ಮುಂದುವರೆದ ಭಾರತೀಯ ಅಥ್ಲೀಟ್‌ಗಳ ಪದಕ ಬೇಟೆ

ಬರ್ಮಿಂಗ್‌ಹ್ಯಾಮ್, ಆ. ೭: ಕಾಮನ್‌ವೆಲ್ತ್ ಗೇಮ್ಸ್ ೨೦೨೨ರಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಭಾರತದ ತೆಕ್ಕೆಗೆ ಮತ್ತೆ ೪ ಪದಗಳ ಸೇರಿಕೊಂಡಿವೆ. ಇಂದು ಮಧ್ಯಾಹ್ನದ ಹೊತ್ತಿಗೆ ಬಾಕ್ಸಿಂಗ್‌ನಲ್ಲಿ ಎರಡು ಚಿನ್ನದ ಪದಕ ಬಂದಿದೆ. ಬಾಕ್ಸರ್ ನಿತು ಘಂಘಾಸ್ ಮತ್ತು ಅಮಿತ್ ಪಂಘಾಲ್ ಚಿನ್ನದ ಪದಕ ಗೆದ್ದಿದ್ದರೆ ೧೬ ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ೪೮ ಕೆ.ಜಿ. ವಿಭಾಗದ ಮಹಿಳೆಯ ಬಾಕ್ಸಿಂಗ್ ನಲ್ಲಿ ನಿತು ಘಂಘಾಸ್ ಇಂಗ್ಲೆAಡ್‌ನ ಡೆಮಿ-ಜೇಡ್ ರೆಸ್ಟನ್ ರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ೫೧ ಕೆ.ಜಿ. ವಿಭಾಗದ ಪುರುಷರ ಬಾಕ್ಸಿಂಗ್‌ನಲ್ಲಿ ಅಮಿತ್ ಪಂಘಾಲ್ ಇಂಗ್ಲೆAಡ್ ತಂಡದ ಕೀರನ್ ಮ್ಯಾಕ್ಡೊನಾಲ್ಡ್ರನ್ನು ಸೋಲಿಸಿ ಚಿನ್ನ ಗೆದ್ದಿದ್ದರು. ಮಹಿಳೆಯರ ಜಾವೆಲಿನ್ ಥ್ರೋ ವಿಭಾಗದಲ್ಲಿ ಅನ್ನು ರಾಣಿ ಕಂಚಿನ ಪದಕ ಗೆದ್ದಿದ್ದರೆ, ೧೦ ಸಾವಿರ ಮೀ. ರೇಸ್ ವಾಕ್‌ನಲ್ಲಿ ಭಾರತದ ಸಂದೀಪ್ ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ. ಇನ್ನು ಪುರುಷರ ಟ್ರಿಪಲ್ ಜಂಪ್ ನಲ್ಲಿ ಭಾರತದ ಎಲ್ಡೋಸ್ ಪಾಲ್ ಚಿನ್ನ ಗೆದ್ದರೆ ಮತ್ತು ಅಬ್ದುಲ್ಲಾ ಅಬೂಬಕ್ಕರ್ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.

ಉಪಗ್ರಹ ಉಡಾವಣೆ

ಶ್ರೀಹರಿಕೋಟ, ಆ. ೭: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾ ಕಾಶ ಕೇಂದ್ರದಲ್ಲಿ ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹಕ-ಎಸ್‌ಎಸ್ ಎಲ್‌ವಿ-ಡಿ೧ಇಒಎಸ್-೦೨ ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿ ಸಿರುವ ಂzಚಿಜiSAಖಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಇಂದು ಬೆಳಿಗ್ಗೆ ೯ ಗಂಟೆ ೧೮ ನಿಮಿಷಕ್ಕೆ ಉಪಗ್ರಹ ಉಡಾವಣೆ ಮಾಡ ಲಾಯಿತು. ಉಡಾವಣೆಯ ಎಲ್ಲಾ ಹಂತಗಳು ಸಹಜವಾಗಿ ಕೆಲಸ ಮಾಡಿದ್ದು ಎರಡೂ ಸ್ಯಾಟಲೈಟ್‌ಗಳನ್ನು ಕಕ್ಷೆಗೆ ಸೇರಿಸಲಾಗಿದೆ. ಆದರೆ ಕಕ್ಷೆಯು ನಿರೀಕ್ಷೆಗಿಂತ ಕಡಿಮೆ ಸಾಧಿಸಿದ್ದು ಅಸ್ಥಿರವಾಗಿದೆ ಎಂದು ಇಸ್ರೊ ಹೇಳಿದೆ.

ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ: ಬಿಬಿಎಂಪಿ

ಬೆAಗಳೂರು, ಆ. ೭: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಕೊನೆಗೂ ಬಿಬಿಎಂಪಿ ತೆರೆ ಎಳೆಯುವ ಕಾರ್ಯ ಮಾಡಿದ್ದು, ವಿವಾದಿತ ಭೂಮಿ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಘೋಷಣೆ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿಯ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಅವರು, ಬೆಂಗಳೂರು ನಗರದ ಚಾಮರಾಜಪೇಟೆಯ ಸರ್ವೆ ನಂಬರ್ ೪೦ರಲ್ಲಿ ೨ ಎಕರೆ ೫ ಗುಂಟೆ ಈದ್ಗಾ ಮೈದಾನವು ಕಂದಾಯ ಇಲಾಖೆಗೆ ಸೇರಿದೆ ಎಂದು ಘೋಷಿಸಿ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಇತ್ತೀಚಿಗೆ ಈದ್ಗಾ ಮೈದಾನದ ಮಾಲಿಕತ್ವದ ಕುರಿತು ವಿವಾದವನ್ನು ಸೃಷ್ಟಿಸಲಾಗಿತ್ತು. ಬಿಬಿಎಂಪಿ ತನ್ನ ದಾಖಲೆಗಳಲ್ಲಿ ಆಟದ ಮೈದಾನ ಎಂದು ದಾಖಲಾಗಿದೆ ಎಂದು ತಿಳಿಸಿತ್ತು. ವಕ್ಫ್ ಬೋರ್ಡ್ ಈದ್ಗಾ ಮೈದಾನ ವಕ್ಫ್ ಬೋರ್ಡ್ಗೆ ಸೇರಿದೆ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ವಕ್ಫ್ ಬೋರ್ಡ್ ಹೆಸರಿಗೆ ಖಾತೆಯನ್ನು ಮಾಡಲು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಎರಡು ಬಾರಿ ವಕ್ಫ್ ಬೋರ್ಡ್ಗೆ ನೋಟೀಸ್ ನೀಡಿತ್ತು. ಆದರೆ ವಕ್ಫ್ ಬೋರ್ಡ್ ನ್ಯಾಯಾಲಯದ ಆದೇಶವನ್ನು ಹೊರತುಪಡಿಸಿ, ಈದ್ಗಾ ಮೈದಾನ ವಕ್ಫ್ ಆಸ್ತಿ ಎಂಬುದನ್ನು ಪುಷ್ಟಿಕರಿಸುವಂತಹ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಹಾಗಾಗಿ ವಿಚಾರಣೆಯ ಬಳಿಕ ಆಸ್ತಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ಎಂದು ನಮೂದಿಸಲಾಗಿದೆ ಎಂದು ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ. ಈಗ ಬಿಬಿಎಂಪಿ ಅದು ಕಂದಾಯ ಇಲಾಖೆಯ ಆಸ್ತಿ ಎಂದು ತಿಳಿಸಿರುವುದರಿಂದ, ಕಂದಾಯ ಇಲಾಖೆ ಜೊತೆ ಯಾವ ರೀತಿ ವ್ಯವಹರಿಸಬೇಕು ಎಂಬುದರ ಕುರಿತು ಮುಂದಿನ ಹೆಜ್ಜೆಗಳನ್ನು ಇಡುತ್ತೇವೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಹೇಳಿದ್ದಾರೆ.

