ಮಡಿಕೇರಿ, ಆ. ೯: ಸ್ವಾತಂತ್ರö್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಹಯೋಗದಲ್ಲಿ ‘ಅಮೃತೋತ್ಸವ ಯುವಜನ ವ್ಯಕ್ತಿತ್ವ ರೂಪಣೆ’ ವಿಷಯವಾಗಿ ವಿಶ್ವ ವಿದ್ಯಾನಿಲಯ ಮಟ್ಟದ ಪ್ರಶಿಕ್ಷಕರ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಸಿ. ಜಗತ್ ತಿಮ್ಮಯ್ಯ, ವ್ಯಕ್ತಿತ್ವ ವಿಕಸನ ವೆಂಬುದು ಯಾವುದೇ ಸೀಮಿತ ಕಾಲಘಟ್ಟಕ್ಕೆ ಮೀಸಲಾಗಿದ್ದಲ್ಲ, ಬದಲಾಗಿ ಅದು ನಮ್ಮ ಜೀವನವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಲು ಜೀವನಪರ್ಯಂತ ವೃದ್ಧಿಸಿಕೊಳ್ಳುವ ಒಟ್ಟಾರೆ ಜೀವನದ ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟರು.

ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮೇಜರ್ ರಾಘವ. ಬಿ, ಎಲ್ಲರೂ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗುವಂತೆ ಬದುಕಬೇಕೆಂದು ಕಿವಿಮಾತು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ವಿದ್ಯಾಧಿಕಾರಿ ಪ್ರೊ. ಬಿ.ಎಸ್. ಶಾಸ್ತಿçà ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿ ಕೊಟ್ಟು, ಪ್ರಾಣಾಯಾಮದ ಬಸ್ತಿçಕಾ, ಮುಖದೌತಿ, ಕಪಾಲಬಾತಿ ಆಸನ ಗಳನ್ನು ಶಿಬಿರಾರ್ಥಿಗಳಿಗೆ ನಡೆಸಿ ಕೊಟ್ಟರು. ಈ ಪ್ರಾಣಾ ಯಾಮಗಳು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಲು ಅನುಕೂಲವಾಗುತ್ತದೆ ಎಂದು ಪ್ರೊ. ಬಿ.ಎಸ್. ಶಾಸ್ತಿçà ಅವರು ತಿಳಿಸಿದರು.

ಮಂಗಳೂರಿನ ಬೆಸೆಂಟ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಚೇತಾ ಅವರು ಡ್ಯಾನ್ಸ್ ಥೆರಪಿಯ ಭಾಗವಾಗಿ ಡ್ಯಾನ್ಸ್ ಮುಖಾಂತರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದೆಂದು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಕುಶಾಲನಗರ ಎಂ.ಜಿ.ಎA ಕಾಲೇಜು, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ಸರ್ಕಾರಿ ಮಹಿಳಾ ಕಾಲೇಜು, ಸೋಮವಾರಪೇಟೆಯ ಬಿಟಿಸಿಜಿ ಕಾಲೇಜು, ಕುಶಾಲನಗರ ಅನುಗ್ರಹ ಕಾಲೇಜು, ನಾಪೋಕ್ಲು ಸಂತ ಅನ್ನಮ್ಮ ಕಾಲೇಜು, ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶನಿವಾರಸಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆ ಸರ್ವೋದಯ ಕಾಲೇಜು, ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗೋಣಿಕೊಪ್ಪ ಕಾವೇರಿ ಕಾಲೇಜು ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಲು ಸಹಕಾರಿಯಾಗಬಲ್ಲ ‘ನಾನೆಷ್ಟು ಸ್ವತಂತ್ರ?’ ಎಂಬ ಪುಸ್ತಕ ವನ್ನು ಬಿಡುಗಡೆ ಮಾಡಲಾಯಿತು. ಈ ಪುಸ್ತಕದಲ್ಲಿ ತಿಳಿಸಲಾಗಿರುವ ವಿವಿಧ ವಿಷಯಗಳಾದ ಶರೀರ ಶಿಲ್ಪ, ಸ್ವಾತಂತ್ರö್ಯಕ್ಕಾಗಿ ಶರೀರ ವಿಕಾಸ, ಬುದ್ದಿ ಸ್ವಾತಂತ್ರö್ಯ, ಸ್ವಾತಂತ್ರö್ಯಕ್ಕಾಗಿ ಬುದ್ದಿ ವಿಕಾಸ, ಭಾವನಾತ್ಮಕ ಸ್ವಾತಂತ್ರö್ಯ ಮುಂತಾದವುಗಳ ಬಗ್ಗೆ ಲೇಖಕ ಡಾ. ಶಿಕಾರಿಪುರ ಕೃಷ್ಣಮೂರ್ತಿ ಮತ್ತು ಪತ್ರಕರ್ತ ನಂದಗೋಪಾಲ ಅವರು ವಿವರಿಸಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಅವರು ಸಭಾಕಾರ್ಯಕ್ರಮವನ್ನು ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.