ಮಡಿಕೇರಿ, ಆ. ೫: ಕಳೆದ ಕೆಲವು ದಿನಗಳಿಂದ ಇದ್ದಂತಹ ವಾತಾವರಣದಲ್ಲಿ ಬದಲಾವಣೆಯಾಗಿದ್ದು, ಇದೀಗ ಇಡೀ ಜಿಲ್ಲೆಯಾದ್ಯಂತ ಮತ್ತೆ ಮಳೆ ಬಿರುಸು ಕಾಣುತ್ತಿದೆ. ತಾ. ೩ ರಿಂದ ಆಶ್ಲೇಷಾ ಮಳೆ ನಕ್ಷತ್ರ ಆರಂಭಗೊAಡಿದ್ದು, ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಆಗಾಗ್ಗೆ ಭಾರೀ ಮಳೆ ಸುರಿದರೂ ತಕ್ಷಣದಲ್ಲೇ ಮಳೆ ನಿಂತು ಬಿಸಿಲಿನ ಸನ್ನಿವೇಶವೂ ಕಂಡುಬರುತ್ತಿತ್ತು. ದಕ್ಷಿಣಕನ್ನಡ ಜಿಲ್ಲೆಯ ಗಡಿಯಾದ ಸಂಪಾಜೆ - ಕರಿಕೆ, ಕೊಯನಾಡು ವ್ಯಾಪ್ತಿಯಲ್ಲಿ ಮಾತ್ರ ಭಾರೀ ಮಳೆ ಸುರಿದು ಅನಾಹುತಗಳು ಸೃಷ್ಟಿಯಾಗಿದ್ದವು. ಇದೀಗ ತಾ. ೪ ರ ಅಪರಾಹ್ನದಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ ಮತ್ತೆ ಬಿರುಸುಗೊಂಡಿದೆ. ಕೆಲವೆಡೆಗಳಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದು, ವಿದ್ಯುತ್ ವ್ಯತ್ಯಯದಂತಹ ಪ್ರಕರಣಗಳು ವರದಿಯಾಗಿವೆ. ತಿತಿಮತಿ - ಬಾಳಲೆ ರಸ್ತೆಯಲ್ಲಿ ಭಾರೀ ಮರವೊಂದು ರಸ್ತೆಗೆ ಬಿದ್ದಿದ್ದು, ಇದನ್ನು ತಿತಿಮತಿ ವಲಯ ಅರಣ್ಯ ಸಿಬ್ಬಂದಿಗಳು ತೆರವುಗೊಳಿಸಿದರು.

ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೨.೯೧ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೪.೧೦, ವೀರಾಜಪೇಟೆ ೨.೫೧ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೨.೧೩ ಇಂಚುಗಳಷ್ಟು ಸರಾಸರಿ ಮಳೆ ಸುರಿದಿದೆ.

ಹೋಬಳಿವಾರು

ಕಳೆದ ೨೪ ಗಂಟೆಗಳಲ್ಲಿ ಭಾಗಮಂಡಲ ಹೋಬಳಿಯಲ್ಲಿ ೫.೮೧ ಇಂಚಿನಷ್ಟು ಭಾರೀ ಮಳೆಯಾಗಿದೆ. ನಾಪೋಕ್ಲು ಹೋಬಳಿಯಲ್ಲೂ ೫.೩೩ ಇಂಚು ಮಳೆಯಾಗಿದೆ. ಉಳಿದಂತೆ ಮಡಿಕೇರಿ ೩.೨೫, ಸಂಪಾಜೆ ೨, ವೀರಾಜಪೇಟೆ ೩.೨೦, ಹುದಿಕೇರಿ ೩, ಶ್ರೀಮಂಗಲ ೩.೨೩, ಪೊನ್ನಂಪೇಟೆ ೧.೫೬, ಅಮ್ಮತ್ತಿ ೨.೬೬, ಬಾಳಲೆಯಲ್ಲಿ ೧.೪೧ ಇಂಚು ಮಳೆಯಾಗಿದೆ.

