ಅನಿಲ್ ಎಚ್.ಟಿ. ಮಡಿಕೇರಿ, ಆ. ೬ : ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಹರ್ ಘರ್ ತಿರಂಗ ಹೆಸರಿನ ಪ್ರತೀ ಮನೆಯಲ್ಲಿಯೂ ಆಗಸ್ಟ್ ೧೩ ರಿಂದ ೧೫ ರವರೆಗೆ ರಾಷ್ಟçಧ್ವಜ ಹಾರಿಸುವ ವಿನೂತನ ಯೋಜನೆಗೆ ಕೊಡಗು ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನೆ ಕಂಡುಬAದಿದೆ. ಧ್ವಜ ಮಾರಾಟ ಕೇಂದ್ರಗಳಿಗೆ ಹಬ್ಬದ ಸಂಭ್ರಮದAತೆ ತೆರಳುತ್ತಿರುವ ಜನರು ರಾಷ್ಟçಧ್ವಜವನ್ನು ಶ್ರದ್ಧೆಯಿಂದ ಕೊಂಡೊಯ್ಯುತ್ತಿದ್ದಾರೆ. ಮಳೆಯ ನಡುವೇ ಕೊಡಗು ಜಿಲ್ಲೆಯಾದ್ಯಂತ ೩ ದಿನಗಳ ಕಾಲ ಹರ್ ಘರ್ ತಿರಂಗ ಯೋಜನೆಗೆ ಸಾರ್ವಜನಿಕರು ಸ್ವಯಂಪ್ರೇರಣೆಯಿAದ ಸಜ್ಜಾಗುತ್ತಿರುವುದು ವಿಶೇಷ.

ಆಗಸ್ಟ್ ೧೫ ರಂದು ಭಾರತಕ್ಕೆ ಸ್ವಾತಂತ್ರ‍್ಯ ಲಭಿಸಿ ೭೫ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಆ. ೧೩ ರಿಂದ ೧೫ ರವರೆಗೆ ರಾತ್ರಿ ಹಗಲೂ ದೇಶದ ೨೦ ಕೋಟಿ ಮನೆಗಳ ಮೇಲೆ ದೇಶಭಕ್ತಿಯ ಪ್ರತೀಕವಾಗಿ, ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹನೀಯರ ಸ್ಮರಣಾರ್ಥ ರಾಷ್ಟçಧ್ವಜ ಹಾರಿಸುವ ಯೋಜನೆ ರೂಪುಗೊಂಡಿದೆ.

ಇದಕ್ಕಾಗಿ ಕೊಡಗು ಜಿಲ್ಲೆಯಲ್ಲಿಯೂ ಸಿದ್ಧತೆಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಈಗಾಗಲೇ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳಿಗೆ ವಿತರಿಸಲು ೨೫ ಸಾವಿರದಷ್ಟು ರಾಷ್ಟçಧ್ವಜ ಖರೀದಿಸಿ ವಿತರಣೆ ಪ್ರಾರಂಭಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ತಿಳಿಸಿದರು. ಸರ್ಕಾರದ ವೇತನ ಪಡೆಯುತ್ತಿರುವ ಪ್ರತೀಯೋರ್ವರೂ ರಾಷ್ಟçಧ್ವಜ ಕಡ್ಡಾಯವಾಗಿ ಹಾರಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತÀ ಸರ್ಕಾರಿ ಸಿಬ್ಬಂದಿಗಳಿಗೆ ಧ್ವಜ ಪೂರೈಸಲಾಗುತ್ತಿದೆ.

