ಮಡಿಕೇರಿ, ಆ. ೭: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎನ್.ಸಿ.ಸಿ ಕೆಡೆಟ್‌ಗಳಾದ ಅಕ್ಷರ ತನ್ಮಯ್, ಶಾನ್ ಮಂದಣ್ಣ ಹಾಗೂ ಯಶ್ವಿನ್ ಬೋಪಯ್ಯ ಮಂಗಳೂರು ವಿಭಾಗ ಮಟ್ಟದ ತಳ ಸೈನಿಕ ಶಿಬಿರದ ಜೂನಿಯರ್ ವಿಭಾಗದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತಾ. ೮ ರಂದು (ಇಂದು) ಮೂಡಬಿದಿರೆಯಲ್ಲಿ ನಡೆಯುವ ಶೂಟಿಂಗ್ ಸ್ಪರ್ಧೆಯಲ್ಲಿ ಅಕ್ಷರ ತನ್ಮಯ್ ಹಾಗೂ ತಾ. ೧೨ರಿಂದ ವಿಜಯಪುರದಲ್ಲಿ ನಡೆಯುವ ಶೂಟಿಂಗ್ ಸ್ಪರ್ಧೆಯಲ್ಲಿ ಶಾನ್ ಮಂದಣ್ಣ ಹಾಗೂ ಯಶ್ವಿನ್ ಬೋಪಯ್ಯ ಪಾಲ್ಗೊಳ್ಳಲಿದ್ದಾರೆ. ಇವರು ೧೯ ಕರ್ನಾಟಕ ಬೆಟಾಲಿಯನ್‌ನ ಕೆಡೆಟ್‌ಗಳಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.