ಸೋಮವಾರಪೇಟೆ ಹೋಬಳಿಯಲ್ಲಿ ೨.೩೦, ಶನಿವಾರಸಂತೆ ೧.೮೮, ಶಾಂತಳ್ಳಿ ೩.೬೦, ಕೊಡ್ಲಿಪೇಟೆ ೩.೦೫, ಕುಶಾಲನಗರ ೧.೪೧, ಸುಂಟಿಕೊಪ್ಪ ೧.೭೬ ಇಂಚು ಮಳೆಯಾಗಿದೆ. ದಕ್ಷಿಣಕೊಡಗಿನ ಬಿ. ಶೆಟ್ಟಿಗೇರಿ, ಬಿರುನಾಣಿ, ಶ್ರೀಮಂಗಲ, ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ನಿನ್ನೆ ಅಪರಾಹ್ನದಿಂದ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ವಿಭಾಗದಲ್ಲಿ ವಿದ್ಯುತ್ ಸಮಸ್ಯೆಯೂ ಉಂಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಸಂಚಾರಕ್ಕೆ ಅಡಚಣೆ

ಕೆಲವೆಡೆ ರಸ್ತೆಗಳಿಗೆ ಅಡ್ಡಲಾಗಿ ಮರಬಿದ್ದ ಪರಿಣಾಮ ಸಂಚಾರಕ್ಕೆ ತೊಡಕು ಉಂಟಾಯಿತು. ಮಡಿಕೇರಿ - ಸೋಮವಾರಪೇಟೆ ರಸ್ತೆ ಮಾರ್ಗದ ಹಟ್ಟಿಹೊಳೆ ಬಳಿ, ತಿತಿಮತಿ - ಬಾಳೆಲೆ ಬಳಿ ಮರ ಕೊಂಬೆ ಬಿದ್ದು ಸಮಸ್ಯೆ ಉಂಟಾಯಿತು. ಬಳಿಕ ಕೊಂಬೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಭಾರೀ ಮಳೆಯಿಂದ ಮಾರ್ಪಡ್ಕ ಬಳಿ ಕೊಚ್ಚಿ ಹೋಗಿದ್ದ ಮೋರಿಯನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ.

ನಾಪೋಕ್ಲು: ವಿಪರೀತ ಮಳೆಯಿಂದಾಗಿ ಕಾಫಿ ತೋಟಗಳಲ್ಲಿ ಕಾಫಿ, ಕರಿಮೆಣಸು, ಅಡಿಕೆ ಸೇರಿದಂತೆ ವಿವಿಧ ತೋಟದ ಫಸಲುಗಳು ಭಾರೀ ಪ್ರಮಾಣದಲ್ಲಿ ಹಲವು ರೋಗಗಳಿಗೆ ತುತ್ತಾಗಿ ಉದುರುತ್ತಿರುವುದರಿಂದ ಬೆಳೆಗಾರರು ಮುಂದಿನ ಫಸಲು ಕೈತಪ್ಪುವ ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆ ಹಾನಿ ಪ್ರಕರಣಗಳಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

ನಾಲ್ಕುನಾಡು ವ್ಯಾಪ್ತಿಯ ನಾಫೋಕ್ಲು, ಕೊಳಕೇರಿ ಸೇರಿದಂತೆ ಕೆಲವು ಗ್ರಾಮಗಳ ಬೆಳೆಗಾರರ ತೋಟಗಳಿಗೆ ಕಾಫಿ ಮಂಡಳಿಯ ಅಧಿಕಾರಿಗಳು ಹಾಗೂ ತಜ್ಞರ ಸಮಿತಿ ಭೇಟಿ ನೀಡಿ ಬೆಳೆಗಾರರೊಂದಿಗೆ ಸಂವಾದ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ. ಈ ಸಂದರ್ಭ ಕಾಫಿ ಬೋರ್ಡ್ನ ಅಧಿಕಾರಿ ಶಿವಕುಮಾರ್ ಹಾಗೂ ತಜ್ಞರ ಸಮಿತಿ ಸದಸ್ಯರು. ಬೆಳೆಗಾರರಾದ ಅಪ್ಪಾರಂಡ ಸುಧೀರ್ ಅಯ್ಯಪ್ಪ, ಶಿವಚಾಳಿಯಂಡ ಜಗದೀಶ್, ಕಾಟಮಣಿಯಂಡ ಮುತ್ತಪ್ಪ, ಉಮೇಶ್, ಕಂಗಾAಡ ಜಾಲಿ ಪೂವಪ್ಪ, ಕನ್ನಂಭಿರ ಸುಧಿ ತಿಮ್ಮಯ್ಯ, ಮನು ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.

