ಮಡಿಕೇರಿ, ಆ. ೮: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೊಡಗು ಜಿಲ್ಲೆ ನಲುಗುವಂತಾಗಿದ್ದು, ವ್ಯಾಪಕ ಹಾನಿಗಳು ಘಟಿಸುತ್ತಿವೆ. ಬಹುತೇಕ ಇಡೀ ಜಿಲ್ಲೆ ಆಶ್ಲೇಷಾ ಮಳೆಯ ಆರ್ಭಟವನ್ನು ಎದುರಿಸುತ್ತಿದ್ದು, ಆತಂಕಕಾರಿ ಪರಿಸ್ಥಿತಿಯೂ ಮುಂದುವರಿಯುತ್ತಿದೆ. ನದಿ - ತೊರೆಗಳು ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ಪ್ರವಾಹವೂ ಉಂಟಾಗಿದೆ. ಕಾವೇರಿ ನದಿಯ ಭಾಗಮಂಡಲದ ತ್ರಿವೇಣಿ ಸಂಗಮ, ಲಕ್ಷö್ಮಣ ತೀರ್ಥ ಸೇರಿದಂತೆ ಎಲ್ಲಾ ನದಿ - ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ನದಿ ತೀರದ ಜನರಲ್ಲಿ ಭಯದ ವಾತಾವರಣ ಮುಂದುವರಿಯುತ್ತಿದೆ. ಬೇತ್ರಿ, ನೆಲ್ಲಿಹುದಿಕೇರಿ, ಸಿದ್ದಾಪುರ, ಕಣಿವೆ, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ಹರಿಯುವ ಮಾರ್ಗದಲ್ಲಿ ಮಳೆ ಇದೇ ರೀತಿ ಮುಂದುವರಿದಲ್ಲಿ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಕುಶಾಲನಗರದ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿದ್ದು, ನಿವಾಸಿಗಳು ಮನೆ ಖಾಲಿ ಮಾಡುವಂತಾಗಿದೆ. ಕರಿಕೆ ವ್ಯಾಪ್ತಿಯಲ್ಲಿ ನಿರಂತರ ಭೂಕುಸಿತವಾಗಿದ್ದು, ಲಕ್ಷö್ಮಣ ತೀರ್ಥ ಸೇರಿದಂತೆ ಎಲ್ಲಾ ನದಿ - ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ನದಿ ತೀರದ ಜನರಲ್ಲಿ ಭಯದ ವಾತಾವರಣ ಮುಂದುವರಿಯುತ್ತಿದೆ. ಬೇತ್ರಿ, ನೆಲ್ಲಿಹುದಿಕೇರಿ, ಸಿದ್ದಾಪುರ, ಕಣಿವೆ, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ಹರಿಯುವ ಮಾರ್ಗದಲ್ಲಿ ಮಳೆ ಇದೇ ರೀತಿ ಮುಂದುವರಿದಲ್ಲಿ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಕುಶಾಲನಗರದ ಹಲವು ಬಡಾವಣೆಗಳಲ್ಲಿ ನೀರು ನುಗ್ಗಿದ್ದು, ನಿವಾಸಿಗಳು ಮನೆ ಖಾಲಿ ಮಾಡುವಂತಾಗಿದೆ. ಕರಿಕೆ ವ್ಯಾಪ್ತಿಯಲ್ಲಿ ನಿರಂತರ ಭೂಕುಸಿತವಾಗಿದ್ದು, ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಪಾಲಿಹೌಸ್ ಹಾನಿಗೊಳಗಾಗಿದೆ. ಪರಿಣಾಮವಾಗಿ ಇದರಲ್ಲಿ ಬೆಳೆಯಲಾಗಿದ್ದ ಟೊಮೊಟೊ, (ಮೊದಲ ಪುಟದಿಂದ) ನೂಕೋಲು, ಬದನೆಕಾಯಿಯಂತಹ ಫಸಲಿಗೆ ಬಂದಿದ್ದ ತರಕಾರಿ ಬೆಳೆಗಳು ನೀರು ನಿಂತು ಹಾನಿಗೀಡಾಗಿವೆ.