ಅಂಚೆ ಇಲಾಖೆ ಮೂಲಕವೂ ಕೇಂದ್ರ ಸರ್ಕಾರ ಧ್ವಜವನ್ನು ಸರಬರಾಜು ಮಾಡಲು ಮುಂದಾಗಿದೆ. ಕಳೆದ ೬ ದಿನಗಳಿಂದ ಮಡಿಕೇರಿ ಕೇಂದ್ರ ಅಂಚೆ ಕಚೇರಿಯಲ್ಲಿ ಸಾವಿರಾರು ಧ್ವಜ ಮಾರಾಟವಾಗಿದೆ. ೨೫ ರೂ. ಗಳಿಗೆ ಧ್ವಜವನ್ನು ಮಾರಾಟ ಮಾಡಲಾಗುತ್ತಿದ್ದು, ಮಕ್ಕಳು, ಮಹಿಳೆಯರೂ ಸೇರಿದಂತೆ ಜನ ಸರದಿ ಸಾಲಿನಲ್ಲಿ ನಿಂತು ಧ್ವಜ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ ಎಂದು ಅಂಚೆ ಪಾಲಕ ಟಿ.ಪಿ. ಶ್ರೀನಿವಾಸ್ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿನ ೨೪ ಉಪ ಅಂಚೆ ಕಚೇರಿ, ೧೮೫ ಶಾಖಾ ಕಚೇರಿಗಳಲ್ಲಿಯೂ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಮಡಿಕೇರಿಯ ಕೇಂದ್ರ ಅಂಚೆ ಕಚೇರಿಯಲ್ಲಿಯೇ ಜಿಲ್ಲಾ ಪಂಚಾಯತ್ ಮಾಡಿಕೊಂಡಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಈಗಾಗಲೇ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಸರ್ಕಾರಿ ಅಧಿಕಾರಿ, ಸಿಬ್ಬಂದಿಗಳಿಗೆ ವಿತರಿಸಲು ೨೫ ಸಾವಿರದಷ್ಟು ರಾಷ್ಟçಧ್ವಜ ಖರೀದಿಸಿ ವಿತರಣೆ ಪ್ರಾರಂಭಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ತಿಳಿಸಿದರು. ಸರ್ಕಾರದ ವೇತನ ಪಡೆಯುತ್ತಿರುವ ಪ್ರತೀಯೋರ್ವರೂ ರಾಷ್ಟçಧ್ವಜ ಕಡ್ಡಾಯವಾಗಿ ಹಾರಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತÀ ಸರ್ಕಾರಿ ಸಿಬ್ಬಂದಿಗಳಿಗೆ ಧ್ವಜ ಪೂರೈಸಲಾಗುತ್ತಿದೆ.

ಅಂಚೆ ಇಲಾಖೆ ಮೂಲಕವೂ ಕೇಂದ್ರ ಸರ್ಕಾರ ಧ್ವಜವನ್ನು ಸರಬರಾಜು ಮಾಡಲು ಮುಂದಾಗಿದೆ. ಕಳೆದ ೬ ದಿನಗಳಿಂದ ಮಡಿಕೇರಿ ಕೇಂದ್ರ ಅಂಚೆ ಕಚೇರಿಯಲ್ಲಿ ಸಾವಿರಾರು ಧ್ವಜ ಮಾರಾಟವಾಗಿದೆ. ೨೫ ರೂ. ಗಳಿಗೆ ಧ್ವಜವನ್ನು ಮಾರಾಟ ಮಾಡಲಾಗುತ್ತಿದ್ದು, ಮಕ್ಕಳು, ಮಹಿಳೆಯರೂ ಸೇರಿದಂತೆ ಜನ ಸರದಿ ಸಾಲಿನಲ್ಲಿ ನಿಂತು ಧ್ವಜ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ ಎಂದು ಅಂಚೆ ಪಾಲಕ ಟಿ.ಪಿ. ಶ್ರೀನಿವಾಸ್ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿನ ೨೪ ಉಪ ಅಂಚೆ ಕಚೇರಿ, ೧೮೫ ಶಾಖಾ ಕಚೇರಿಗಳಲ್ಲಿಯೂ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಮಡಿಕೇರಿಯ ಕೇಂದ್ರ ಅಂಚೆ ಕಚೇರಿಯಲ್ಲಿಯೇ (ಮೊದಲ ಪುಟದಿಂದ) ಕೊಡಗಿನಲ್ಲಿಯೂ ಬಿಜೆಪಿ ರಾಷ್ಟçಧ್ವಜ ಹಾರಾಟದ ಅಭಿಯಾನಕ್ಕೆ ಕೈಜೋಡಿಸಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದರು.