ಕುಶಾಲನಗರ: ಕುಶಾಲನಗರ ಸಮೀಪದ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಮಳೆಗಾಲದ ಅವಧಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಪರಿಸ್ಥಿತಿ ಸೃಷ್ಟಿಯಾಗಿದೆ. ಕೈಗಾರಿಕಾ ಬಡಾವಣೆಯ ರಸ್ತೆ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ತೆ ಕಲ್ಪಿಸದೆ ಇರುವ ಕಾರಣ ನೀರು ಕಚೇರಿಯ ಒಳಭಾಗದಲ್ಲಿ ಹರಿಯುತ್ತಿರುವ ದೃಶ್ಯ ಕಂಡುಬAದಿದೆ.

ಕೈಗಾರಿಕಾ ಬಡಾವಣೆ ಉಸ್ತುವಾರಿ ವಹಿಸಿರುವ ಕೈಗಾರಿಕಾಭಿವೃದ್ಧಿ ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯಿತಿಯ ಸಂಪೂರ್ಣ ನಿರ್ಲಕ್ಷö್ಯ ಕಾರಣವಾಗಿದೆ ಎಂದು ಸ್ಥಳೀಯ ಕೈಗಾರಿಕೋದ್ಯಮಿಗಳು ದೂರಿದ್ದಾರೆ.

ಮೇಲ್ಭಾಗದಿಂದ ಹರಿದು ಬರುತ್ತಿರುವ ನೀರು ಕಚೇರಿ ಆವರಣದೊಳಗೆ ನುಗ್ಗುತ್ತಿದ್ದು, ಪ್ರತಿ ಮಳೆಗಾಲದ ಅವಧಿಯಲ್ಲಿ ಇದೇ ರೀತಿ ಪರಿಸ್ಥಿತಿ ಮರುಕಳಿಸುತ್ತಿದೆ ಎಂದು ಇಲ್ಲಿನ ಮರದ ಮಿಲ್ ಮಾಲೀಕ ಎಂ.ಎA. ಸಾಹಿರ್ ತಿಳಿಸಿದ್ದಾರೆ.

ಮಳೆಗಾಲದ ಅವಧಿಯಲ್ಲಿ ನೀರಿನ ನಡುವೆ ಕಾರ್ಮಿಕರು ಯಂತ್ರೋಪಕರಣಗಳನ್ನು ಬಳಸುವ ಸಂದರ್ಭ ವಿದ್ಯುತ್ ಅಪಾಯ ಎದುರಾಗುವ ಸಾಧ್ಯತೆ ಅಧಿಕವಾಗಿದ್ದು, ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ. ಕೆಲವು ಕಾಫಿ ಸಂಸ್ಕರಣಾ ಘಟಕಗಳ ಆವರಣದಲ್ಲಿ ಕೂಡ ಇದೇ ಪರಿಸ್ಥಿತಿ ಉಂಟಾಗಿದೆ. ಅಪಾಯದ ನಡುವೆ ತಾವು ಕೆಲಸ ನಿರ್ವಹಿಸಬೇಕಾಗಿದೆ ಎನ್ನುವುದು ಇಲ್ಲಿನ ಕೂಲಿ ಕಾರ್ಮಿಕರ ಅಳಲಾಗಿದೆ. ಕೂಡಲೇ ಸಂಬAಧಿಸಿದವರು ಕೈಗಾರಿಕಾ ಬಡಾವಣೆಗೆ ಭೇಟಿ ನೀಡಿ ಸಮರ್ಪಕ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಭಾವ್ಯ ಅಪಾಯ ತಪ್ಪಿಸುವಂತೆ ಕೋರಿದ್ದಾರೆ.ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಿನ್ನೆ ಸಂಜೆ ೪ ಗಂಟೆಯಿAದ ಆರಂಭವಾದ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಹಾನಿ ಪ್ರಕರಣಗಳು ವರದಿಯಾಗುತ್ತಿವೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಯೂ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿ ೮.೩೦ರ ಸುಮಾರಿಗೆ ವಿದ್ಯುತ್ ಸ್ಥಗಿತಗೊಂಡಿದ್ದರಿAದ ಸೋಮವಾರಪೇಟೆ ಕಾರ್ಗತ್ತಲಲ್ಲಿ ರಾತ್ರಿ ಕಳೆಯುವಂತಾಗಿತ್ತು.

