ಕೂಡಿಗೆ, ಆ. ೬: ಹಾರಂಗಿ ಅಣೆಕಟ್ಟೆಯಿಂದ ೨೦೨೨ರ ಖಾರೀಫ್ ಬೆಳೆಗಳಿಗೆ ೫೦೦ ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ. ಅಣೆಕಟ್ಟೆಯ ವಿದ್ಯುತ್ ಘಟಕದ ಮೂಲಕ ಮುಖ್ಯ ನಾಲೆಗೆ ೫೦೦ ಕ್ಯೂಸೆಕ್ಸ್ ನೀರನ್ನು ಹರಿಸಲಾಗಿ, ಅದು ಮುಖ್ಯ ನಾಲೆ ಮೂಲಕ ಕಣಿವೆಯವರೆಗೆ ಹೋಗಿ ಅಲ್ಲಿಂದ ವಿಭಾಗವಾಗಿ ಎಡದಂಡೆ ನಾಲೆಗೆ ೨೦೦ ಕ್ಯೂಸೆಕ್ಸ್ ನೀರು ಮತ್ತು ಬಲ ದಂಡೆಯ ಮೂಲಕ ೩೦೦ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.

ಅಣೆಕಟ್ಟೆಯ ಒಳಹರಿವಿನ ಪ್ರಮಾಣವನ್ನು ನೋಡಿಕೊಂಡು ಅಣೆಕಟ್ಟೆಯ ನೀರಿನ ಮಟ್ಟವನ್ನು ಕಾಯ್ದಿರಿಸಿಕೊಂಡು ನದಿಗೆ ಈಗಾಗಲೇ ೪,೦೦೦ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ. ಅಲ್ಲದೆ ಹಾರಂಗಿ ಅಚ್ಚುಕಟ್ಟು ಪ್ರದೇಶದಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದ ನಾಲೆಗೆ ಹಂತ ಹಂತವಾಗಿ ನೀರಿನ ಮಟ್ಟವನ್ನು ಹೆಚ್ಚಿಸಲಾಗುವುದು ಎಂದು ಹಾರಂಗಿಯ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.