ಚೆಟ್ಟಳ್ಳಿ, ಆ. ೬: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರ ಗತ ವೈಭವಕ್ಕೆ ಮರಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸಂಬAಧಿಸಿದವರು ತೆಗೆದುಕೊಳ್ಳಬೇಕಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಪಟ್ಟರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಚೆಟ್ಟಳ್ಳಿಯ ಕೇಂದ್ರೀಯ ಪ್ರಾಯೋಗಿಕ ತೋಟಗಾರಿಕಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಡಗಿನ ಕಿತ್ತಳೆ ಬೆಳೆಯ ಸಂಶೋಧನೆಗಾಗಿ ಆರಂಭವಾದ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರಕ್ಕೆ ಅದರದ್ದೇ ಆದ ಇತಿಹಾಸವಿದೆ. ಹಲವು ಏಳು ಬೀಳುಗಳನ್ನು ಕಂಡಿರುವ ಈ ಕೇಂದ್ರದಿAದ ಜಿಲ್ಲೆ ಮಾತ್ರವಲ್ಲದೆ ರಾಜ್ಯ, ಹೊರರಾಜ್ಯದ ಕೃಷಿಕರಿಗೂ ಅನುಕೂಲವಾಗಿದೆ. ಇಲ್ಲಿ ರೈತರಿಗೆ ಅನುಕೂಲವಾಗುವ ಇನ್ನಷ್ಟು ಸಂಶೋಧನೆಗಳು ನಡೆಯುವುದರ ಜೊತೆಗೆ ಆರ್ಥಿಕವಾಗಿ ಲಾಭದಾಯಕ ವಾಗಬಲ್ಲ ಬೆಳೆಗಳನ್ನು ಪರಿಚಯಿಸುವ ಕೆಲಸ ಆಗಬೇಕೆಂದರು. ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರದ ನಿರ್ದೇಶಕ ಡಾ. ರಾಜೇಂದ್ರನ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ಮಹತ್ವದ ಸ್ಥಾನವಿದೆ. ಉತ್ತಮ ಆರೋಗ್ಯ ಮತ್ತು ಜ್ಞಾನ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಎಲ್ಲರಲ್ಲೂ ಕಲಿಯುವ ಆಸಕ್ತಿ ಇರಬೇಕು. ಕಚೇರಿ ಅವಧಿಯಲ್ಲಿ ಕೃಷಿಕರಿಗೆ ಎಲ್ಲಾ ಬಗೆಯ ಅಗತ್ಯ ನೆರವು ನೀಡಲು ತಮ್ಮ ಕೇಂದ್ರ ಸದಾ ಸಿದ್ಧವಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಎಲ್ಲಾ ವಿಷಯಗಳ ಬಗ್ಗೆಯೂ ಪತ್ರಕರ್ತರಿಗೆ ಬರೆಯ ಬೇಕಾಗಿ ಬರುತ್ತದೆ. ಹಾಗಾಗಿ ಇಂತಹ ಜ್ಞಾನ ಪಡೆದುಕೊಳ್ಳುವುದು ಅಗತ್ಯ ಎಂದರು. ಮತ್ತೊಬ್ಬರು ಮುಖ್ಯ ಅತಿಥಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರಿಗೆ ನಿಂದನೆ, ಮಾನನಷ್ಟ ಮೊಕದ್ದಮೆ ಹೊಸದಲ್ಲ. ಇಂಥದ್ದಕ್ಕೆಲ್ಲ ಹೆದರದೆ ಸಮಾಜಮುಖಿಯಾಗಿ ಸುದ್ದಿಮಾಡ ಬೇಕು. ಸತ್ಯದ ದಾರಿಯಲ್ಲಿ ಧೈರ್ಯ ಗೆಡಬಾರದು ಎಂದು ಕರೆ ನೀಡಿದರು.
ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಜಿಲ್ಲಾ ನಿರ್ದೇಶಕ ಟಿ.ಆರ್. ಪ್ರಭುದೇವ್, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಕಾರ್ಯದರ್ಶಿ ಕೆ.ಕೆ. ನಾಗರಾಜ ಶೆಟ್ಟಿ, ಖಜಾಂಚಿ ಕುಡೆಕಲ್ ಗಣೇಶ್, ಕಾರ್ಯಕ್ರಮದ ಸಂಚಾಲಕ ಪುತ್ತರೀರ ಕರುಣ್ ಕಾಳಯ್ಯ ಮತ್ತಿತರರು ಇದ್ದರು.
ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಪತ್ರಕರ್ತರು ಮತ್ತು ಅವರ ಕುಟುಂಬದವರಿಗಾಗಿ ನಡೆದ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಗಮನ ಸೆಳೆಯಿತು. ತೋಟಗಾರಿಕೆ ಪ್ರಾಯೋಗಿಕ ಕೇಂದ್ರದಲ್ಲಿ ಇರುವ ವೈವಿಧ್ಯಮಯ ಗಿಡಗಳು, ಅವುಗಳ ವೈಶಿಷ್ಟ್ಯತೆಯ ಗಿಡಗಳನ್ನು ಅಭಿವೃದ್ಧಿಪಡಿಸುವ ವಿಧಾನ, ವಿವಿಧ ರೀತಿಯ ಕಸಿ ಪದ್ಧತಿ.. ಹೀಗೆ ಹಲವು ಉಪಯುಕ್ತ ಮಾಹಿತಿಗಳನ್ನು ಕೇಂದ್ರದ ವಿಜ್ಞಾನಿ ಡಾ. ಮುರಳೀಧರ್ ನೀಡಿದರು. ನಂತರ ಇಲ್ಲಿ ಕಲಿತ ವಿಷಯಗಳ ಬಗ್ಗೆ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಯೂ ನಡೆಯಿತು. ಇದೇ ವೇಳೆ ಮಹಿಳೆಯರಿಗಾಗಿ ಲೆಮೆನ್ ರೇಸ್, ಪಾಸಿಂಗ್ ದಿ ಬಾಲ್ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. ಕೊನೆಯಲ್ಲಿ ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ಪಿಪಿಪಿ ಪ್ರದರ್ಶನ ಇತ್ತು.
ಶೈಕ್ಷಣಿಕವಾಗಿ ಸಾಧನೆಗೈದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಾದ ಕೆ.ಜಿ. ಶಿವಾನಿ, ಚೈತನ್ಯ ಸಿ. ಮೋಹನ್, ಚೇತನಾ ರೈ ಬಿ.ಎಸ್.,
ಚಿತ್ತಾರ ಎಸ್.ಪಿ., ಇಂಚರ ಎಸ್.ಪಿ., ತಿಷ್ಯಾ ಪಿ.ಎಸ್., ಮಹಮ್ಮದ್ ಅರ್ಹಾನ್, ಮಹಮ್ಮದ್ ಝೈನ್ ಹಾಗೂ ಮುಕುಂದ್ ಎನ್. ಶ್ರೇಷ್ಠಿ ಅವರಿಗೆ ಈ ಸಂದರ್ಭ ಪ್ರತಿಭಾ ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾಗಿ ಆಯ್ಕೆಗೊಂಡ ಪುತ್ತರೀರ ಕರುಣ್ ಕಾಳಯ್ಯ ಹಾಗೂ ಚೆಟ್ಟಳ್ಳಿಯ ಪತ್ರಿಕಾ ವಿತರಕಿ ಪಿ. ಧನಲಕ್ಷಿö್ಮ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.