ಭಾರೀ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ವಾಸದ ಮನೆಗಳಿಗೆ ಹಾನಿಯಾಗುತ್ತಿವೆ. ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದ ಚಂದ್ರಾವತಿ ಅವರಿಗೆ ಸೇರಿದ ವಾಸದ ಮನೆಯ ಹಿಂಭಾಗ ಕುಸಿದುಬಿದ್ದು ನಷ್ಟ ಸಂಭವಿಸಿದೆ. ನಿನ್ನೆ ರಾತ್ರಿ ಮನೆ ಮಂದಿ ಮನೆಯೊಳಗಿದ್ದ ಸಂದರ್ಭ ಅಡುಗೆ ಮನೆಯ ಒಂದು ವಾರ್ಶ್ವ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು ಮಧ್ಯಾಹ್ನ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹಾಲೇರಿ-ಕಾಂಡನಕೊಲ್ಲಿ ಮಾರ್ಗ ಮಧ್ಯೆ ಇರುವ ಬಾಪು ಎಸ್ಟೇಟ್ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಒಣಗಿದ ಬೀಟೆ ಮರ ಬಿದ್ದಿದ್ದರಿಂದ ಅರ್ಧ ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ ನಂತರ ರಸ್ತೆಯು ಸಂಚಾರಕ್ಕೆ ಮುಕ್ತವಾಯಿತು.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಡಿಗಾಣ ಗ್ರಾಮದ ಹೊಳೆ ತುಂಬಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಿನ್ನೆ ಸಂಜೆ ೪ ಗಂಟೆಯಿAದ ಆರಂಭವಾದ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಹಾನಿ ಪ್ರಕರಣಗಳು ವರದಿಯಾಗುತ್ತಿವೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಯೂ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿ ೮.೩೦ರ ಸುಮಾರಿಗೆ ವಿದ್ಯುತ್ ಸ್ಥಗಿತಗೊಂಡಿದ್ದರಿAದ ಸೋಮವಾರಪೇಟೆ ಕಾರ್ಗತ್ತಲಲ್ಲಿ ರಾತ್ರಿ ಕಳೆಯುವಂತಾಗಿತ್ತು.

ಭಾರೀ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ವಾಸದ ಮನೆಗಳಿಗೆ ಹಾನಿಯಾಗುತ್ತಿವೆ. ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದ ಚಂದ್ರಾವತಿ ಅವರಿಗೆ ಸೇರಿದ ವಾಸದ ಮನೆಯ ಹಿಂಭಾಗ ಕುಸಿದುಬಿದ್ದು ನಷ್ಟ ಸಂಭವಿಸಿದೆ. ನಿನ್ನೆ ರಾತ್ರಿ ಮನೆ ಮಂದಿ ಮನೆಯೊಳಗಿದ್ದ ಸಂದರ್ಭ ಅಡುಗೆ ಮನೆಯ ಒಂದು ವಾರ್ಶ್ವ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು ಮಧ್ಯಾಹ್ನ ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಹಾಲೇರಿ-ಕಾಂಡನಕೊಲ್ಲಿ ಮಾರ್ಗ ಮಧ್ಯೆ ಇರುವ ಬಾಪು ಎಸ್ಟೇಟ್ ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಒಣಗಿದ ಬೀಟೆ ಮರ ಬಿದ್ದಿದ್ದರಿಂದ ಅರ್ಧ ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳೀಯರು ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದ ನಂತರ ರಸ್ತೆಯು ಸಂಚಾರಕ್ಕೆ ಮುಕ್ತವಾಯಿತು.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕುಡಿಗಾಣ ಗ್ರಾಮದ ಹೊಳೆ ತುಂಬಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ಭಾಗಮಂಡಲ : ಭಾಗಮಂಡಲ ವ್ಯಾಪ್ತಿಯಲ್ಲಿ ಶುಕ್ರವಾರ ರಭಸದ ಮಳೆ ಸುರಿದಿದೆ. ನಿನ್ನೆ ಮಧ್ಯಾಹ್ನದ ನಂತರ ಬಿರುಸುಗೊಂಡ ಮಳೆ ರಾತ್ರಿ ಧಾರಾಕಾರವಾಗಿ ಸುರಿಯಿತು. ಪರಿಣಾಮ ತ್ರಿವೇಣಿ ಸಂಗಮ ಭರ್ತಿಯಾಗಿದೆ.ನಾಪೋಕ್ಲು ಭಾಗಮಂಡಲ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ರ‍್ಯಾಫ್ಟಿಂಗ್ ವ್ಯವಸ್ತೆ ಕಲ್ಪಿಸಲಾಗಿದೆ. ಪ್ರವಾಹದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.ಪೆರಾಜೆ: ಚೆಂಬು ಗ್ರಾಮದ ಪ್ರಕೃತಿ ವಿಕೋಪದಿಂದ ಮನೆಗಳು ಶಿಥಿಲಗೊಂಡು ವಾಸಕ್ಕೆ ಯೋಗ್ಯವಲ್ಲದ ಚೆಂಬುವಿನ ದಬ್ಬಡ್ಕ ಭಾಗದ, ನಡುಬೆಟ್ಟು ಉಮೇಶ, ಕೊಪ್ಪದ ಬಾಲಕೃಷ್ಣ, ಕೊಪ್ಪದ ಭವಾನಿ ಕುಮಾರ, ಕೊಪ್ಪದ ಪ್ರಕಾಶ ಇವರ ಮನೆಯವರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಊರುಬೈಲಿನಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಕುಶಾಲನಗರ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿ ಕೆರೆಗಳು ತುಂಬಿ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗಿದೆ.

