ಮಡಿಕೇರಿ, ಆ. ೭: ಗುಡ್ಡೆಹೊಸೂರು ಹಾಗೂ ಬೊಳ್ಳೂರು ಗ್ರಾಮಗಳಿಗೆ ಅನುಕೂಲವಾಗುವಂತೆ ಮಂಜೂರಾಗಿರುವ ಸ್ಮಶಾನ ಜಾಗಕ್ಕೆ ಸಂಬAಧಿಸಿದAತೆ ಕೆಲವರು ವೃಥಾ ಕಾರಣಗಳನ್ನು ಮುಂದಿಟ್ಟುಕೊAಡು ವಿನಾಕಾರಣ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಎಸ್. ನಂದಿನಿ ಹಾಗೂ ಗುಡ್ಡೆಹೊಸೂರು ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅಭಿಷೇಕ್ ಹೇಳಿದ್ದಾರೆ.
ಪತ್ರಿಕಾಭವನದಲ್ಲಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಹಾಗೂ ಹಿತರಕ್ಷಣಾ ಸಮಿತಿ ವತಿಯಿಂದ ಕರೆಯಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರುಗಳು ಮಾತನಾಡಿದರು.
ಗುಡ್ಡೆಹೊಸೂರು ಮತ್ತು ಬೊಳ್ಳೂರು ಗ್ರಾಮಗಳಿಗೆ ಶವ ಸಂಸ್ಕಾರಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಗ್ರಾಮಗಳಿಗೆ ಸ್ಮಶಾನ ಜಾಗವನ್ನು ಮಂಜೂರು ಮಾಡಲಾಗಿದೆ. ಆದರೆ, ಗುಡ್ಡೆಹೊಸೂರು ಗ್ರಾಮಕ್ಕೆ ಸಂಬAಧಿಸಿದAತೆ ಗುಡ್ಡೆಹೊಸೂರು ಗ್ರಾಮದ ಸರ್ವೆ ನಂಬರ್ -೧/ಪಿ೩ನಲ್ಲಿ ೪೦ ಸೆಂಟ್ ಹಾಗೂ ಬೊಳ್ಳೂರು ಗ್ರಾಮದ ಸರ್ವೆ ನಂಬರ್ ೧/೨ರ ೩೫ ಸೆಂಟ್ ಜಾಗವು ಮಂಜೂರಾಗಿದೆ. ಆ ಜಾಗಗಳನ್ನು ಭೂ ಮಾಪಕರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಕಂದಾಯ ಇಲಾಖೆಯವರ ಸಮ್ಮುಖದಲ್ಲಿ ಸರ್ವೆ ನಡೆಸಿ ಹದ್ದುಬಸ್ತು ಗುರುತು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯು ಆ ಸ್ಮಶಾನ ಜಾಗಗಳಿಗೆ ನಾಮಫಲಕ ಅಳವಡಿಸಲು ಮುಂದಾದಾಗ ಮಮತ, ರಾಜಪ್ಪ ಮತ್ತು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಸದಸ್ಯ ಆರ್.ಕೆ. ಚಂದ್ರು ಇವರುಗಳು ಅಡ್ಡಿಪಡಿಸಿದ್ದಾರೆ. ಜಾಗವನ್ನು ಯಾರೇ ಮಂಜೂರು ಮಾಡಿಕೊಟ್ಟಿದ್ದರೂ, ನಾವು ಇಲ್ಲಿ ಸ್ಮಶಾನ ಮತ್ತು ನಿವೇಶನ ಹಂಚಿಕೆ ಮಾಡಲು ಬಿಡುವುದಿಲ್ಲ ಎಂದು ನಾಮಫಲಕ ಅಳವಡಿಸದಂತೆ ತಡೆದಿದ್ದಾರೆ. ಗುಡ್ಡೆಹೊಸೂರು ಮತ್ತು ಬೊಳ್ಳೂರು ಗ್ರಾಮಗಳ ಸುಮಾರು ೮೦೦ ಕುಟುಂಬಗಳಿAದ ಈ ಜಾಗದ ಬಗ್ಗೆ ಯಾವುದೇ ತಕರಾರಿಲ್ಲ. ಸ್ಮಶಾನ ಜಾಗಕ್ಕೆ ಅಡ್ಡಿಪಡಿಸುತ್ತಿರುವ ಕುಟುಂಬಗಳು ಸರ್ಕಾರದಿಂದ ಮಂಜೂರಾಗಿರುವ ಜಾಗದಲ್ಲಿ ವಾಸ ಮಾಡಿಕೊಂಡಿವೆ. ಆದುದರಿಂದ ಸ್ಮಶಾನ ಜಾಗವನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸುಪರ್ದಿಗೆ ನೀಡಲು ಸಂಬAಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರುಗಳು ಮನವಿ ಮಾಡಿದರು.
ಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಕೆ.ಆರ್. ನಿತ್ಯಾನಂದ, ಕೆ.ಜಿ. ಸುಶೀಲ, ಬಿ.ಎಂ. ಪ್ರದೀಪ್, ಎಂ.ಪಿ. ಶಿವಪ್ಪ ಉಪಸ್ಥಿತರಿದ್ದರು.