ಮಡಿಕೇರಿ, ಆ. ೯: ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ವಿಶ್ವ ಆದಿಮ ಸಂಜಾತ ಮೂಲ ವಂಶಸ್ಥ ಸಮುದಾಯದ ಹಕ್ಕುಗಳ ಅಂರ‍್ರಾಷ್ಟಿçÃಯ ದಿನಾಚರಣೆಯ ಪ್ರಯುಕ್ತ ಸತ್ಯಾಗ್ರಹ ನಡೆಯಿತು. ಕೊಡವ ರೇಸ್‌ಗೆ ಸಂಬAಧಿಸಿದ ೯ ಪ್ರಧಾನ ಹಕ್ಕೊತ್ತಾಯಗಳ ಪರಿಗಣನೆಗಾಗಿ ಸಂವಿಧಾನದ ೬ ಮೂಲಭೂತ ಹಕ್ಕುಗಳಲ್ಲಿ ಒಂದಾದ ಸಂವಿಧಾನಿಕ ಪರಿಹಾರವಾಗಿ ರಾಜ್ಯಾಂಗದ ೩೨ನೇ ವಿಧಿ ಅನ್ವಯ ತಿದ್ದುಪಡಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೆೆÃರಿ ಮುಂದೆ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್‌ನ ಸದಸ್ಯರು ಸತ್ಯಾಗ್ರಹ ನಡೆಸಿದರು. ಕೊಡವ ಜನಾಂಗದ ಬೇಡಿಕೆಗಳನ್ನು ಒಳಗೊಂಡ ಜ್ಞಾಪನಾ ಪತ್ರವನ್ನು ಸರಕಾರಕ್ಕೆ ಜಿಲ್ಲಾಡಳಿತದ ಮೂಲಕ ಕಳುಹಿಸಿಕೊಡಲಾಯಿತು.
ಸಂಘಟನೆಯ ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಮಾತನಾಡಿ, ಕೊಡವರು, ಕೊಡಗಿನ ಆದಿಮ ಸಂಜಾತ ಮೂಲ ವಂಶಸ್ಥ ಕುಲದವರಾಗಿದ್ದು, ವಿಶ್ವ ರಾಷ್ಟç ಸಂಸ್ಥೆಯು ಆದಿಮ ಸಂಜಾತ ಸೂಕ್ಷಾö್ಮತಿ ಸೂಕ್ಷö್ಮ ಮೂಲ ವಂಶಸ್ಥ ಕುಲದ ಸರ್ವಾಂಗೀಣ ಏಳಿಗೆಗಾಗಿ ಪ್ರತಿಜ್ಞೆಗೈದು ಪ್ರತೀ ವರ್ಷ ಆಗಸ್ಟ್ ೯ ರಂದು ಈ ಸಂಬAಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶ್ವದ ಎಲ್ಲಾ ರಾಷ್ಟçಗಳಿಗೂ ಆದಿಮ ಸಂಜಾತರ ನೆಲೆ, ಜನ್ಮಭೂಮಿ, ಅವರು ವಾಸಿಸುವ ಬಾಹುಳ್ಯ ಪ್ರದೇಶದ ಚಾರಿತ್ರಿಕ ನಿರಂತರತೆಯನ್ನು ದುರಾಕ್ರಮಣದಿಂದ ಮುಕ್ತಿಗೊಳಿಸಲು ರಾಜ್ಯಾಂಗ ಖಾತ್ರಿ ನೀಡಬೇಕೆಂದು ನಿರ್ದೇಶಿಸಿದ್ದು, ಈ ಸಂಬAಧ ಭಾರತವೂ ಸೇರಿದಂತೆ ಎಲ್ಲಾ ರಾಷ್ಟçಗಳು ವಿಶ್ವಸಂಸ್ಥೆಯ ಅಂರ‍್ರಾಷ್ಟಿçÃಯ ಒಡಂಬಡಿಕೆಗೆ ಸಹಿ ಹಾಕಿದ್ದು, ಕೊಡವ ಆದಿಮ ಸಂಜಾತ ಮೂಲ ವಂಶಸ್ಥರ ಸರ್ವಾಂಗೀಣ ಸಬಲೀಕರಣಕ್ಕೆ ಒತ್ತು ನೀಡಬೇಕೆಂದು ಆಗ್ರಹಿಸಿದರು.