ಕಾಳಜಿ ಕೇಂದ್ರಕ್ಕೆ ೮೮ ಮಂದಿ
ಎರಡನೇ ಮೊಣ್ಣಂಗೇರಿಯ ೩೫ ಕುಟುಂಬಗಳ ೮೮ ಮಂದಿ ಮಡಿಕೇರಿಯ ರೆಡ್ಕ್ರಾಸ್ ಭವನದ ಕಾಳಜಿ ಕೇಂದ್ರದಲ್ಲೇ ಆಶ್ರಯ ಪಡೆದಿದ್ದಾರೆ. ಭಾಗಮಂಡಲದಲ್ಲೂ ಪ್ರವಾಹ ಪರಿಸ್ಥಿತಿ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಗೋಣಿಕೊಪ್ಪ ಕೀರೆಹೊಳೆಯೂ ಅಪಾಯಮಟ್ಟದಲ್ಲಿದೆ. ಜಿಲ್ಲೆಯ ಇನ್ನಿತರ ಭಾಗಗಳಲ್ಲಿಯೂ ಮಳೆ - ಗಾಳಿಯಿಂದಾಗಿ ವ್ಯಾಪಾರ ಸಮಸ್ಯೆಗಳು ಉಂಟಾಗಿದೆ. ಹಲವಾರು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಇನ್ನೂ ಸರಿಯಾಗಿಲ್ಲ. ಬೆಟ್ಟಗೇರಿ ಕೂಡಿಗೆ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟಮ್ಮ, ಮಲ್ಲಪ್ಪ ಎಂಬುವರಿಗೆ ಸೇರಿದ ವಾಸದ ಮನೆಯ ಗೋಡೆ ಮಳೆಯಿಂದಾಗಿ ಕುಸಿತಗೊಂಡಿದೆ.
ಸ್ಥಳಕ್ಕೆ ಕುಶಾಲನಗರ ನಾಡ ಕಚೇರಿಯ ಉಪ ತಹಶೀಲ್ದಾರ್ ಮಧುಸೂದನ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಜನ್ ಪೀಟರ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
ಅಮ್ಮತ್ತಿ: ಅಮ್ಮತ್ತಿ ಹೋಬಳಿ ಚೆನ್ನನಕೋಟೆ ಗ್ರಾಮದ ನಿವಾಸಿ, ಲಕ್ಷಿö್ಮ ಎಚ್.ಜಿ. ಅವರ ವಾಸದ ಮನೆಗೆ ಮಳೆಯಿಂದ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಲಕ್ಕಿಗರಾದ ಮುತ್ತಪ್ಪ ಸಹಾಯಕ ಶರಣು ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಾಪೋಕ್ಲು: ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪುಲಿಕೋಟು ಗ್ರಾಮದ ಮಾರುತಿ ಯುವಕ ಸಂಘದ ಕಟ್ಟಡ ಮಳೆ ಗಾಳಿಯಿಂದಾಗಿ ಧರೆಗೆ ಉರುಳಿ ಬಿದ್ದು ನಷ್ಟ ಸಂಭವಿಸಿದೆ.
ಸೋಮವಾರಪೇಟೆ: ತಾಲೂಕಿ ನಾದ್ಯಂತ ಮುಂಗಾರು ಮಳೆ ಮುಂದುವರೆದಿದ್ದು, ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿ ರುವುದರಿಂದ ಹಲವೆಡೆಗಳಲ್ಲಿ ಭೂಮಿ ಕುಸಿಯಲು ಪ್ರಾರಂಭಿಸಿದೆ. ಇಲ್ಲಿನ ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯ ಕುಂಬೂರು ಗ್ರಾಮದ ರಸ್ತೆಯ ಒಂದು ಬದಿಯಲ್ಲಿ ಕುಸಿಯಲು ಪ್ರಾರಂಭಗೊAಡಿದೆ. ಇದು ಮುಂದುವರೆದಲ್ಲಿ ಮಡಿಕೇರಿಗೆ ರಸ್ತೆ ಮಾರ್ಗ ಕಡಿತಗೊಳ್ಳುವ ಸಾಧ್ಯತೆ ಇದೆ.
