ನವದೆಹಲಿ, ಆ. ೬: ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನ್ಖರ್ ಪ್ರತಿಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಸೋಲಿಸಿ ದೇಶದ ೧೬ನೇ ಉಪರಾಷ್ಟçಪತಿಯಾಗಿ ಚುನಾಯಿತಗೊಂಡರು.

ಚಲಾವಣೆಯಾದ ೭೨೫ ಮತಗಳಲ್ಲಿ ಧನ್ಖರ್ ೫೨೮ ಮತಗಳನ್ನು ಪಡೆದರು, ಮಾರ್ಗರೆಟ್ ಆಳ್ವಾ ೧೮೨ ಪಡೆದರು ಮತ್ತು ೧೫ ಮತಗಳು ಅಸಿಂಧುಗೊAಡಿವೆ. ಹಾಲಿ ಉಪರಾಷ್ಟçಪತಿ ಎಂ. ವೆಂಕಯ್ಯ ನಾಯ್ಡು ಅವರ ಅವಧಿ ತಾ. ೧೦ ರಂದು ಕೊನೆಗೊಳ್ಳುವ ಹಿನ್ನೆಲೆ ಚುನಾವಣೆ ನಡೆಯಿತು. ಸಂಸತ್ತಿನ ಉಭಯ ಸದನಗಳ ಸದಸ್ಯರು ಮತ ಚಲಾಯಿಸಿದರು. ತಾ.೧೧ ರಂದು ನೂತನ ಉಪರಾಷ್ಟçಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.