ಪ್ರಸಕ್ತ ನದಿಯಲ್ಲಿ ೧೯ ಅಡಿಗಳಷ್ಟು ನೀರು ಹರಿಯುತ್ತಿದ್ದು, ಇದೇ ರೀತಿ ಮುಂದುವರೆದಲ್ಲಿ ಅಪಾಯದ ಮಟ್ಟ ಮೀರಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಅಧಿಕವಾಗಿದೆ. ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿರುವ ಹಿನ್ನೆಲೆಯಲ್ಲಿ ೧೦ ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಜಲಾಶಯದಲ್ಲಿ ೪ ಅಡಿಗಳಷ್ಟು ನೀರಿನ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಹರಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅಣೆಕಟ್ಟು ಅಧಿಕಾರಿ ಸಿದ್ಧರಾಜು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಕಾರಣ ಯಾವುದೇ ರೀತಿ ಅಪಾಯ ಸಂಭವಿಸದAತೆ ಕಟ್ಟೆಚ್ಚರ ವಹಿಸಲು ಅಣೆಕಟ್ಟು ಅಧಿಕಾರಿಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಸೂಚನೆ ನೀಡಿದ್ದಾರೆ. ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರು ನುಗ್ಗದಂತೆ ಕಾವೇರಿ ಮತ್ತು ಹಾರಂಗಿ ನದಿಯ ನೀರಿನ ಹರಿವಿನ ಬಗ್ಗೆ ೨೪ ಗಂಟೆಗಳ ಕಾಲ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ.

ಮಡಿಕೇರಿ : ಮಳೆಯ ರಭಸಕ್ಕೆ ಮನೆಯ ತಡೆಗೋಡೆ ಜೊತೆಗೆ ಮನೆಯ ಒಂದು ಭಾಗ ಕುಸಿತಗೊಂಡ ಘಟನೆ ಪೆನ್ಷನ್‌ಲೇನ್‌ನಲ್ಲಿ ನಡೆದಿದೆ. ಡ್ಯಾನಿಯಲ್ ಎಂಬವರ ಮನೆಯ ಹಿಂಬದಿ ನಿರ್ಮಿಸಿದ್ದ ಭಾರೀ ಪ್ರಮಾಣದ ತಡೆಗೋಡೆ ಕುಸಿದ ರಭಸದಲ್ಲಿ ಪಕ್ಕದ ಗಂಗಾಧರ್ ಅವರ ಮನೆಯ ಹಿಂಬದಿಯ ಒಂದು ಭಾಗ ಕೂಡ ನೆಲಸಮಗೊಂಡಿದೆ.

ಕುಸಿತದಿAದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ತಡೆಗೋಡೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಕಾರಣ ಮನೆಯೂ ಕುಸಿತಗೊಂಡಿದೆ. ಇದೀಗ ಮನೆಯಲ್ಲಿ ವಾಸಿಸಲು ಸಮಸ್ಯೆಯಾಗಿದೆ. ಹಿಂಬದಿಯ ಭಾಗ ಕುಸಿದಿರುವುದು ಪೂರ್ಣ ಮನೆ ಹಾನಿಯಾಗುವ ಭಯ ಇದೆ ಎಂದು ಮನೆ ಮಾಲೀಕ ಗಂಗಾಧರ್ ನೋವು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಮುಳ್ಳೂರು: ಕಳೆದ ೪ ದಿನಗಳಿಂದ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಗಾಳಿ ಸಮೇತ ಭಾರಿ ಮಳೆಯಾಗುತ್ತಿದೆ. ಹೋಬಳಿ ವ್ಯಾಪ್ತಿಯ ದುಂಡಳ್ಳಿ, ಗೌಡಳ್ಳಿ, ನಿಡ್ತ, ಮಾಲಂಬಿ, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಕಳೆದ ೨ ದಿನಗಳಿಂದ ಬೆಂಬಿಡದೆ ಮಳೆಯಾಗುತ್ತಿದೆ. ಹೋಬಳಿ ವ್ಯಾಪ್ತಿಯಲ್ಲಿ ತಾ. ೧ ರಿಂದ ೪ ರ ವರೆಗೆ ಸರಾಸರಿ ಒಟ್ಟು ೫.೬೬ ಇಂಚು ಮಳೆ ದಾಖಲಾಗಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮತ್ತೆ ಕೆರೆಗಳಲ್ಲಿ ನೀರು ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ಬಾರಿ ಮಳೆಯಾಗುತ್ತಿರುವುದರಿಂದ ಆಲೂರು ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ದೊಡ್ಡಳ್ಳಿ ಕಟ್ಟೆ ಮತ್ತೆ ಭರ್ತಿಯಾಗಿದ್ದು ಕೆರೆಯ ನೀರು ಮೆಗೋಡಿಯಲ್ಲಿ ಜಲಾಶಯದಂತೆ ತುಂಬಿ ಹರಿಯುತ್ತಿದೆ, ಬಾರಿ ಮಳೆಯ ನಡುವೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಡಿಕೇರಿ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಕೆದಮುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋರ ಗ್ರಾಮದಲ್ಲಿ ಭೂಕುಸಿತದಿಂದ ಹಾನಿಯಾಗಬಹುದಾದ ಮನೆಗಳಿಗೆ ಭೇಟಿ ನೀಡಿ ಮಳೆ ಕಡಿಮೆ ಆಗುವವರೆಗೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಆಗುವಂತೆ ಕುಟುಂಬದವರಿಗೆ ಮನವಿ ಮಾಡಲಾಯಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಮತ್ತು ನೋಡಲ್ ಅಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯತ್ ಸದಸ್ಯರು, ಕೆದಮುಳ್ಳೂರು ಪಿಡಿಓ, ಕಾರ್ಯದರ್ಶಿ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮನೆಗಳಿಗೆ ಭೇಟಿ ಮಾಡಿ ಜನರಿಗೆ ಮಳೆ ಕಡಿಮೆಯಾಗುವವರೆಗೂ ಕಾಳಜಿ ಕೇಂದ್ರಕ್ಕೆ ತೆರಳಲು ಕೋರಲಾಯಿತು. ಕೆದಮುಳ್ಳೂರು ಪಂಚಾಯಿತಿಯ ತೋಮರ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಪೆರಾಜೆ: ಸಂಪಾಜೆ ಹೋಬಳಿ ಚೆಂಬು ವೃತ್ತದ ಊರುಬೈಲು, ಚೆಂಬು, ಡಬ್ಬಡ್ಕ, ಮೇಲ್ ಚೆಂಬು ಮತ್ತು ಪೆರಾಜೆ ಗ್ರಾಮಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಹಾಗೂ ಭೂಕುಸಿತಕ್ಕೊಳಗಾದ ಸ್ಥಳಗಳು, ಮಾರ್ಪಡ್ಕ ಸೇತುವೆ, ಆನೆಹಳ್ಳ ಸೇತುವೆ ಹಾಗೂ ದಬ್ಬಡ್ಕ ಸೇತುವೆಗಳು ಹೆಚ್ಚಿನ ಮಳೆಯಿಂದ ಕೊಚ್ಚಿ ಹೋಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿರುವ ಸ್ಥಳಗಳಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಭೇಟಿ ನೀಡಿ ಪರಿಶೀಲಿಸಿದರು.