ಹೊಳೆ, ತೋಡುಗಳು ತುಂಬಿ ಹರಿಯುತ್ತಿರುವುದರಿಂದ ಸಾಕಷ್ಟು ಹಾನಿಯಾಗುತ್ತಿದೆ. ಪುಷ್ಪಗಿರಿ ಬೆಟ್ಟಸಾಲು ಸೇರಿದಂತೆ ಎಲ್ಲೆಡೆ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದು, ಕಾಫಿ ಗಿಡ ಮತ್ತು ಮೆಣಸಿನ ಬಳ್ಳಿಗಳಿಗೆ ಕೊಳೆರೋಗ ಪ್ರಾರಂಭವಾಗಿದೆ. ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯ ಮುಗಿದಿದ್ದು, ಪೈರಿನ ಮೇಲೆ ನೀರು ಹರಿಯುತ್ತಿದ್ದು, ಮುಂದುವರೆದರೆ ಕೊಳೆ ರೋಗ ಕಾಣಿಸಿಕೊಳ್ಳಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಸೋಮವಾರಪೇಟೆ ಹೋಬಳಿಯ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ಅಶ್ವಿನಿ ಎಂಬುವವರ ವಾಸದ ಮನೆ ಭಾರೀ ಗಾಳಿ ಮಳೆಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಪರಿವೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರರು ಭೇಟಿ ನೀಡಿ ಮಾಹಿತಿ ಪಡೆದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್ ಬ್ಲಾಕ್ ನಿವಾಸಿ ಮಂಗಳಮ್ಮ ಎಂಬುವವರ ಮನೆಗೆ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.ನಂಜರಾಯಪಟ್ಟಣ : ನಂಜರಾಯಪಟ್ಟಣ ಗ್ರಾಮದ ಪ್ರಮೀಳಾ ಸುಬ್ರಮಣಿ ಎಂಬವರಿಗೆ ಸೇರಿದ ಮನೆಯ ಗೋಡೆಯು ಸೋಮವಾರ ಸುರಿದ ಭಾರೀ ಮಳೆಗೆ ಕುಸಿದು ಹಾನಿಯಾಗಿರುತ್ತದೆ. ಸ್ಥಳಕ್ಕೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಪಿಡಿಓ ಕಲ್ಪ ಭೇಟಿ ನೀಡಿ ಪರಿಶೀಲಿಸಿದರು.ಸಿದ್ದಾಪುರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಿಗೆ ಪ್ರವಾಹಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ನೂತನ ತಹಶೀಲ್ದಾರ್ ಅರ್ಚನ ಭಟ್ ಪ್ರವಾಹಪೀಡಿತ ಕರಡಿಗೋಡುವಿನ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಕಂದಾಯ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಅಥವಾ ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನದಿತೀರದ ನಿವಾಸಿಗಳು ಮತ್ತಷ್ಟು ನೀರು ನದಿಯಲ್ಲಿ ಏರಿಕೆಯಾದಲ್ಲಿ ತಾವುಗಳು ಸ್ಥಳಾಂತರಗೊAಡು ಪರಿಹಾರ ಕೇಂದ್ರಕ್ಕೆ ತೆರಳುವುದಾಗಿ ಹೇಳಿದರು. ನಂತರ ನದಿ ತೀರದ ನಿವಾಸಿಗಳಿಗೆ ಗುರುತಿಸಲಾದ ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್, ಸಿದ್ದಾಪುರ ಗ್ರಾ.ಪಂ. ಕಾರ್ಯದರ್ಶಿ ಮೋಹನ್, ಗ್ರಾಮ ಸಹಾಯಕ ಕೃಷ್ಣ, ಬಿಲ್ ಕಲೆಕ್ಟರ್ ಈಶ್ವರ ಇನ್ನಿತರರು ಹಾಜರಿದ್ದರು.