ಚಿಕಾಗೋ ವಿಶ್ವವಿದ್ಯಾನಿಲಯದ ಪ್ರೊ. ಡಾ. ಮಾನಸ ರಾಘವನ್ ಮತ್ತು ಬೀರ್‌ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋ ಸೈನ್ಸ್ ಗ್ರೂಪ್ ಲೀಡರ್ ಡಾ. ನೀರಜ್ ರೈ ಹಾಗೂ ಆಂಥ್ರೋಪಾಲಿಜಿಕಲ್ ಸರ್ವೆ ಆಫ್ ಇಂಡಿಯಾದ ಅಧೀಕ್ಷಕ ಡಾ. ಮಿಥುನ್ ಸಿಗ್ದರ್ ಅವರುಗಳು, ಕೊಡವರು ಕೊಡಗಿನ ಆದಿಮ ಸಂಜಾತ ಮೂಲ ವಂಶಸ್ಥರೆAಬುದನ್ನು ಅಧ್ಯಯನದ ಮೂಲಕ ದೃಢಪಡಿಸಿದ್ದಾರೆ. ಇಂದು ವಿಪರ್ಯಾಸವೆಂದರೆ, ಯಾವುದೇ ವ್ಯಕ್ತಿಗಳು ೧೦ ವರ್ಷಕ್ಕೊಮ್ಮೆ ನಡೆಯುವ ಜನಗಣತಿಯಲ್ಲಿ ಒಮ್ಮೆ ದಾಖಲಾದರೆ ಅವರನ್ನು ಆದಿಮ ಸಂಜಾತರೆAದು ಕರೆದು, ಆದಿಮ ಸಂಜಾತ ಪದಕ್ಕೆ ಕಳಂಕ ಎಸಗಲಾಗುತ್ತಿದೆ. ಅವರನ್ನು ನೋಂದಾಯಿತ ನಾಗರಿಕರೆಂದು ಕರೆಯಬಹುದೇ ವಿನಃ ಆದಿಮ ಸಂಜಾತರೆAದು ಕರೆಯಲಾಗದು ಎಂದು ಅಭಿಪ್ರಾಯಪಟ್ಟರು.
ಸತ್ಯಾಗ್ರಹದಲ್ಲಿ ಸಿ.ಎನ್.ಸಿ.ಯ ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಪಟ್ಟಮಾಡ ಕುಶ, ಮಂದಪAಡ ಮನೋಜ್, ನಂದಿನೆರವAಡ ವಿಜು, ಅರೆಯಡ ಗಿರೀಶ್, ಬೆಪ್ಪಡಿಯಂಡ ದಿನು, ಬೆಪ್ಪಡಿಯಂಡ ಬಿದ್ದಪ್ಪ, ನಂದಿನೆರವAಡ ಅಪ್ಪಯ್ಯ, ನಂದಿನೆರವAಡ ಅಯ್ಯಣ್ಣ, ಮಂದಪAಡ ವಿಹಾನ್, ಮೇದುರ ಕಾಂತಿ, ಓಡಿಯಂಡ ಕಾರ್ಯಪ್ಪ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಪುದಿಯೊಕ್ಕಡ ಕಾಶಿ, ಬಡುವಂಡ ವಿಜಯ, ಕಾಟುಮಣಿಯಂಡ ಉಮೇಶ್, ಮಣವಟ್ಟಿರ ನಂದ ಅವರುಗಳು ಪಾಲ್ಗೊಂಡಿದ್ದರು.