ಗೋಣಿಕೊಪ್ಪ ವರದಿ, ಆ. ೮: ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಅಮ್ಮಕೊಡವ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

೭ನೇ ತರಗತಿ ಮೇಲ್ಪಟ್ಟ ಅಮ್ಮಕೊಡವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದ್ದು, ಅಂಕಪಟ್ಟಿ, ಶಾಲೆಗಳಿಂದ ವ್ಯಾಸಂಗ ದೃಡೀಕರಣ ಪತ್ರ ಅಥವಾ ಶುಲ್ಕ ಪಾವತಿಸಿದ ನಕಲು ಪ್ರತಿಯನ್ನು ಆಗಸ್ಟ್ ೩೦ ರ ಒಳಗೆ ಸಂಘದ ಪ್ರತಿನಿಧಿ ಅಥವಾ ಅಧ್ಯಕ್ಷರು ಅಖಿಲ ಅಮ್ಮಕೊಡವ ವಿದ್ಯಾಭಿವೃದ್ದಿ ಸಂಘ ಹೆಸರಿನಲ್ಲಿ ಪೊನ್ನಂಪೇಟೆ ಕಾರು ನಿಲ್ದಾಣದ ಎದುರು ಇರುವ ಪಿ.ಜಿ. ಪ್ರಸಾದ್, ಛಾಪಾ ಕಾಗದ ಬರಹಗಾರರು ಕಚೇರಿಗೆ ತಲುಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೪೮೦೪೨೫೭೭೩, ೯೪೮೦೧೧೬೬೯೯ ಸಂಖ್ಯೆ ಸಂಪರ್ಕಿಸಲು ಸಂಘದ ಪ್ರಕಟಣೆ ತಿಳಿಸಿದೆ.