ವೀರಾಜಪೇಟೆ, ಆ. ೮: ವೀರಾಜಪೇಟೆಯ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳ ಹಿಂದಿನAತೆಯೇ ಈ ಬಾರಿ ಐತಿಹಾಸಿಕ ಗೌರಿ-ಗಣೇಶೋತ್ಸವವನ್ನು ಸಂಭ್ರಮದಿAದ ಆಚರಿಸಲು ಗೌರಿ-ಗಣೇಶ ನಾಡ ಹಬ್ಬದ ಒಕ್ಕೂಟ ತೀರ್ಮಾನಿಸಿದೆ.

ಒಕ್ಕೂಟದ ಅಧ್ಯಕ್ಷ ಬಿ.ಜಿ.ಸಾಯಿನಾಥ್ ಅಧ್ಯಕ್ಷತೆಯಲ್ಲಿ ನಡೆದ ೨೨ ಉತ್ಸವ ಸಮಿತಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಕೊರೊನಾದ ನಿಮಿತ್ತ ಕಳೆದ ಮೂರು ವರ್ಷಗಳಿಂದ ಗೌರಿ-ಗಣೇಶೋತ್ಸವವನ್ನು ಸರಳವಾಗಿ ನಿರ್ಬಂಧ ಷರತ್ತುಗಳ ನಡುವೆ ಆಚರಿಸಿದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಉತ್ಸವ ಸಮಿತಿಗಳ ಆರ್ಥಿಕ ಸ್ಥಿತಿಗತಿಗನುಗುಣ ವಾಗಿ ಉತ್ಸವ ಆಚರಿಸುವುದು. ಪೊಲೀಸ್ ಇಲಾಖೆಯು ಉತ್ಸವ ಆಚರಿಸಲು ವಿಧಿಸಿರುವ ಕೆಲವು ಷರತ್ತುಗಳಿಗೆ ವಿನಾಯಿತಿ ನೀಡುವಂತೆ ಇಲಾಖೆಗೆ ಮನವಿ ಮಾಡಲು ಸಭೆಯು ನಿರ್ಧರಿಸಿತು. ಗೌರಿ ಗಣೇಶೋತ್ಸವಕ್ಕೆ ಸಂಬAಧಿಸಿದAತೆ ಉತ್ಸವ ಆಚರಿಸುವ ಸಮಿತಿಗಳ ಪಟ್ಟಿಯನ್ನು ಎಲ್ಲ ಸಮಿತಿಗಳು ಸಧ್ಯದಲ್ಲಿಯೇ ಅಂತಿಮ ಗೊಳಿಸಿ ಒಕ್ಕೂಟಕ್ಕೆ ಕಳಿಸುವುದಾಗಿ ಪ್ರಮುಖರು ಸಭೆಗೆ ತಿಳಿಸಿದರು.

ಪಟ್ಟಣ ವ್ಯಾಪ್ತಿಗೆ ಬರುವ ಉತ್ಸವ ಸಮಿತಿಗಳು ತಾ.೩೦ರಂದು ಗೌರಿ ಮೂರ್ತಿಯ ಪ್ರತಿಷ್ಠಾಪನೆ ೩೧ರಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಗೌರಿ-ಗಣೇಶೋತ್ಸವಕ್ಕೆ ಚಾಲನೆ ನೀಡಲಿದೆ. ನಂತರ ಹತ್ತು ದಿನಗಳವರೆಗೆ ಅಪರಾಹ್ನ ಹಾಗೂ ರಾತ್ರಿ ಸಾಂಪ್ರದಾಯಿಕ ಪೂಜೆ ನೆರವೇರಿಸುವುದು. ಹತ್ತು ದಿನಗಳ ನಂತರ ಅನಂತ ಪದ್ಮನಾಭ ವೃತದ ದಿನದಂದು ರಾತ್ರಿ ಗೌರಿ ಗಣೇಶ ಮೂರ್ತಿಗಳೊಂದಿಗೆ ಉತ್ಸವದ ವಿದ್ಯುತ್ ಅಲಂಕೃತ ಮಂಟಪಗಳು ಮುಖ್ಯ ಬೀದಿಯಲ್ಲಿ ಸಾಮೂಹಿಕವಾಗಿ ಮೆರವಣಿಗೆ ಸಾಗಿ ಹಿಂದಿನ ವರ್ಷಗಳಂತೆ ಬೆಳಗಿನ ಜಾವ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಬಳಿಯಿರುವ ಪವಿತ್ರ ಗೌರಿಕೆರೆಯಲ್ಲಿ ವಿಸರ್ಜಿಸುವಂತೆ ತೀರ್ಮಾನಿ ಸಲಾಯಿತು.

ಸಭೆಯಲ್ಲಿ ಮೂರು ವರ್ಷಗಳ ಹಿಂದೆ ಆಚರಿಸುತ್ತಿದ್ದ ಸುಮಾರು ೨೨ ಉತ್ಸವ ಸಮಿತಿಗಳ ಪ್ರತಿನಿಧಿಗಳು ಹಾಜರಿದ್ದು ಗೌರಿಗಣೇಶೋತ್ಸವ ಆಚರಣೆಗೆ ಸಂಬAಧಿಸಿದAತೆ ಸಲಹೆ ಅಭಿಪ್ರಾಯಗಳನ್ನು ಮಂಡಿಸಿದರು. ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಸನ್ನಿ ಕಾವೇರಪ್ಪ, ಕಾರ್ಯದರ್ಶಿ ಪ್ರದೀಪ್ ರೈ, ಕಾನೂನು ಸಲಹೆಗಾರರಾದ ವಕೀಲ ಟಿಪಿ. ಕೃಷ್ಣ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.