಸಿದ್ದಾರೆ. ಅಡಗಿಕೊಂಡಿದ್ದ ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಯೋಧರು ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ ಇಬ್ಬರು ಬಲಿಯಾಗಿದ್ದಾರೆ. ಎನ್‌ಕೌಂಟರ್ ವೇಳೆ ಮೇ ತಿಂಗಳಲ್ಲಿ ಕಾಶ್ಮೀರಿ ಪಂಡಿತ್ ಸರ್ಕಾರಿ ನೌಕರ ರಾಹುಲ್ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದ ಮೋಸ್ಟ್ ವಾಂಟೆಡ್ ಲತೀಫ್ ರಾಥರ್ ಸೇರಿದಂತೆ ಮೂವರು ಲಷ್ಕರ್ ವ್ಯಕ್ತಿಗಳು ಸಿಕ್ಕಿಬಿದ್ದಿದ್ದರು ಎಂದು ಕಾಶ್ಮೀರ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ.

ವಂಚನೆಗೆ ಕಡಿವಾಣ: ಡಿಜಿಟಲ್ ಸಾಲಕ್ಕೆ ಮಾನದಂಡ

ನವದೆಹಲಿ, ಆ. ೧೦: ಲೋನ್ ಆ್ಯಪ್ ಮತ್ತು ಡಿಜಿಟಲ್ ಸಾಲ ವ್ಯವಸ್ಥೆಗಳಲ್ಲಿನ ವಂಚನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಮೊದಲ ಹಂತದ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಡಿಜಿಟಲ್ ಲೆಂಡಿAಗ್‌ಗೆ ಆನ್‌ಲೈನ್ ಅಥವಾ ಡಿಜಿಟಲ್ ಸಾಲಕ್ಕೆ ಸಂಬAಧಿಸಿದ ಸಾಧಕ-ಬಾಧಕ, ಸಮಸ್ಯೆಗಳನ್ನು ಅಧ್ಯಯನ ಮಾಡಲು ಮತ್ತು ನಿಯಮಾವಳಿಗಳನ್ನು ಸೂಚಿಸಲು ಆರ್‌ಬಿಐ ಜನವರಿ ೨೦೨೧ ರಲ್ಲಿ ಕಾರ್ಯಪಡೆಯೊಂದನ್ನು ಸ್ಥಾಪಿಸಿತ್ತು. ನವೆಂಬರ್ ೨೦೨೧ ರಲ್ಲಿ ಈ ಕಾರ್ಯಪಡೆಯು ಡಿಜಿಟಲ್ ಸಾಲ ನೀಡುವವರಿಗೆ ಅನ್ವಯವಾಗುವಂತೆ ಕಟ್ಟುನಿಟ್ಟಾದ ಮಾನದಂಡಗಳನ್ನು ಪ್ರಸ್ತಾಪಿಸಿತ್ತು. ಅವುಗಳಲ್ಲಿ ಕೆಲವನ್ನು ಈಗ ಆರ್‌ಬಿಐ ಅಂಗೀಕರಿಸಿದ್ದು, ಡಿಜಿಟಲ್ ಸಾಲವನ್ನು ನಿಯಂತ್ರಿಸಿ, ಅದರಲ್ಲಿ ಹೆಚ್ಚುತ್ತಿರುವ ವಂಚನೆಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಡಿಜಿಟಲ್ ಸಾಲದಲ್ಲಿ ಎಲ್ಲಾ ಸಾಲ ವಿತರಣೆಗಳು ಮತ್ತು ಮರುಪಾವತಿಗಳನ್ನು ಸಾಲಗಾರನ ಬ್ಯಾಂಕ್ ಖಾತೆ ಮತ್ತು ಬ್ಯಾಂಕ್ ನಿಯಂತ್ರಿತ ಘಟಕದ ನಡುವೆ ಯಾವುದೇ ಮಧ್ಯವರ್ತಿ (ಪಾಸ್-ಥ್ರೂ) ಅಥವಾ ಸಾಲ ನೀಡುವ ಸೇವಾ ಪೂರೈಕೆದಾರರ ಅಥವಾ ಯಾವುದೇ ಮೂರನೇ ವ್ಯಕ್ತಿಯ ಖಾತೆ ಇಲ್ಲದೆ ಕಾರ್ಯಗತಗೊಳಿಸಬೇಕು ಎಂದು ಆರ್‌ಬಿಐ ಹೇಳಿದೆ. ಅಂತೆಯೇ ಕ್ರೆಡಿಟ್ ಮಧ್ಯವರ್ತಿ ಪ್ರಕ್ರಿಯೆಯಲ್ಲಿ ಪಾವತಿಸಬೇಕಾದ ಯಾವುದೇ ಶುಲ್ಕಗಳು ಅಥವಾ ಶುಲ್ಕಗಳನ್ನು ನೇರವಾಗಿ ಬ್ಯಾಂಕ್ ನಿಯಂತ್ರಿತ ಘಟಕದಿಂದ ಪಾವತಿಸಲಾಗುತ್ತದೆ ಮತ್ತು ಸಾಲಗಾರರಿಂದ ಅಲ್ಲ. ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ನೋಡಲ್ ಏಜೆನ್ಸಿಯೊಂದಿಗೆ ಸಮಾಲೋಚಿಸಿ, ಪರಿಶೀಲನೆ ಪ್ರಕ್ರಿಯೆಗೆ ಒಳಪಡಿಸಬೇಕು. ಡಿಜಿಟಲ್ ಲೆಂಡಿAಗ್ ವ್ಯವಸ್ಥೆಯಲ್ಲಿ ಭಾಗವಹಿಸುವವರನ್ನು ಒಳಗೊಂಡ ಸ್ವಯಂ-ನಿಯAತ್ರಕ ಸಂಸ್ಥೆಯನ್ನು ಸಹ ಇದು ಸೂಚಿಸಿದೆ. ಆರ್‌ಬಿಐ ಕೆಲವು ನಿಯಮಗಳನ್ನು ಸಾರಾಸಗಟಾಗಿ ಅಂಗೀಕರಿಸಿದ್ದು, ಕೆಲವನ್ನು ತಾತ್ವಿಕವಾಗಿ ಅಂಗೀಕರಿಸಲ್ಪಟ್ಟಿದೆ. ಅದಕ್ಕಾಗಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಡಿಜಿಟಲ್ ಸಾಲ ನೀಡುವವರನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದ್ದು, ಮೊದಲನೆಯದು, ಆರ್‌ಬಿಐನಿಂದ ನಿಯಂತ್ರಿಸಲ್ಪಡುವ ಮತ್ತು ಸಾಲ ನೀಡುವ ವ್ಯವಹಾರವನ್ನು ನಡೆಸಲು ಅನುಮತಿ ನೀಡಲಾದ ಬ್ಯಾಂಕ್ ಘಟಕಗಳು. ಎರಡನೆಯದಾಗಿ, ಇತರ ಶಾಸನಬದ್ಧ ಅಥವಾ ನಿಯಂತ್ರಕ ನಿಬಂಧನೆಗಳ ಪ್ರಕಾರ ಸಾಲ ನೀಡಲು ಅಧಿಕಾರ ಹೊಂದಿರುವ ಘಟಕಗಳು. ಆದರೆ ಅವು ಆರ್‌ಬಿಐನಿಂದ ನಿಯಂತ್ರಿಸಲ್ಪಡುವುದಿಲ್ಲ. ಮತ್ತು ಮೂರನೇ ವರ್ಗವು, ಯಾವುದೇ ಶಾಸನಬದ್ಧ ಅಥವಾ ನಿಯಂತ್ರಕ ನಿಬಂಧನೆಗಳ ವ್ಯಾಪ್ತಿಯ ಹೊರಗೆ ಸಾಲ ನೀಡುವ ಘಟಕಗಳನ್ನು ಒಳಗೊಂಡಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಗೆ ಕೆಎಂಎಫ್ ನೌಕರರು