ಹವಾಮಾನ ಮುನ್ಸೂಚನೆ ಕಷ್ಟ ಸಾಧ್ಯವಾಗುತ್ತಿದೆ: ಐಎಂಡಿ ಡಿಜಿ

ನವದೆಹಲಿ, ಆ. ೭: ಹವಾಮಾನ ಬದಲಾವಣೆಯಿಂದಾಗಿ ಹವಾಮಾನ ಮುನ್ಸೂಚನೆ ಕಷ್ಟಸಾಧ್ಯವಾಗುತ್ತಿದೆ ಎಂದು ಐಎಂಡಿ ಡಿಜಿ ಹೇಳಿದ್ದಾರೆ. ಹವಾಮಾನ ಮುನ್ಸೂಚನೆಯ ನಿಖರತೆಗೆ ಹವಾಮಾನ ಬದಲಾವಣೆ ಪೆಟ್ಟು ನೀಡುತ್ತಿದ್ದು, ಇನ್ನಷ್ಟು ನಿಖರಗೊಳಿಸಲು ಜಾಗತಿಕ ಮಟ್ಟದಲ್ಲಿ ವೀಕ್ಷಣಾ ಜಾಲದ ಸಾಂದ್ರತೆ ಮತ್ತು ಹವಾಮಾನ ಮುನ್ಸೂಚನೆ ಮಾಡೆಲಿಂಗ್ ಅನ್ನು ಹೆಚ್ಚಿಸುವುದಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದು ಪ್ರಧಾನ ವ್ಯವಸ್ಥಾಪಕ ಮೃತ್ಯುಂಜಯ ಮಹೋಪಾತ್ರ ಹೇಳಿದ್ದಾರೆ. ಮುಂಗಾರು ಮಳೆ ದೇಶದಲ್ಲಿ ಮಹತ್ವದ ಟ್ರೆಂಡ್‌ನ್ನು ತೋರಿಸಿಲ್ಲವಾದರೂ, ವಾಡಿಕೆಗಿಂತಲೂ ಹೆಚ್ಚಿನ ಮಳೆಯ ಪ್ರಕರಣಗಳು ಏರಿಕೆಯಾಗಿವೆ ಹಾಗೂ ಕಡಿಮೆ ಮಳೆಯ ಪ್ರಕರಣಗಳು ಕುಸಿತ ಕಂಡಿದೆ ಇದು ಹವಾಮಾನ ಬದಲಾವಣೆಯಿಂದಾಗಿದೆ ಎಂದು ಮಹೋಪಾತ್ರ ಹೇಳಿದ್ದಾರೆ. ೧೯೦೧ ರಿಂದ ಮುಂಗಾರು ಮಳೆಗೆ ಸಂಬAಧಿಸಿದ ಡೇಟಾ ಸಂಗ್ರಹಿಸಿದ್ದೇವೆ. ಉತ್ತರ, ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದರೆ, ಪಶ್ಚಿಮ ಹಾಗೂ ರಾಜಸ್ಥಾನದ ಪ್ರದೇಶಗಳಲ್ಲಿ ಮಳೆ ಏರಿಕೆಯಾಗಿದೆ. ಈ ರೀತಿಯಾಗಿ ದೇಶವನ್ನು ಇಡೀಯಾಗಿ ಪರಿಗಣಿಸಿದರೆ, ಮಹತ್ವದ ಟ್ರೆಂಡ್ ಕಾಣುತ್ತಿಲ್ಲ ಎಂದು ಐಎಂಡಿ ಹೇಳಿದೆ.

ಆಕಾಶ ಏರ್ ಕಾರ್ಯಾಚರಣೆ ಪ್ರಾರಂಭ

ನವದೆಹಲಿ, ಆ. ೭: ಭಾರತದ ಹೊಸ ಆಕಾಶ ಏರ್ ವಿಮಾನಯಾನ ಕಾರ್ಯಾಚರಣೆ ಆರಂಭಿಸಿದ್ದು ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಮೊದಲ ಹಾರಾಟ ನಡೆಸಿದೆ. ಇದನ್ನು ಜುಲೈ ೧ ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಮತ್ತು ಒoS (ನಿವೃತ್ತ) ಜನರಲ್ ವಿಜಯ್ ಕುಮಾರ್ ಸಿಂಗ್ ಅವರು ವಿಮಾನಯಾನವನ್ನು ಉದ್ಘಾಟಿಸಿದ್ದರು. ಜುಲೈ ೨೨ ರಂದು ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ಅಹಮದಾಬಾದ್, ಬೆಂಗಳೂರು, ಮುಂಬೈ ಮತ್ತು ಕೊಚ್ಚಿಯಲ್ಲಿ ಆರಂಭಿಕ ನೆಟ್‌ವರ್ಕ್ನೊಂದಿಗೆ ತನ್ನ ಮೊದಲ ವಾಣಿಜ್ಯ ವಿಮಾನಗಳಿಗಾಗಿ ಟಿಕೆಟ್ ಬುಕಿಂಗ್ ಅನ್ನು ಪ್ರಾರಂಭಿಸಿತ್ತು. ಮುಂಬೈ ಮತ್ತು ಅಹಮದಾಬಾದ್ ನಡುವೆ ೨೮ ವಾರದ ವಿಮಾನಗಳನ್ನು ನೀಡುವ ಮೂಲಕ ಇಂದಿನಿAದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ತದ ನಂತರ, ಆಗಸ್ಟ್ ೧೩ ರಿಂದ, ವಿಮಾನಯಾನ ಸಂಸ್ಥೆಯು ಬೆಂಗಳೂರು ಮತ್ತು ಕೊಚ್ಚಿ ನಡುವೆ ಹೆಚ್ಚುವರಿ ೨೮ ವಾರದ ವಿಮಾನಗಳನ್ನು ಪ್ರಾರಂಭಿಸುತ್ತದೆ. ಮೊಬೈಲ್ ಅಪ್ಲಿಕೇಶನ್ ಮತ್ತು ಅದರ ವೆಬ್‌ಸೈಟ್ ತಿತಿತಿ.ಚಿಞಚಿsಚಿಚಿiಡಿ.ಛಿom ಮೂಲಕ ವಿಮಾನಗಳಿಗೆ ಬುಕಿಂಗ್ ಲಭ್ಯವಿದೆ.