ಶಾಸಕರು ದಬ್ಬಡ್ಕ ಗ್ರಾಮದ ಕೊಪ್ಪದ ಬಾಲಕೃಷ್ಣ ಮತ್ತು ಎನ್.ಕೆ.ಉಮೇಶ್ ಅವರಿಗೆ ಕ್ರಮವಾಗಿ ರೂ.೧೦,೦೦೦ ಮತ್ತು ೯೫,೧೦೦ ರೂ. ಗಳ ಚೆಕ್ ವಿತರಿಸಿದರು. ಪೆರಾಜೆ ಗ್ರಾಮದ ಉಪೇಂದ್ರ ಮತ್ತು ತಂಗಪ್ಪನ್ ಪುರುಷೋತ್ತಮ್ ನಾಯರ್ ಇವರಿಗೆ ೧೦,೦೦೦ ಗಳ ಚೆಕ್ ವಿತರಿಸಿದರು.

ಮಡಿಕೇರಿ ತಾಲೂಕು ತಹಶೀಲ್ದಾರ್ ಪಿ.ಎಸ್.ಮಹೇಶ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭು, ಉಪ ತಹಶೀಲ್ದಾರರು, ಕಂದಾಯ ಪರಿವೀಕ್ಷಕರಾದ ವೆಂಕಟೇಶ್, ಗ್ರಾಮ ಲೆಕ್ಕಿಗರು ಹಾಗೂ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು. ಮನೆ ಮೇಲೆ ಮರ ಬಿದ್ದು ಹಾನಿ

ಚೆಟ್ಟಳ್ಳಿ : ಚೆಟ್ಟಳ್ಳಿ ಸಮೀಪದ ಪೊನ್ನತ್ಮೊಟ್ಟೆ ಎಂಬಲ್ಲಿ ಅಜೀಜ್ ಮತ್ತು ಫಾತಿಮಾ ದಂಪತಿಯ ಮನೆಯ ಹಿಂಬದಿಯ ಬರೆಕುಸಿದು ಬರೆಯಲ್ಲಿದ್ದ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ.

ಕಳೆದ ಹಿಂದಿನ ದಿನಗಳ ಮಳೆಯಲ್ಲಿ ಮನೆಯ ಹಿಂಬದಿ ಅಡಿಗೆ ಮನೆಯ ಬಳಿ, ನೆಲ ಬಿರುಕು ಉಂಟಾಗಿ, ಮನೆಯು ಅಪಾಯ ಸ್ಥಿತಿಯಲ್ಲಿದ್ದುದರಿಂದ ಮನೆಯಲ್ಲಿದ್ದ ಆರು ಜನರನ್ನು ಪೊನ್ನತ್ಮೊಟ್ಟೆ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಕಂದಾಯ ಇಲಾಖೆಯವರು ಸ್ಥಳಾಂತರಿಸಿದ್ದರು. ಆದರೆ ಕೆಲದಿನಗಳ ಬಳಿಕ ಮಳೆ ಕಡಿಮೆಯಾದ ಪರಿಣಾಮ, ಮರಳಿ ಕುಟುಂಬ ಮನೆಗೆ ವಾಪಸ್ ತೆರಳಿದ್ದರು. ಆದರೆ, ನಿನ್ನೆ ರಾತ್ರಿ ಗ್ರಾಮದಲ್ಲಿ ಸುರಿದ ಭಾರೀ ಮಳೆಗೆ ಬರೆ ಕುಸಿತ ಉಂಟಾಗಿದ್ದು ಮನೆಯಲ್ಲಿದ್ದ ಸಾಮಗ್ರಿಗಳು ಹಾಳಾಗಿವೆ ಮನೆಯು ಅಪಾಯದ ಸ್ಥಿತಿಗೆ ತಲುಪಿರುವುದರಿಂದ ವಾಸಕ್ಕೆ ಯೋಗ್ಯವಿಲ್ಲವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಾದ ನಾಗೇಂದ್ರ, ಸುಶೀಲ ಪಂಚಾಯಿತಿ ಸದಸ್ಯರಾದ ರಶಿನ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.