ಬೆಂಗಳೂರು, ಆ. ೧೦: ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನೌಕರರೂ ಕೂಡ ಸಾರ್ವಜನಿಕ ಸೇವಕರಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಬರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನ್ನ ಗೊತ್ತಿರುವ ಆದಾಯದ ಮೂಲಗಳನ್ನು ಮೀರಿ ಸಂಪತ್ತು ಗಳಿಸಿದ ಆರೋಪದ ಮೇಲೆ ದಾಖಲಿಸಿದ ಪ್ರಕರಣವನ್ನು ಪ್ರಶ್ನಿಸಿ ಕೆಎಂಎಫ್ ಘಟಕದ ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ. ಕೃಷ್ಣಾ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಎಸಿಬಿ ಅವರು ನಂದಿನಿ ಮಿಲ್ಕ್ ಪ್ರಾಡಕ್ಟ್÷್ಸ್ಸನ ಜನರಲ್ ಮ್ಯಾನೇಜರ್ ಆಗಿದ್ದಾಗ ನವೆಂಬರ್ ೨೩, ೨೦೨೧ ರಂದು ಕಾಯಿದೆಯ ೧೩(೨) ಸೆಕ್ಷನ್ ೧೩(೧)(ಬಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದರು. ಅವರ ಮನೆ ಮತ್ತು ಆಸ್ತಿಯನ್ನು ಶೋಧಿಸಲಾಗಿದ್ದು, ಈ ಕುರಿತ ತನಿಖೆ ಪ್ರಗತಿಯಲ್ಲಿದೆ. ಏತನ್ಮಧ್ಯೆ, ಕೆಎಂಎಫ್‌ನ ನೌಕರರು ಕಾಯಿದೆಯಡಿ ವ್ಯಾಖ್ಯಾನಿಸಿದಂತೆ ಸಾರ್ವಜನಿಕ ಸೇವಕರಲ್ಲ ಮತ್ತು ಎಸಿಬಿ ದಾಖಲಿಸಿದ ಅಪರಾಧವು ಅದರ ವ್ಯಾಪ್ತಿಯನ್ನು ಮೀರಿದೆ ಎಂದು ರೆಡ್ಡಿ ನ್ಯಾಯಾಲಯದ ಮೆಟ್ಟಿಲೇರಿದರು. ೨೦೨೧ ನವೆಂಬರ್ ೨೦ ರಂದು ವಿ ಕೃಷ್ಣಾ ರೆಡ್ಡಿ ಅವರ ವಿರುದ್ಧ ಎಸಿಬಿ ದಾಳಿ ನಡೆಸಿ ಕೇಸ್ ದಾಖಲಿಸಿತ್ತು. ಆದಾಯ ಮೀರಿ ಶೇ. ೧೦೭ ಆಸ್ತಿ ಹೊಂದಿದ ಆರೋಪ ಹೊರಿಸಲಾಗಿತ್ತು. ಆದರೆ ಪ್ರಕರಣ ರದ್ದು ಕೋರಿ ವಿ. ಕೃಷ್ಣಾರೆಡ್ಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕೆಎಂಎಫ್ ಸಿಬ್ಬಂದಿ ಸರ್ಕಾರಿ ನೌಕರರಲ್ಲವೆಂದು ವಾದಿಸಿದ್ದರು. ಹೀಗಾಗಿ ಭ್ರಷ್ಟಾಚಾರ ತಡೆ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆಂದು ವಾದಿಸಿದ್ದರು. ಆದರೆ ಅರ್ಜಿದಾರರ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ.

ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಬನ್ಸಾಲ್

ನವದೆಹಲಿ, ಆ. ೧೦: ಭಾರತೀಯ ಜನತಾ ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ನಾಯಕ ಸುನಿಲ್ ಬನ್ಸಾಲ್‌ರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಅಧಿಕೃತ ಘೋಷಣೆ ಹೊರಡಿಸಿದ್ದು, ಬಿಜೆಪಿ ನಾಯಕ ಸುನಿಲ್ ಬನ್ಸಾಲ್ ಅವರನ್ನು ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾಗಿ ಬುಧವಾರ ನೇಮಿಸಲಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಬನ್ಸಾಲ್ ಅವರಿಗೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಉಸ್ತುವಾರಿಯನ್ನು ಕೂಡ ವಹಿಸಲಾಗಿದೆ ಎನ್ನಲಾಗಿದೆ. ಸುನಿಲ್ ಬನ್ಸಾಲ್ ಅವರು ಉತ್ತರ ಪ್ರದೇಶದಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿದ್ದರು. ಇದೀಗ ಅವರ ಸ್ಥಾನಕ್ಕೆ ಧರಂಪಾಲ್ ಅವರನ್ನು ನೇಮಿಸಲಾಗುವುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಪಕ್ಷದ ಜಾರ್ಖಂಡ್ ಘಟಕದಲ್ಲಿ ಕರಂವೀರ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.