ಸೋಮವಾರಪೇಟೆ, ಆ.೬: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಉಪಯೋಗಕ್ಕೆ ರೂ.೨೫ ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.

ಲಯನ್ಸ್ ಅಧ್ಯಕ್ಷ ಸಿ.ಕೆ.ರೋಹಿತ್ ಅವರು ಘಟಕವನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆಯ ಬಗ್ಗೆ ತಿಳಿಸಿ, ಸದುಪಯೋಗ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.

ಲಯನ್ಸ್ ಜಿಲ್ಲಾ ರಾಯಭಾರಿ ಕೆ.ಎಂ. ಜಗದೀಶ್ ಅವರು ಮಾತನಾಡಿ, ಶುದ್ಧ ನೀರಿನ ಅವಶ್ಯ ಮತ್ತು ಪ್ರತಿದಿನ ಕುಡಿಯಬೇಕಾದ ನೀರಿನ ಪ್ರಮಾಣದ ಬಗ್ಗೆ ತಿಳಿಸಿದರು. ಇದೇ ಸಂದರ್ಭ ಶಾಲೆಯ ಆವರಣದಲ್ಲಿ ನೆರಳಿನ ಗಿಡ ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು. ಸಸ್ಯಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಕಾಪಾಡುವುದು ಅತೀ ಅವಶ್ಯವೆಂದು ಲಯನ್ಸ್ ಅಧ್ಯಕ್ಷರು, ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಈ ಸಂದರ್ಭ ಮುಖ್ಯೋಪಾಧ್ಯಾಯಿನಿ ಪಿ.ಕೆ. ಲಕ್ಷಿö್ಮ, ಲಯನ್ಸ್ ಕಾರ್ಯದರ್ಶಿ ಕೆ.ಎನ್. ತೇಜಸ್ವಿ, ಖಜಾಂಚಿ ಜಿ.ಟಿ. ಯೋಗೇಂದ್ರ, ನಿಕಟಪೂರ್ವ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಎಸ್.ಬಿ. ಲೀಲಾ ರಾಮ್, ಜಿ.ಎಸ್. ರಾಜಾರಾಮ್, ಎಸ್.ಎನ್. ಯೋಗೇಶ್, ಪವನ್ ಮುತ್ತಪ್ಪ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕರಾದ ಎ.ಎಸ್. ಮಹೇಶ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.