ಸೇತುವೆ ಮುಳುಗಡೆ
ಸಿದ್ದಾಪುರದಲ್ಲಿ ಮಹಾಮಳೆಗೆ ಕರಡಿಗೋಡು ಚಿಕ್ಕನಹಳ್ಳಿ ಭಾಗದ ಕಿರುಸೇತುವೆ ಮುಳುಗಿದೆ. ಗದ್ದೆಗಳು ಜಲಾವೃತಗೊಂಡಿದೆ. ಗುಹ್ಯ ಭಾಗದಲ್ಲಿ ಕೂಡ ಸಾಕಷ್ಟು ಗದ್ದೆಗಳಿಗೆ ನೀರು ತುಂಬಿದ್ದು, ಇದೇ ರೀತಿ ಮಳೆ ಮುಂದುವರೆದಲ್ಲಿ ನದಿ ತೀರದ ನಿವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆ ಕಂಡು ಬಂದಿದೆ.
ಮನೆ ಗೋಡೆ ಕುಸಿತ: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಎಂ.ಜಿ ಕಾಲೋನಿಯ ೬ನೇ ವಾರ್ಡ್ನ ರಜಾಕ್ ಎಂಬವರ ಮನೆಯ ಗೋಡೆ ಗಾಳಿ-ಮಳೆಗೆ ಸಿಲುಕಿ ಭಾನುವಾರ ರಾತ್ರಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯ ಒಳಗಿದ್ದ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಿಗ ಸಚಿನ್, ಪಿಡಿಓ ಅನಿಲ್ ಕುಮಾರ್ ಹಾಗೂ ಆ ವಿಭಾಗದ ಗ್ರಾ.ಪಂ. ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಂದಾಯ ಇಲಾಖಾಧಿಕಾರಿಗಳು ಪ್ರವಾಹ ಪೀಡಿತ ಬೆಟ್ಟದಕಾಡು ಹಾಗೂ ಕುಂಬಾರಗುAಡಿಯ ನದಿ ತೀರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಸಿದ್ದಾಪುರ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಿಗೆ ಪ್ರವಾಹಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ನೂತನ ತಹಶೀಲ್ದಾರ್ ಅರ್ಚನ ಭಟ್ ಪ್ರವಾಹಪೀಡಿತ ಕರಡಿಗೋಡುವಿನ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಕಂದಾಯ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಅಥವಾ ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನದಿತೀರದ ನಿವಾಸಿಗಳು ಮತ್ತಷ್ಟು ನೀರು ನದಿಯಲ್ಲಿ ಏರಿಕೆಯಾದಲ್ಲಿ ತಾವುಗಳು ಸ್ಥಳಾಂತರಗೊAಡು ಪರಿಹಾರ ಕೇಂದ್ರಕ್ಕೆ ತೆರಳುವುದಾಗಿ ಹೇಳಿದರು. ನಂತರ ನದಿ ತೀರದ ನಿವಾಸಿಗಳಿಗೆ ಗುರುತಿಸಲಾದ ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್, ಸಿದ್ದಾಪುರ ಗ್ರಾ.ಪಂ. ಕಾರ್ಯದರ್ಶಿ ಮೋಹನ್, ಗ್ರಾಮ ಸಹಾಯಕ ಕೃಷ್ಣ, ಬಿಲ್ ಕಲೆಕ್ಟರ್ ಈಶ್ವರ ಇನ್ನಿತರರು ಹಾಜರಿದ್ದರು.
ಸೇತುವೆ ಮುಳುಗಡೆ
ಸಿದ್ದಾಪುರದಲ್ಲಿ ಮಹಾಮಳೆಗೆ ಕರಡಿಗೋಡು ಚಿಕ್ಕನಹಳ್ಳಿ ಭಾಗದ ಕಿರುಸೇತುವೆ ಮುಳುಗಿದೆ. ಗದ್ದೆಗಳು ಜಲಾವೃತಗೊಂಡಿದೆ. ಗುಹ್ಯ ಭಾಗದಲ್ಲಿ ಕೂಡ ಸಾಕಷ್ಟು ಗದ್ದೆಗಳಿಗೆ ನೀರು ತುಂಬಿದ್ದು, ಇದೇ ರೀತಿ ಮಳೆ ಮುಂದುವರೆದಲ್ಲಿ ನದಿ ತೀರದ ನಿವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆ ಕಂಡು ಬಂದಿದೆ.