ಕೊಡಗಿನಲ್ಲಿ ಮುಂದಿನ ಶನಿವಾರದಿಂದ ಸೋಮವಾರದವರೆಗೆ ಮನೆ ಮನೆಯಲ್ಲಿಯೂ ರಾಷ್ಟçಧ್ವಜ ಹಾರಾಡಲಿದ್ದು ಮಳೆ, ಗಾಳಿ ಆತಂಕದ ಮಧ್ಯೆಯೂ ದೇಶಪ್ರೇಮ ವ್ಯಕ್ತಪಡಿಸಲು ಜನ ಸಂಭ್ರಮದಿAದ ಸಜ್ಜಾಗುತ್ತಿದ್ದಾರೆ. ಪ್ರಧಾನಿ ಕರೆ ಮೇರೆಗೆ ಈಗಾಗಲೇ ಹಲವರು ತಮ್ಮ ಮೊಬೈಲ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ಸ್ಟೇಟಸ್‌ನಲ್ಲಿ ರಾಷ್ಟçಧ್ವಜದೊಂದಿಗಿನ ಫೋಟೋಗಳನ್ನು ಹಾಕಿಕೊಂಡಿದ್ದಾರೆ.

ಯಾಕಾಗಿ ಹರ್ ಘರ್ ತಿರಂಗ ?

ಆಗಸ್ಟ್ ೧೫ ಕ್ಕೆ ಭಾರತ ಆಂಗ್ಲರ ಆಡಳಿತದಿಂದ ಸ್ವತಂತ್ರ‍್ಯಗೊAಡು ೭೫ ವರ್ಷಗಳಾಗಲಿವೆ. ಈ ಅಮೃತ ಮಹೋತ್ಸವದ ಸಡಗರವನ್ನು ಈ ಬಾರಿ ದೇಶವ್ಯಾಪಿ ಸಂಭ್ರಮದಿAದ ಆಚರಿಸಲು ಪ್ರಧಾನಿ ಮೋದಿ ಮನೆ ಮನೆಯಲ್ಲಿಯೂ ತ್ರಿವರ್ಣ ಧ್ವ್ವಜ ಹಾರಾಟದ ಯೋಜನೆ ರೂಪಿಸಿದ್ದಾರೆ. ಜುಲೈ ೨೨ ಕ್ಕೆ ಈ ದೇಶದ ರಾಷ್ಟçಧ್ವಜವನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅನಾವರಣಗೊಳಿಸಿ ೭೫ ವರ್ಷಗಳು ಭರ್ತಿಯಾಗಿದ್ದವು.

ಈ ವರ್ಷ ಅದೇ ದಿನ ರಾಷ್ಟçಧ್ವಜ ಹಾರಾಟದ ನೀತಿ ಸಂಹಿತೆಯನ್ನು ಮಾರ್ಪಾಡು ಮಾಡಿ ಹಗಲು ಮತ್ತು ರಾತ್ರಿಯಲ್ಲಿಯೂ ಧ್ವಜ ಹಾರಿಸಬಹುದು ಎಂದು ಘೋಷಿಸಲಾಯಿತು.

ಭಾರತದ ಸ್ವಾತಂತ್ರö್ಯ ಚಳುವಳಿಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು, ಸಾವಿರಾರು ಮಂದಿ ಜೀವ ಬಲಿದಾನ ಮಾಡಿದ್ದರಿಂದಾಗಿಯೇ ಭಾರತ ಸ್ವತಂತ್ರö್ಯ ದೇಶವಾಯಿತು. ಅಂಥ ಮಹಾನುಭಾವರ ಸ್ಮರಣೆಯೊಂದಿಗೆ, ದೇಶಭಕ್ತಿಯನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ, ದೇಶಕ್ಕಾಗಿ ನಾವಿದ್ದೇವೆ ಎಂಬ ಸಂದೇಶವನ್ನು ಪ್ರತೀ ನಾಗರಿಕರೂ ಜಗತ್ತಿಗೆ ನಿರೂಪಿಸುವ ನಿಟ್ಟಿನಲ್ಲಿ ಮೂರು ದಿನಗಳ ಕಾಲ ಪ್ರತೀ ಮನೆಯಲ್ಲಿಯೂ ರಾಷ್ಟçದ ಹೆಮ್ಮೆಯ ಧ್ವಜವನ್ನು ಹಾರಿಸಬೇಕಾಗಿದೆ, ಸಂಭ್ರಮದಿAದ ರಾಷ್ಟçದ ಮಹತ್ವದ ಧ್ವಜ ಹಾರಿಸುವ ಮೂಲಕ ಭಾರತ ದೇಶವನ್ನು ಗೌರವಿಸಿ ಎಂದು ಈಗಾಗಲೇ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಭಾರತದ ೨೦ ಕೋಟಿ ಮನೆಗಳಲ್ಲಿಯೂ ೩ ದಿನಗಳ ಕಾಲ ರಾಷ್ಟçಧ್ವಜ ಹಾರಾಡಿದರೆ ಅದು ಗಿನ್ನೀಸ್ ದಾಖಲೆಯಾಗಲಿದೆ. ದೇಶವ್ಯಾಪಿ ರಾಷ್ಟçಧ್ವಜ ಹಾರಾಟ ಮಾಡಬೇಕಾಗಿರುವುದರಿಂದಾಗಿ ಭಾರತದಾದ್ಯಂತ ಧ್ವಜ ಉತ್ಪಾದಕರು ಇದೀಗ ಬಿಡುವಿಲ್ಲದೆ ಧ್ವಜ ಸಿದ್ಧಗೊಳಿಸಿ ವಿತರಿಸುವ ನಿಟ್ಟಿನಲ್ಲಿ ಕಾರ್ಯಪ್ರತರಾಗಿದ್ದಾರೆ. ಧ್ವಜ ತಯಾರಿ ಉದ್ಯಮಕ್ಕೆ ಕೇಂದ್ರ ವಿತ್ತ ಸಚಿವಾಲಯ ಜಿಎಸ್‌ಟಿ ರದ್ದುಗೊಳಿಸಿರುವುದು ಕೂಡ ಅಮೃತ್ ಮಹೋತ್ಸವದ ಕೊಡುಗೆಯಾಗಿದೆ.