ಇಸ್ಲಾಮಿಕ್ ಸ್ಟೇಟ್‌ನ ಸಕ್ರಿಯ ಸದಸ್ಯನನ್ನು ಬಂಧಿಸಿದ ಎನ್‌ಐಎ

ನವದೆಹಲಿ, ಆ. ೭: ಭಯೋತ್ಪಾದಕ ಸಂಘಟನೆಗೆ ನಿಧಿ ಸಂಗ್ರಹಿಸುವಲ್ಲಿ ಭಾಗಿಯಾಗಿದ್ದಕ್ಕಾಗಿ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಇಸ್ಲಾಮಿಕ್ ಸ್ಟೇಟ್ (ಐಎಸ್‌ಐಎಸ್)ನ ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯನನ್ನು ದೆಹಲಿಯ ಆತನ ನಿವಾಸದಿಂದ ಬಂಧಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಆರೋಪಿಯನ್ನು ದೆಹಲಿಯ ಬಟ್ಲಾ ಹೌಸ್ ನಿವಾಸಿ ಮೊಹ್ಸಿನ್ ಅಹ್ಮದ್ ಎಂದು ಗುರುತಿಸಲಾಗಿದೆ. ಬಟ್ಲಾ ಹೌಸ್‌ನಲ್ಲಿರುವ ಜೋಗಾಬಾಯಿ ಎಕ್ಸ್ಟೆನ್ಶನ್ ಬಳಿ ವಾಸಿಸುತ್ತಿದ್ದ ಆರೋಪಿ ಮೊಹ್ಸಿನ್ ಅಹ್ಮದ್‌ನ ನಿವಾಸದಲ್ಲಿ ಎನ್‌ಐಎ ನಿನ್ನೆ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಈತ ಬಿಹಾರದ ಪಾಟ್ನಾದ ಖಾಯಂ ನಿವಾಸಿ. ನಂತರ ಆತನನ್ನು ಆನ್‌ಲೈನ್ ಮತ್ತು ಐಸಿಸ್‌ನ ಇತರೆ ಚಟುವಟಿಕೆಗಳಲ್ಲಿ ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಭಯೋತ್ಪಾದನಾ ವಿರೋಧಿ ಸಂಸ್ಥೆ ತಿಳಿಸಿದೆ.

ಈಶ್ವರ್ ಲಾಲ್ ಸಿಂಗ್ ಸಿಂಗಪೂರ್‌ನಲ್ಲಿ ನಿಧನ

ಸಿಂಗಪೂರ್, ಆ. ೭: ಭಾರತೀಯ ರಾಷ್ಟಿçÃಯ ಸೇನೆಯ ಹಿರಿಯ ಈಶ್ವರ್ ಲಾಲ್ ಸಿಂಗ್ (೯೨) ಸಿಂಗಪೂರ್‌ನಲ್ಲಿ ನಿಧನರಾದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಎನ್‌ಐಎನಲ್ಲಿ ಸೇವೆ ಸಲ್ಲಿಸಿದ್ದರು. ೧೯೪೩ ರಲ್ಲಿ ಐಎನ್‌ಎ ಸೇರಿದ್ದ ಸಿಂಗ್, ಬೋಸ್ ಅವರೊಂದಿಗೆ ನಿಕಟರಾಗಿದ್ದರು. ಮೇಜರ್ (ನಿವೃತ್ತ) ಈಶ್ವರ್ ಲಾಲ್ ಸಿಂಗ್ ಅವರು ಭಾರತೀಯ ಸ್ವಾತಂತ್ರ‍್ಯಕ್ಕಾಗಿ ಅತ್ಯಂತ ಶೌರ್ಯದಿಂದ ಹೋರಾಡಿದ್ದರು. ೨೦೧೯ ರ ನವೆಂಬರ್‌ನಲ್ಲಿ ಸಿಂಗಪೂರ್‌ಗೆ ಭೇಟಿ ನೀಡಿದ್ದಾಗ ಅವರೊಂದಿಗೆ ನಡೆಸಿದ್ದ ಸಂವಹನ ನೆನಪಾಗುತ್ತಿದೆ. ಅವರ ಅಗಲಿಕೆ ನೋವುಂಟು ಮಾಡುತ್ತಿದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.