ಮನೆ ಗೋಡೆ ಕುಸಿತ: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಎಂ.ಜಿ ಕಾಲೋನಿಯ ೬ನೇ ವಾರ್ಡ್ನ ರಜಾಕ್ ಎಂಬವರ ಮನೆಯ ಗೋಡೆ ಗಾಳಿ-ಮಳೆಗೆ ಸಿಲುಕಿ ಭಾನುವಾರ ರಾತ್ರಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯ ಒಳಗಿದ್ದ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಿಗ ಸಚಿನ್, ಪಿಡಿಓ ಅನಿಲ್ ಕುಮಾರ್ ಹಾಗೂ ಆ ವಿಭಾಗದ ಗ್ರಾ.ಪಂ. ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಂದಾಯ ಇಲಾಖಾಧಿಕಾರಿಗಳು ಪ್ರವಾಹ ಪೀಡಿತ ಬೆಟ್ಟದಕಾಡು ಹಾಗೂ ಕುಂಬಾರಗುAಡಿಯ ನದಿ ತೀರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ವೀರಾಜಪೇಟೆ: ಕೆಲವು ದಿನಗಳಿಂದ ಧೋ ಎಂದು ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮಾಂತರ ಪ್ರದೇಶಗಳಲ್ಲಿನ ಮನೆಗಳಿಗೆ ಹಾನಿಯಾಗಿದೆ.
ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ನಿವಾಸಿ ಸುರೇಶ್ ಎಂಬುವವರ ಮನೆಗೆ ಮಳೆಯಿಂದಾಗಿ ಹಾನಿಯಾಗಿದೆ. ತಡ ರಾತ್ರಿ ಸುರಿದಿರುವ ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಜಖಂಗೊAಡಿದೆ. ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ವಿಷಯ ಅರಿತು ಸ್ಥಳಕ್ಕೆ ಕಂದಾಯಾಧಿಕಾರಿಗಳಾದ ಹರೀಶ್ ಗ್ರಾಮ ಲೆಕ್ಕಿಗರಾದ ಕಸ್ತೂರಿ, ಗ್ರಾಮ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿ ಮಣಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ವೀರಾಜಪೇಟೆ: ವೀರಾಜಪೇಟೆ ವಿಭಾಗಕ್ಕೆ ಕಳೆದ ೮ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕದನೂರು ಗ್ರಾಮದಿಂದ ಕಡಂಗಕ್ಕೆ ಹೋಗುವ ನಾಲ್ಕನೇ ಮೈಲಿ (ಪೋರ್ತ್ಮೈಲ್) ರಸ್ತೆ ಬದಿಯ ಗದ್ದೆಗಳು ಜಲಾವೃತಗೊಂಡಿದೆ. ಇದರಿಂದ ನಾಟಿಗಾಗಿ ನೆಟ್ಟಿದ್ದ ಸಸಿಮಡಿಗಳು ಜಲಾವೃತಗೊಂಡು ಕೊಳೆಯುವ ಸ್ಥಿತಿಯಲ್ಲಿವೆ ಎಂದು ಈ ಭಾಗದ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.ಭಾಗಮಂಡಲ: ತಲಕಾವೇರಿ - ಭಾಗಮಂಡಲ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು ಮೂರು ದಿನಗಳಿಂದ ನಾಪೋಕ್ಲು ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿದೆ .ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಭಾಗಮಂಡಲ ಮಡಿಕೇರಿ ರಸ್ತೆಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಳಿತ ಕಾಣುತ್ತಿದ್ದು ಇಂದು ಒಂದು ಅಡಿ ನೀರು ಹರಿಯುತ್ತಿದೆ. ತಲಕಾವೇರಿಗೆ ನಿನ್ನೆ ದಿನ ೨೩೦ ಮಿ ಮೀಟರ್ ನಷ್ಟು ಮಳೆಯಾಗಿದೆ. ಭಾಗಮಂಡಲಕ್ಕೆ ೧೮೨ ಮಿ. ಮೀಟರ್ ಮಳೆ ಸುರಿದಿದೆ.
