ಮಡಿಕೇರಿ, ಆ. ೫: ನಗರದ ಕಾರ್ಮಿಕ ಅಧಿಕಾರಿ ಅವರ ಕಚೇರಿ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಕಾರ್ಮಿಕ ಅದಾಲತ್-೨.೦ ಹಿನ್ನೆಲೆಯಲ್ಲಿ ಇ-ಶ್ರಮ ನೋಂದಣಿ ಆಂದೋಲನವನ್ನು ಮಾಡಿ, ಕಾರ್ಮಿಕರಿಗೆ ಇ-ಶ್ರಮ ಕಾರ್ಡುಗಳನ್ನು ಕಾರ್ಮಿಕ ಅಧಿಕಾರಿಗಳಿಂದ ವಿತರಿಸಲಾಯಿತು ಹಾಗೂ ವಿವಿಧ ಕಾರ್ಮಿಕರ ಬಾಕಿ ಅರ್ಜಿಗಳ ಕುರಿತು ಚರ್ಚಿಸಲಾಯಿತು.

ಮಡಿಕೇರಿ ತಾಲೂಕಿನಲ್ಲಿರುವ ಶಿಶುಪಾಲನಾ ಕೇಂದ್ರಕ್ಕೆ ಬುಧವಾರ ಹಿರಿಯ ಕಾರ್ಮಿಕ ನಿರೀಕ್ಷಕ ಎಂ.ಎA. ಯತ್ನಟಿ ಭೇಟಿ ನೀಡಿ ಪರಿಶೀಲಿಸಿದರು.