ಮಡಿಕೇರಿ, ಆ. ೭: ವಿದ್ಯುತ್ ಕಂಬಕ್ಕೆ ಜೀಪ್ ಡಿಕ್ಕಿಯಾದ ಪರಿಣಾಮ ಕಳೆದ ರಾತ್ರಿ ವಿದ್ಯುತ್ ಅಡಚಣೆಯಾದ ಘಟನೆ ನಗರದ ಕಾನ್ವೆಂಟ್ ಜಂಕ್ಷನ್ ಸಮೀಪ ನಡೆದಿದೆ.
ಡಿಕ್ಕಿ ಪರಿಣಾಮ ವಿದ್ಯುತ್ ಕಂಬ ಮುರಿದು ವಿದ್ಯುತ್ ವ್ಯತ್ಯಯವಾಗಿದೆ. ತಕ್ಷಣ ಸೆಸ್ಕ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಮಳೆಯ ನಡುವೆ ಹೊಸ ಕಂಬ ಅಳವಡಿಸಿ ವಿದ್ಯುತ್ ಸಮಸ್ಯೆ ಪರಿಹರಿಸಿದ್ದಾರೆ.