ಮಳೆಯಿಂದ ನೀರಿನ ಹರಿವು ಹೆಚ್ಚಾಗಿ ರೈತರಿಗೆ ಕೃಷಿ ಕಾರ್ಯಕ್ಕೆ ಅಡ್ಡಿಯಾಗಿದೆ ಅಲ್ಲಲ್ಲಿ ನಾಟಿ ಕಾರ್ಯಕ್ಕೆ ತೊಡಕು ಉಂಟಾಗಿದೆ. ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಟ್ಟಿಮಾನಿಯಲ್ಲಿ ನಿನ್ನೆ ಭಾರೀ ಮಳೆ ಸುರಿದಿದ್ದು, ಚೂಡಾಡಮ್ಮನ ಬೆಳ್ಳಿಯಪ್ಪ ಮತ್ತು ರಾಮಣ್ಣ ಅವರಿಗೆ ಸೇರಿದ ಮನೆ ಸಂಪೂರ್ಣ ಕುಸಿದಿದೆ. ಮನೆಯವರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆ ಕುಸಿದು ಬಿದ್ದಿದ್ದು ಮನೆ ಸಾಮಗ್ರಿಗಳು ಹಾಳಾಗಿವೆ. ಪಂಚಾಯಿತಿ ಸದಸ್ಯರಾದ ಹ್ಯಾರಿಸ್, ದಿನೇಶ್, ಬಸಪ್ಪ , ಅಮಿತ್, ಚಂದ್ರಕಲಾ ಮಡಿಕೇರಿ : ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದ ಉಡೋತ್ತ್ಮೊಟ್ಟೆಯಲ್ಲಿ ಭಾರೀ ಮಳೆಯಿಂದ ಬಿ. ಸೀತಮ್ಮ ಎಂಬವರಿಗೆ ಸೇರಿದ ಮನೆಯು ಸಂಪೂರ್ಣವಾಗಿ ಹಾನಿಗೊಳಲಾಗಿದೆ.
ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ, ಉಪಾಧ್ಯಕ್ಷ ಬಿ. ಕೃಷ್ಣಪ್ಪ, ಸದಸ್ಯ ಗೋಪಾಲಪೂಜಾರಿ, ಎಂ.ಆರ್. ಮಣಿಕಂಠ ಮತ್ತು ಅಭಿವೃದ್ಧಿ ಅಧಿಕಾರಿ ಉದಯ ಮತ್ತು ಗ್ರಾಮ ಲೆಕ್ಕಿಗ ಮಹಾನಂದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸರಕಾರದಿಂದ ದೊರಕುವಂತಹ ಅನುದಾನವನ್ನು ಕೊಡಿಸುವ ಭರವಸೆ ನೀಡಿದರು. (ಐದನೇ ಪುಟಕ್ಕೆ)ನಂಜರಾಯಪಟ್ಟಣ : ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗ ಸಮುದ್ರದ ಕಬ್ಬಿನ ಗದ್ದೆ ಗಿರಿಜನ ಹಾಡಿಯ ಜೆ.ಬಿ. ರಾಜು ಎಂಬವರಿಗೆ ಸೇರಿದ ಮನೆಗೆ ಮಳೆಯಿಂದ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ಸದಸ್ಯ ಆರ್. ಕೆ.ಚಂದ್ರು ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.