ಹಲವು ವರ್ಷಗಳ ಮೊದಲು ದೇಶಭಕ್ತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಪ್ರಸಾರವಾದ ಮಿಲೇ ಸುರ್ ಮೇರಾ ತುಮರಾ ಎಂಬ ಖ್ಯಾತ ಹಾಡಿನ ಬಳಿಕ ಇದೀಗ ಹರ್ ಘರ್ ತಿರಂಗ ಅಭಿಯಾನಕ್ಕಾಗಿ ಸರ್ಕಾರ ಹೊಸದ್ದೊಂದು ಹಾಡನ್ನು ಬಿಡುಗಡೆಗೊಳಿಸಿದ್ದು ಅಪಾರ ಜನಪ್ರಿಯತೆ ಪಡೆದಿದೆ. ಪ್ರತೀ ರಾಜ್ಯದ ಖ್ಯಾತನಾಮರು ರೂಪದರ್ಶಿಗಳಾಗಿ ಈ ಹಾಡಿನಲ್ಲಿ ಪಾಲ್ಗೊಂಡಿದ್ದಾರೆ. ಸಾಮಾನ್ಯವಾಗಿ ಸ್ವಾತಂತ್ರೊö್ಯÃತ್ಸವ, ಗಣರಾಜ್ಯೋತ್ಸವ ಸೇರಿದಂತೆ ಸರ್ಕಾರಿ ಸಮಾರಂಭಗಳಲ್ಲಿ ಮಾತ್ರ ಸೀಮಿತವಾಗಿದ್ದ ಭಾರತದ ರಾಷ್ಟçಧ್ವಜ ಇದೀಗ ಮನೆಮನೆಯಲ್ಲಿಯೂ ಪ್ರಾಮುಖ್ಯತೆ ಪಡೆಯುವ ನಿಟ್ಟಿನಲ್ಲಿ ಹರ್ ಘರ್ ತಿರಂಗ ಯೋಜನೆ ಕಾರಣವಾಗಿದೆ.

ರಾಷ್ಟçಧ್ವÀ್ವಜದ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ಭಾರತದಾದ್ಯಂತ ಬೃಹತ್ ಆಂದೋಲನ ನಡೆಯುತ್ತಿರುವುದು ದೇಶದ ರಾಷ್ಟಿçÃಯ ಧ್ವಜಕ್ಕೆ ದೊರಕುತ್ತಿರುವ ಮನ್ನಣೆಗೆ ಸಾಕ್ಷಿಯಾಗಲಿದೆ.

ಮನೆ ಮನೆಯಲ್ಲಿಯೂ ರಾಷ್ಟçಧ್ವಜ ಹಾರಾಟದ ಮೂಲಕ ದೇಶ ಪ್ರೇಮದ ಪ್ರಜ್ವಲನೆಯೊಂದಿಗೆ ಮನೆಯ ಜತೆಗೇ ಮನದಲ್ಲಿಯೂ ಭಾರತೀಯತೆಯನ್ನು ಮೂಡಿಸುವ ವಿಶಿಷ್ಟ ಪ್ರಯತ್ನ ಇದಾಗಲಿದೆ.