ಕಣಿವೆ : ಇತ್ತೀಚಿಗೆ ಸುರಿದ ಮಳೆಯಿಂದಾಗಿ ಸಂಪೂರ್ಣ ಹಾಳಾಗಿ ಗುಂಡಿ ಬಿದ್ದಂತಹ ಕುಶಾಲನಗರ - ಮುಳ್ಳುಸೋಗೆ ಹೆದ್ದಾರಿಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸಂಚಾರ ನಡೆಸಿದರು. ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಬಿಸಿಎಂ ಇಲಾಖೆ ಅಧಿಕಾರಿ ಶೇಖರ್ ಇದ್ದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಗರದ ರೆಡ್ ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಎರಡನೇ ಮೊಣ್ಣಂಗೇರಿ ಗ್ರಾಮದ ೩೫ ಕುಟುಂಬಗಳ ೮೮ ಮಂದಿ ಸಂತ್ರಸ್ತರಿದ್ದು, ಇವರಿಗೆ ಮೊಟ್ಟೆ ಸೇರಿದಂತೆ ಅಗತ್ಯ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಿದರು. ಮಕ್ಕಳಿಗೆ ಹಾಲು, ಬಿಸ್ಕತ್ತು, ಮೊಟ್ಟೆಯನ್ನು ಸರ್ಕಾರದ ಮೆನು ಮಾದರಿಯಲ್ಲಿ ಪೂರೈಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
ಸಿದ್ದಾಪುರ: ನೆಲ್ಯಹುದಿಕೇರಿಯ ಎಂ.ಜಿ ಕಾಲೋನಿ ನಿವಾಸಿ ನಾಸಿರುದ್ದೀನ್- ಶಾಹಿದ ದಂಪತಿಗಳಿಗೆ ಸೇರಿದ ಮನೆಯ ಗೋಡೆ ಮಹಾಮಳೆಯಿಂದಾಗಿ ಕುಸಿದು ಬಿದ್ದಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಿಗ ಸಚಿನ್ ಹಾಗೂ ಸ್ಥಳೀಯ ಜೆಡಿಎಸ್ ಅಧ್ಯಕ್ಷ ಶಿಯಾಫ್ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮ ಲೆಕ್ಕಿಗರು ಮಾತನಾಡಿ ನಷ್ಟದ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ನೀಡುವುದಾಗಿ ತಿಳಿಸಿದರು.
ಬಾಳೆಲೆ : ಹೋಬಳಿಯ ಕುಮಾರ್, ಧರಣಿ ಅವರಿಗೆ ಸೇರಿದ ಮನೆ ಹಾನಿಯಾಗಿದ್ದು, ಪರಿಹಾರ ಕಿಟ್ ನೀಡಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಚೆಟ್ಟಳ್ಳಿ : ನಿನ್ನೆ ಸುರಿದ ಮಳೆಯಿಂದ ಚೇರಳ ಶ್ರೀಮಂಗಲ ಗ್ರಾಮದ ಎಂ. ಪ್ರೇಮ ಜೋಯಪ್ಪ ಎಂಬವರ ಅಡುಗೆ ಮನೆ ಕುಸಿದು ಬಿದ್ದು ಹಾನಿಯಾಗಿದೆ.ಶ್ರೀಮಂಗಲ: ಶ್ರೀಮಂಗಲ ಹೋಬಳಿ ಟಿ ಶೆಟ್ಟಿಗೇರಿ ಗ್ರಾಮದ ಚೀಪೆ ಕೊಲ್ಲಿ ಕಾಲೋನಿ ನಿವಾಸಿ ಹೆಚ್ ಮಂಜುಳ ಅವರ ವಾಸದ ಮನೆಯ ಹಿಂಭಾಗದ ಗೋಡೆ ಹಾನಿಯಾಗಿದ್ದು, ಇಂದು ಅದೇ ಮನೆಗೆ ಮತ್ತೆ ತೀವ್ರ ಹಾನಿಯಾಗಿದೆ. ಈ ಬಗ್ಗೆ ಶ್ರೀಮಂಗಲ ಹೋಬಳಿ ಉಪ ತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು ಹಾಗೂ ಗ್ರಾಮ ಸಹಾಯಕರು ಸ್ಥಳ ಪರಿಶೀಲನೆ ಮಾಡಿದರು.
ಕುಶಾಲನಗರ: ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶದ ಹೊಲ ಗದ್ದೆಗಳು ಜಲಾವೃತಗೊಂಡಿವೆ. ಕುಶಾಲನಗರ ಸಮೀಪ ಕಾವೇರಿ ನದಿಯಿಂದ ೧ ಕಿ.ಮೀ ದೂರದಲ್ಲಿ ಕೊಲ್ಲಿ ಮೂಲಕ ನದಿ ನೀರು ನುಗ್ಗಿದ್ದು, ಹೊಲ ಸಂಪೂರ್ಣ ಜಲಾವೃತಗೊಂಡಿದೆ. ಈ ತಗ್ಗು ಪ್ರದೇಶದ ನಾಗರಿಕರು ಆತಂಕಗೊAಡಿದ್ದಾರೆ.